ಕ್ರೈಂ ನ್ಯೂಸ್

ದಾಖಲೆ ಇಲ್ಲದ ಹಣ ವಶ-ಅನುಮತಿ ಪಡೆಯದೆ ಊಟ ವ್ಯವಸ್ಥೆ : ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆ ಹಿನ್ನೆಲೆ ಮತಕ್ಷೇತ್ರವಾರು ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಿದ್ದು, ಮಾ.27 ರಂದು ಶಿಕಾರಿಪುರ-115 ಮತ ಕ್ಷೇತ್ರ ವ್ಯಾಪ್ತಿಯ ಕವಾಸ್‍ಪುರ ಚೆಕ್‍ಪೋಸ್ಟ್‍ನಲ್ಲಿ ಹನುಮಂತಪ್ಪ ಎಂಬುವವರು ದಾಖಲೆ ಇಲ್ಲದೆ ಹೊಂದಿದ್ದ ರೂ.73,736 ಗಳನ್ನು ಎಸ್‍ಎಸ್‍ಟಿ ತಂಡ ವಶಪಡಿಸಿಕೊಂಡಿದೆ.

ಭದ್ರಾವತಿ-112 ಮತಕ್ಷೇತ್ರ ವ್ಯಾಪ್ತಿಯ ಹಳ್ಳಿಕೆರೆ ಚೆಕ್‍ಪೋಸ್ಟ್‍ನಲ್ಲಿ ರಾಮು ಮತ್ತು ಕೆ.ತೀರ್ಥಕುಮಾರ್ ಎಂಬುವವರು ಹೊಂದಿದ್ದ ರೂ.1,25,000 ಹಣವನ್ನ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ.

ಹಾಗೂ ಸಾಗರ-117 ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಊಟವನ್ನು ಸರಬರಾಜು ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಪಕ್ಷದ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಮದ್ಯ ವಶ

ಲೋಕಸಭಾ ಚುನಾವಣೆ ಹಿನ್ನೆಲೆ ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಮತ್ತು ಮಾರಾಟವನ್ನು ಪರಿಶೀಲಿಸಲಾಗುತ್ತಿದ್ದು ಮಾ.27 ರಂದು ಪೊಲೀಸ್ ಇಲಾಖೆ ವತಿಯಿಂದ ರೂ.1336.38 ಮೊತ್ತದ 3.81 ಲೀ., ಅಬಕಾರಿ ಇಲಾಖೆಯಿಂದ ರೂ.9487 ಮೊತ್ತದ 21.14 ಲೀ ಒಟ್ಟು ರೂ. 10823.68 ಮೌಲ್ಯದ 24.95 ಲೀ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ-https://suddilive.in/archives/11648

Related Articles

Leave a Reply

Your email address will not be published. Required fields are marked *

Back to top button