ಕೆಲವೇ ನಿಮಿಷಗಳಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್ ತಲುಪಲಿರುವ ಗಣಪ

ಸುದ್ದಿಲೈವ್/ಶಿವಮೊಗ್ಗ

ನಗರದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಕೆಲವೇ ನಿಮಿಷಗಳಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್ ತಲುಪಲಿದ್ದು ಭಕ್ತರ ಸಂಖ್ಯೆ ನಿಧಾನವಾಹಿ ಹೆಚ್ಚಳವಾಗಲಿದೆ.
ವಾದ್ಯಗಳಿಂದಿಗೆ ಹೊರಟ ಗಣಪತಿ ಉತ್ಸವ ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಡೊಳ್ಳುವಾದನಕ್ಕೆ ಮಹಿಳೆಯರು ಪುರುಷರಾದಿಯಾಗಿ ಸಕ್ಕತ್ ಸ್ಟೆಪ್ಸ್ ಹಾಕಲಾಗುತ್ತಿದೆ. ರಾಜಬೀದಿ ಉತ್ಸವ ಕಳೆದುಪಡೆದುಕೊಂಡಿದೆ.
ಕೇಸರಿ ಧ್ವಜಗಳುರಾರಾಜಿಸುತ್ತಿವೆ. ಸಾಚರ್ಕರ್ ಅವರ ಧ್ವಜ ಸಹ ಇದೇ ವೇಳೆ ಪ್ರದರ್ಶಿಸಲಾಗುತ್ತಿದೆ. ಯುವಕರು ಮತ್ತು ಯುವತಿಯರಿಂದ ಕೂಡಿದ ಈ ಮೆರವಣಿಗೆ 2 ಗಂಟೆಗೆ ರಾಮಣ್ಣಸಶ್ರೇಷ್ಠಿ ಗಣಪತಿ ದೇವಸ್ಥಾನ ತಲುಪುವ ನಿರೀಕ್ಷೆ ಇದೆ.
ಇಲ್ಲಿ ಪಾಲಿಕೆ ಸದಸ್ಯ ಹೆಚ್ಸಿ ಯೋಗೀಶ್ ಅವರಿಂದ 350 ಕೆಜಿ ಕೊಬ್ವರಿ ಹಾರ ಗಣಪನಿಗೆ ವಿಸರ್ಜಿಸಲಾಗುತ್ತಿದೆ. ಈ ವೇಳೆ ಬಹುತೇಕ ಪಾಲಿಕೆ ಸದಸ್ಯರು, ಕಾಂಗ್ರೆಸ್ ನುಖಂಡರು ಉಪಸ್ಥಿತರಿದ್ದಾರೆ. ಪೇಪರ್ ಶಾಟ್ ಗಳ ಸಿಡಿತ ಗಣಪತಿ ಮೆರವಣಿಗೆಯಲ್ಪಿ ಗಮನ ಸೆಳೆದಿದೆ.
ಇದನ್ನೂ ಓದಿ-https://suddilive.in/2023/09/28/ಹಿಂದೂ-ಮಹಸಭಾ-ಗಣಪತಿ-ಉತ್ಸವಕ/
