ಸ್ಥಳೀಯ ಸುದ್ದಿಗಳು

ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರಿಗೆ ಗುಂಡಿಟ್ಟು ಹೊಡೆಯಿರಿ-ಬೇಳೂರು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಮಾಜಿ ಸಚಿವ ಕುಮಾರ್ ಬಂಗಾರಪ್ಪನವರನ್ನ ಕರೆತರುವ ಪ್ರಯತ್ನ ಮುರಿದು ಬಿದ್ದಿದೆ ಎಂದು ಶಾಸಕ ಗೋಪಾಲ್ ಕೃಷ್ಣ ಬೇಳೂರು ಸ್ಪಷ್ಟಪಡಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಗ್ಗ ಹಾಕಿ ತರುವ ಪ್ರಯತ್ನ ನಡೆದಿತ್ತು. ಹಗ್ಗಕಟ್ಟಾಗಿದೆ. ಇನ್ನು ಸುತ್ತಿಕೊಂಡು ಸುತ್ತಿಕೊಂಡು ಕರೆತರಬೇಕು ಎಂದು ಮಾತನಾಡಿದರು. ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲೂ ಕಾಣಿಸುತ್ತಿಲ್ಲ. ನಮ್ಮ ಕಡೆಯೂ ಬರುತ್ತಿಲ್ಲ. ಏನು ಮಾಡಲಿದ್ದಾರೆ ಎಂಬುದು ಅವರ ನಡೆ ನಿಗೂಢವಾಗಿದೆ ಎಂದು ತಿಳಿಸಿದರು.

ಶರಾವತಿ ಸಂತ್ರಸ್ತರಿಗೆ ಖಾಯಂ ನಿವೇಶನ ಕೊಡಲು ಇಂದು ಶಿವಮೊಗ್ಗದ ಡಿಸಿ ಕಚೇರಿಯಲ್ಲಿ ಸಭೆ ನಡೆದಿದೆ. ಅಡತಡೆಗಳು ಬಹಳ ಇವೆ. ಆದರೆ ವರದಿ ತೆಗೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಲಿದ್ದೇವೆ. ಡಿಸಿಯವರು ಒಂದು ದಿನ ವರದಿಕೊಡಲು ಸಮಯಯಾವಕಾಶ ಕೇಳಿದ್ದಾರೆ. ಸಮಯ ನೀಡಲಾಗುವುದು ಎಂದರು.

ಅದು ಬಿಜೆಪಿ ಸನಾವೇಶ

ನಾಳೆಯ ಸಮಾವೇಶಕ್ಕೆ ನಾನು ಹೋಗುವುದಿಲ್ಲ.‌ಅವರು ನನ್ನನ್ನ ಕರೆದಿಲ್ಲ.ಸಾಗರದಲ್ಲಿ ಶಕ್ತಿಸಾಗರ ಸಂಗಮ ಕಾರ್ಯಕ್ರಮ ನಡೆಯುತ್ತಿದೆ. ಇದು ಪಕ್ಷಾತೀತ ಈಡಿಗರ ಸಮಾವೇಶ ಎಂದು ಹೇಳಲಾಗುತ್ತಿದ್ದರು.‌ಕೆಲವರು ಬಿಜೆಪಿ ಸಮಾವೇಶ ಎನ್ನುತ್ತಿದ್ದಾರೆ. ನಾವು ಬೆಂಗಳೂರಿನಲ್ಲಿ ಪಕ್ಷಾತೀತವಾಗಿ ಸಮಾವೇಶ ನಡೆಸಿದ್ವಿ, ಸಾಗರದಲ್ಲಿ ನಡೆಯುತ್ತಿರುವುದು ಈಡಿಗರದ್ದೋ ಅಥವಾ ಬಿಜೆಪಿಯ ಸಮಾವೇಶವೋ ಕಾದು ನೋಡಬೇಕಿದೆ ಎಂದರು.

ಪಾಕ್ ಪರ ಘೋಷಣೆ-ತಪ್ಪಿತಸ್ಥರನ್ನ ಗುಂಡಿಕ್ಕಿ ಕೊಲ್ಲಿ

ಪಾಕ್ ಪರ ಘೋಷಿಸಿದವರನ್ನ‌ ಗುಂಡಿಟ್ಟು ಹೊಡೆಯಿರಿ. ಇದು ಭಾರತ ದೇಶ ಈ ದೇಶದಲ್ಲಿ ಪಾಕ್ ಪರ‌ ಘೋಷಣೆ ಸಹಿಸೊಲ್ಲ. ತನಿಖೆ ನಡೆಸಿ ಆದಷ್ಟು ಬೇಗ ಗುಂಡಿಕ್ಕಿ ಕೊಲ್ತೀರೋ ಅಥವಾ ಕಠಿಣ ಕ್ರಮ ಜರುಗಿಸುತ್ತೀರೋ ಸರ್ಕಾರಕ್ಕೆ ಬಿಟ್ಟಿದ್ದು. ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಮೇಶ್ವರಂ ಕೆಫೆ ಬಳಿ ನಡೆದ‌ಸ್ಪೋಟ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಸಚಿವ ಶರಣ್ ಪ್ರಕಾಶ್ ಪಾಟೀಲ್ ಬಾಂಬ್ ಸ್ಪೋಟ ಸಿಲ್ಲಿ ಮಾಟ್ರು ಎಂದಿರುವುದು ತಪ್ಪು. ಆದರೆ‌ಬಿಜೆಪಿಯ ಸಂಸದರು ಸಂಸತ್ ನಲ್ಲಿ ಸ್ಮೋಕ್ ಬಾಂಬ್ ಸ್ಪೊಟಿಸಲು ಪಾಸ್ ಕೊಟ್ಟಿದ್ದು ಅದು ಭಯೋತ್ಪಾದಕರಿಗೆ ಸಹಾಯ ಮಾಡಿದಂತೆ ಆಗಲಿಲ್ವಾ ಎಂದು ಪ್ರಶ್ನಿಸಿದರು

ಇದನ್ನೂ ಓದಿ-https://suddilive.in/archives/10017

Related Articles

Leave a Reply

Your email address will not be published. Required fields are marked *

Back to top button