ಕ್ರೈಂ ನ್ಯೂಸ್

ಸರ್ಕಾರಿ ಜಾಗದಲ್ಲಿ ಅಕ್ರಮ ಕಲ್ಲುಕೋರೆ ನಡೆಸಲು ಸ್ಪೋಟಕ ವಸ್ತುಗಳು ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಹುಣಸೋಡು ಸ್ಪೋಟಗೊಂಡ ನಂತರ ಮೊದಲಬಾರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತೊಂದು ಬ್ಲಾಸ್ಟ್ ಆಗುವ ಮುನ್ನ ಎಚ್ಚೆತ್ತುಕೊಂಡು ಎಫ್ ಐ ಆರ್ ದಾಖಲಿಸಿದೆ. ಅಂದರೆ ಕದ್ದುಮುಚ್ಚಿ ಕಲ್ಲುಕೋರೆಗಳನ್ನ ಸ್ಪೋಟಿಸಿ ಅಕ್ರಮ ಸಾಗಾಣಿಕೆ ಮಾಡಲಾಗುತ್ತಿದೆಯಾ ಎಂಬ ಅನುಮಾನಕ್ಕೆಈ ಎಫ್ ಐಆರ್ ಸಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಸರ್ಕಾರದ ಸ್ಥಳದಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಸ್ಪೋಟಕಗಳನ್ನ  ಬಳಸಿಕೊಂಡು ಬಂಡೆಕಲ್ಲುಗಳನ್ನು ಬಾಸ್ಟ್ ಮಾಡುವ ಹುನ್ನಾರವೊಂದು ಬಯಲಾಗಿದೆ. ಘಟನೆ ವಿರುದ್ಧ ಗಣಿ ಮತ್ತು ಭೂ ವಿಜ್ಞಾನದ ಅಧಿಕಾರಿ ಅವಿನಾಶ್ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೆ.29 ಬೆಳಿಗ್ಗೆ 11-00 ಗಂಟೆಗೆ ಶಿವಮೊಗ್ಗ ತಾ|| ಮತ್ತೂರು ಗ್ರಾಮ ಪಂಚಾಯ್ತಿಯ ಮಂಡೇನಕೊಪ್ಪ ಗ್ರಾಮದ ಸರ್ವೆ ನಂ 248 ರ ಪಕ್ಕದಲ್ಲಿರುವ ಬುಗರ್ ಹುಕುಂ ಗೆ ಸೇರಿದ ಖಾಲಿ ಜಮೀನಿನ ಸ್ಥಳದಲ್ಲಿ ಅಕ್ರಮವಾಗಿ ಬಂಡೆಕಲುಗಳನ್ನು ಸಾಗಿಸಲು ಸ್ಪೋಟಕ ವಸ್ತುಗಳನ್ನ ಅಳವಡಿಸಿರುವುದು ಪತ್ತೆಯಾಗಿದೆ.  ಬ್ಯಾಸ್ಟ್ ಮಾಡಿ ಕಲ್ಲುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸಲಾಗುತ್ತಿದೆ ಎಂದು  ಗಣಿ ಇಲಾಖೆ ಅಧಿಕಾರಿಗೆ ಮಾಹಿತಿ ಲಭ್ಯವಾಗಿದೆ.

ಕಲ್ಲು ಬಂಡೆಗಳನ್ನು ಸ್ಫೋಟಿಸುವ ಸಲುವಾಗಿ ಸ್ಫೋಟಕ ವಸ್ತುಗಳನ್ನು ಬಂಡೆ ಕಲ್ಲುಗಳ ಮಧ್ಯೆ ಅಳವಡಿಸಿರುವುದಾಗಿಯೂ ಸಹ ಮಾಹಿತಿ ಬಂದಿದೆ. ಮಾಹಿತಿ ಬಂದ ಸ್ಥಳಕ್ಕೆ ಹೋದ ಅಧಿಕಾರಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಬಂಡೆ ಕಲ್ಲುಗಳನ್ನು ಬ್ಲಾಸ್ಟ್ ಮಾಡುವ ಸಂಬಂಧ ಬಂಡೆಕಲ್ಲುಗಳ ಮಧ್ಯೆ ಅಲ್ಲಲ್ಲಿ ಸ್ಫೋಟಕ ವಸ್ತುಗಳನ್ನು ಅಳವಡಿಸಿರುವುದು ಕಂಡು ಬಂದಿರುತ್ತದೆ.

ಮತ್ತು ಸ್ಥಳದ ಬಗ್ಗೆ ವಿಚಾರ ಮಾಡಿದಾಗ ಸ್ಥಳವು ಸಕಾರಿ ಜಾಗವಾಗಿರುವುದಾಗಿ ತಿಳಿದು ಬಂದಿದೆ. ಸರ್ಕಾರಿ ಜಾಗದಲ್ಲಿ ಯಾರೋ ಅಪರಿಚಿತರು ಅನಧೀಕೃತವಾಗಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಕಲ್ಲುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಕಲ್ಲು ಬಂಡೆಗಳನ್ನು ಸ್ಫೋಟಿಸಲು ಸ್ಪೋಟಕಗಳನ್ನು ಅಳವಡಿಸಿರುವುದು ಕಂಡು ಬಂದಿದೆ.

ಸ್ಥಳದಲ್ಲಿ ಸ್ಪೋಟಕ ವಸ್ತುಗಳನ್ನು ಅಳವಡಿಸಿರುವವರ ಬಗ್ಗೆ ಅಧಿಕಾರಿ ಅವಿನಾಶ್ ತುಂಗ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/9957

Related Articles

Leave a Reply

Your email address will not be published. Required fields are marked *

Back to top button