ಕ್ರೈಂ ನ್ಯೂಸ್

ಮಾನವೀಯತೆ ಮೆರೆದಿದ್ದ ಪೊಲೀಸರನ್ನೇ ಅಕ್ರಮ ಬಂಧನದಲ್ಲಿರಿಸಲು ಯತ್ನಿಸಿದ್ದ ಆ ರೌಡಿ!

ಸಂಚಾರಿ ಪೊಲೀಸರನ್ನ‌ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯಾಸೀನ್ ಖುರೇಷಿ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ಆತನನ್ನ ಪೊಲೀಸರೆ ದವಾಖಾನೆಗೆ ಸಾಗಿಸಿದ್ರು. ಆದರೆ ಆತನ ಜೊತೆ ಬಂದಿದ್ದ ಕಡೇಕಲ್ ಅಬೀದ್ ಪೊಲೀಸರೇ ಈ ಅಪಘಾತಕ್ಕೆ ಕಾರಣ ಎಂದು ಅಕ್ರಮ ಬಂಧನದಲ್ಲಿರಿಸಿದ್ದ. ಈ ಪ್ರಕರಣ ಕೋಟೆ ಠಾಣೆಯಲ್ಲಿ ಸುಮೋಟೋ ದೂರು ದಾಖಲಾಗಿದೆ.

ಸುದ್ದಿಲೈವ್/ಶಿವಮೊಗ್ಗ

ಸಂಚಾರಿ ಪೊಲೀಸರೇ ಯಾಸೀನ್ ಖುರೇಷಿಗೆ ಹೊಡೆದಿದ್ದು ಎಂದು ಆರೋಪಿಸಿ ಪೊಲೀಸರನ್ನೇ ಸ್ವಲ್ಪ ಹೊತ್ತು ಅಕ್ರಮ ಬಂಧನದಲ್ಲಿರಿಸಿದ್ದ ಕಡೇಕಲ್‌ಅಬೀದ್ ಮತ್ತು ಇತರೆ ಇಬ್ಬರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

ರೌಡಿ ಶೀಟರ್ ಯಾಸಿನ್ ಖುರೇಷಿ, ಕಡೇಕಲ್ ಅಬೀದ್ ಮತ್ತು ವಾಸಿಂ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿ ದೂರು ದಾಖಲಾಗಿದೆ. ಡಿ.30 ರಂದು ಸಂಜೆ ಸುಮಾರು 05-30 ಗಂಟೆ ಸಮಯದಲ್ಲಿ  ಸಂಚಾರಿ ಪೊಲೀಸ್ ಸಮವಸ್ತ್ರದಲ್ಲಿ ಪ್ರಭು ಎಂಬುವರು ಇಲಾಖಾ ಮೋಟಾರ್ ಬೈಕ್ ಕೆಎ-14-ಜಿ-1265 ರ ಭದ್ರಾ-04 ವಾಹನದಲ್ಲಿ ಬಿ.ಹೆಚ್ ರಸ್ತೆಯ ಕರ್ನಾಟಕ ಸಂಘ ಡಯಟ್ ಕ್ರಾಸ್ ಹತ್ತಿರ ಬಿ,ಹೆಚ್ ರಸ್ತೆಯಲ್ಲಿ ಸಂಚಾರ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದರು.

ಕಡೇಕಲ್ ಅಬೀದ್ ನನ್ನ ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡು ಬಂದ ರೌಡಿ ಶೀಟರ್ ಯಾಸೀನ್ ಖುರೇಷಿ  ಕೃಷ್ಣ ಕೆಫೆ ಕಡೆಯಿಂದ ಶಿವಪ್ಪನಾಯಕ ವೃತ್ತದ ಕಡೆಗೆ ಹೋಗುತ್ತಿದ್ದವನು ಡಯಡ್ ಕ್ರಾಸ್ ಬಳಿ ನಿಂತಿದ್ದ ಕೆಎ-14-ಜಿ-0914 ಇಲಾಖಾ ಜೀಪನ್ನು ನೋಡಿ ಇದ್ದಕ್ಕಿದ್ದಂತೆ ಬೈಕನ್ನು ವಾಪಸ್ ತಿರುಗಿಸಲು ಹೋಗಿ ಬೈಕ್ ಸಮೇತ ಕೆಳಗೆ ಬಿದ್ದಿದ್ದಾನೆ. ಹಿಂಬದಿಯಲ್ಲಿ ಕುಳಿತಿದ್ದ ಅಬೀದ್ ಹಾರಿಕೊಂಡಿದ್ದನು.

ಕೆಳೆಗೆ ಬಿದ್ದಿದ್ದ ಯಾಸೀನ್ ಖುರೇಷಿಯನ್ನ  ಎತ್ತಲು ಹೋದ ಟ್ರಾಫಿಕ್ ಪೊಲೀಸ್ ಪ್ರಭುವಿನ ಮೇಲೆ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಕಡೇಕಲ್ ಅಬೀದ್ ಟ್ರಾಫಿಕ್ ಪೊಲೀಸರದ್ದು ಅತಿಯಾಗಿದೆ. ನಮ್ಮ ಹುಡುಗನನ್ನು ಟ್ರಾಫಿಕ್ ಪೊಲೀಸರೇ ಹೊಡೆದಿದ್ದಾರೆ ಎಂದು ಸೀನ್ ಕ್ರಿಯೇಟ್ ಮಾಡಿದ್ದಾನೆ.  ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರು ಸೇರಿ ಖುರೇಷಿಯನ್ನ ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಖುರೇಷಿಯನ್ನ ಆಸ್ಪತ್ರೆಗೆ ಸಾಗಿಸಲಾಗಿದೆ.

ಆದರೆ ಸ್ಥಳದಲ್ಲಿದ್ದ ಯಾಸೀನ್‌ ಖುರೇಷಿಯ ಸಹಚರರಾದ ಕಡೇಕಲ್ ಆಬೀದ್ ಹಾಗೂ ವಸೀಂ ಮತ್ತು ಇತರರು ಸೇರಿ ನಮ್ಮ ಹುಡುಗನಿಗೆ ಪೊಲೀಸರೇ ಹೊಡೆದಿದ್ದಾರೆ ಎಂದು ಸಾರ್ವಜನಿಕರನ್ನು ಪೊಲೀಸರ ಮೇಲೆ ಎತ್ತಿಕಟ್ಟಿ ಪ್ರಚೋದಿಸಿ ಪ್ರಭುವಿನ ವಿರುದ್ಧ ಅವ್ಯಾಚ್ಯ ಶಬ್ದಗಳನ್ನ ಬಳಸಿ ಪ್ರಭುವನ್ನ ಎಳೆದಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಇದರಿಂದ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ, ಬಿಡಿಸಲು ಬಂದ ಎಎಸ್‌ಐ ಶ್ರೀನಿವಾಸ ಹಾಗೂ ಸಿಬ್ಬಂದಿಗಳಾದ ಮಡ್ಡಿ ಹಾಲೇಶಪ್ಪ ಹಾಗೂ ರವಿಕುಮಾ‌ರ್ ರವರಿಗೂ ಏರು ಧ್ವನಿಯಲ್ಲಿ ಮಾತನಾಡಿದ್ದಲ್ಲದೇ ಪ್ರಭುವನ್ನ ಸ್ಥಳದಲ್ಲಿ ಕೆಲ ನಿಮಿಷಗಳ ಕಾಲ ನೀನು ಎಲ್ಲಿಗೂ ಹೋಗುವಂತಿಲ್ಲವೆಂದು ಅಕ್ರಮ ಬಂಧನದಲ್ಲಿರಿಸಿದ್ದಾನೆ.

ನಂತರ ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ಕುಮಾರ್ ಮಠಪತಿ ಸ್ಥಳಕ್ಕೆ ಬಂದು ಅಕ್ರಮ ಕೂಟವನ್ನು ಚದುರಿಸಿ ಪ್ರಭುವನ್ನ ಪಾರು ಮಾಡಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದ ಕಡೇಕಲ್ ಆಬೀದ್, ವಾಸೀಂ ಹಾಗೂ ಇತರೆಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/8124

Related Articles

Leave a Reply

Your email address will not be published. Required fields are marked *

Back to top button