ಸ್ಥಳೀಯ ಸುದ್ದಿಗಳು

ಡಿವೈಎಸ್ಪಿ ಮನೆಯ ಸ್ಟ್ರೀಟ್ ಲೈಟೇ ಆನ್ ಆಗ್ತಾ ಇಲ್ಲ ಯಾಕೆಗೊತ್ತಾ?

ಸುದ್ದಿಲೈವ್/ತೀರ್ಥಹಳ್ಳಿ

ತೀರ್ಥಹಳ್ಳಿಯ ಖದರೇ ಬೇರೆ. ತೀರ್ಥಹಳ್ಳಿಯ ರಾಜಕಾರಣವೂ ಬೇರೆ ರೀತಿ ಇದೆ. ಸೇಡಿನ ರಾಜಕಾರಣ ಕಣ ಕಣದಲ್ಲೂ ಬೆರೆತಿದೆ. ಏನೇ ನಡೆದರೂ ರಾಜಕಾರಣದ ಬಣ್ಣ ಪಡೆದುಕೊಂಡಿರುತ್ತೆ.

ಮೋಟಾರ್ ವಾಹನ ಕಾಯ್ದೆ ಉಲ್ಲಂಘಿಸಿದ ಆರೋಪವೊಂದು ಡಿವೈಎಸ್ಪಿ ಅವರ ಮನೆಯ ವಾರ್ಡ್ ನ ಸ್ಟ್ರೀಟ್ ಆನ್ ಆಗದಂತೆ ನೋಡಿಕೊಳ್ಳಲಾಯಿತಾ ಎಂಬ ಅನುಮಾನಕ್ಕೆ ಕಾರಣವಾಗಿದೆ.  ಇಂತಹದ್ದೊಂದು ಅಪರೂಪದ ಘಟನೆ ತೀರ್ಥಹಳ್ಳಿಯಲ್ಲಿ  ನಡೆದಿದೆ. ಪುರಸಭೆಯ ಸದಸ್ಯರೊಬ್ಬರಿಗೆ ಪೊಲೀಸ್ ಇಲಾಖೆ ಐಎಂವಿ ಅಡಿ ದಂಡ ವಿಧಿಸಿದಕ್ಕೆ ಈ ಪ್ರಕರಣ ನಡೆಯಿತಾ ಎಂಬ ಶಂಕೆ ಹರಿದಾಡಿದೆ.

ಬೆಟ್ಟಮಕ್ಕಿಯ ವಾರ್ಡ್ ನಲ್ಲಿರುವ ಡಿವೈಎಸ್ಪಿ ಮನೆಯ ಸ್ಟ್ರೀಟ್ ಲೈಟ್ ಕಳೆದ ಮೂರುನಾಲ್ಕು ದಿನಗಳಿಂದ ಬೆಳಗುತ್ತನೇ ಇಲ್ಲ. ಕಾರಣ ಸದಸ್ಯನೋರ್ವನ ಐಎಂವಿ ಪ್ರಕರಣ ಎನ್ನಲಾಗುತ್ತಿದೆ. ಈ ರೀತಿಯ ಜಿದ್ದಿನ ರಾಜಕಾರಣ ಅವಶ್ಯಕತೆ ಇದೆಯಾ ಎಂಬುದು ಚರ್ಚೆಯಾಗಬೇಕಿದೆ.

ಸುಸಂಸ್ಕೃತರ ನಾಡಾಗಿರುವ ತೀರ್ಥಹಳ್ಳಿಯಲ್ಲಿ ಈ ರೀತಿಯ ಪ್ರಕರಣ ನಡೆಯುತ್ತಿರುವುದು ನಿಜವೇ ಆದರೆ ನಾಚಿಕೆಗೇಡಿ ಪ್ರಕರಣವೆನ್ನಬಹುದು.

ಇದನ್ನೂ ಓದಿ-https://suddilive.in/archives/3749

Related Articles

Leave a Reply

Your email address will not be published. Required fields are marked *

Back to top button