ರಾಜ್ಯ ಸುದ್ದಿಗಳು

ಅಖಾಡದಿಂದ ಹಿಂದೆ ಸರಿದರೆ ಸಿಗಂದೂರು ದೇವಿ ಮೆಚ್ಚುತ್ತಾಳಾ?ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ನಡೆಯುವ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಪ್ರಧಾನಿ ಫೋನ್ ಮಾಡುದ್ರೆ ಈಶ್ವರಪ್ಪ ವಾಪಾಸ್ ಆಗ್ತಾರೆ ಎಂಬ ಮಾತು ಕೇಳಿಬಂದಿತ್ತು. ನಾನು ಮೋದಿ ಕಾರ್ಯಕ್ರಮಕ್ಕೆ ಹೋಗಿಲ್ಲ. ಹಾಗಾಗಿ ನನ್ನ ಸ್ಪರ್ಧೆ ಖಚಿತ ಎಂದು ಈಶ್ವರಪ್ಪ ತಮ್ಮ ಬೆಂಬಲಿಗರಿಗೆ ಭರವಸೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಶಿವಮೊಗ್ಗ ಗ್ರಾಮಾಂತರ‌ ಭಾಗದ ಕಾರ್ಯಕರ್ತರ ಸಭೆಯ್ನ ತಮ್ಮ ಮನೆಯಲ್ಲಿಯೇ ನಡೆಸಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ಆತಂಕವಿತ್ತು. ಮೋದಿ ಅವರ ಒಂದು ಫೋನ್ ಗೆ ಈಶ್ವರಪ್ಪ ತಮ್ನ ಅಖಾಡ ಖಾಲಿ ಮಾಡಿಬಿಡುತ್ತಾರೆ ಎಂಬ ಹೆದರಿಕೆ ಇತ್ತು. ಆದರೆ ಕಾರ್ಯಕರ್ತರಿಗೆ ಅಪಮಾನ ಆಗಲು ಯಾವತ್ತೂ ಬಿಡಲ್ಲ ನೂರಕ್ಕೆ ನೂರು ಪರ್ಸೆಂಟ್ ನನ್ನ ಸ್ಪರ್ಧೆ  ಖಚಿತ. ಕೇವಲ ಚುನಾವಣೆ ನಡೆಯೊದಲ್ಲ. ಈ ಬಾರಿ ಚುನಾವಣೆ ಗೆಲ್ಲಲೇ ಬೇಕು ಎಂದು ಕರೆ ನೀಡುದರು.

ಯಡಿಯೂರಪ್ಪನವರು ಮತ್ತು ನೀವು, ಅಣ್ಣ ತಮ್ಮನ ರೀತಿ ಇದ್ದೀರಿ ಎಂದು ಕೆಲ ಕಾರ್ಯಕರ್ತರು ಕಣ್ಣೀರು ಹಾಕಿದ್ದಾರೆ. ಅಣ್ಣ ಸರಿದಾರಿಯಲ್ಲಿ ಇಲ್ಲ ಹಾಗಾಗಿ ಸ್ಪರ್ಧೆ ನಡೆಸುತ್ತಿದ್ದೇನೆ ಎಂದು ನನ್ನನ್ನ ಪ್ರಶ್ನಿಸಿದವರಿಗೆ ಹೇಳಿದ್ದೇನೆ. ಇನ್ನು ಕೆಲವರು ಈಡಿಗರು ಮತ್ತು ಲಿಂಗಾಯಿತರು ಜಿಲ್ಕೆಯಲ್ಲಿ ಹೆಚ್ಚಿನ ಮತದಾರರಿದ್ದಾರೆ. ನಿಮ್ಮ ಮತವೆಲ್ಲಿ ಎಂದಿದ್ದಾರೆ. ನಾನು ಜಾತಿ ಪರಿಗಣಿಸಿಲ್ಲ. ನಾವೆಲ್ಲರೂ ಹಿಂದೂಗಳು ಹಿಂದೂ ರಕ್ಷಣೆಗಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿರುವುದಾಗಿ ತಿಳಿಸಿದರು.‌

ಮಠಾಧೀಶರು ಹಿಂದೂತ್ವ ಕಾಪಾಡಬೇಕಿದೆ. ಅದಕ್ಕಾಗಿ ನೀನು ಹೋರಾಡಿ ಚುನಾವಣೆ ಗೆದ್ದು ಬಾ ಎಂದು ಆಶೀರ್ವಚಿಸಿದ್ದಾರೆ. ಪತ್ರಿಕೆಯಲ್ಲಿ ಅದು ಪ್ರಕಟವಾಯಿತು. ಯಾರು ಸ್ವಾಮೀಜಿಯನ್ನ ಅಡ್ಡಹಾಕಿದರು ಎಂದು ಹೆಸರು ಹೇಳಲು ಇಚ್ಚಿಸಿದ ಈಶ್ವರಪ್ಪ ಆ ಸ್ವಾಮಿಜಿಯನ್ನ ಇನ್ನೊಂದು ಗುಂಪು ಹೋಗಿ “ನೀವು ವೀರಶೈವರು ಹೇಗೆ ಅವರಿಗೆ ಆಶೀರ್ವಾದ ಮಾಡುದ್ರಿ” ಎಂದು ಪ್ರಶ್ನಿಸಿರುವ ಘಟನೆ ನಡೆದಿದೆ ಎಂದು ಸಭೆಯಲ್ಲಿ ತಿಳಿಸಿದರು.

ಸಿಗಂಧೂರಿಗೆ ರಾಮಪ್ಪನವರನ್ನ ಭೇಟಿ ಮಾಡಲು ಹೋದಾಗ ಧರ್ಮಾಧಿಕಾರಿ ಧರ್ಮಪ್ಪನವರು ದೇವಿಯ ಬಳಿ ಈಶ್ವರಪ್ಪನವರ ಸ್ಪರ್ಧೆಯ ಬಗ್ಗೆ ದೇವಿಗೆ ಕೇಳಿದ್ದಾರೆ. ಈ ವೇಳೆ ಮುಂದೆ ಎಂತಹ ಪರಿಸ್ಥಿತಿ ಬಂದರೂ ಸ್ಪರ್ಧಿಸುವುದು ಖಚಿತ ಎಂದಿರುವೆ. ಅವರಿಗೆ ಸುಳ್ಳು ಹೇಳಿ ಅಖಾಡದಿಂದ ವಾಪಾಸಾಗೊದಿಲ್ಲ ಎಂದು ಸಭೆಯಲ್ಲಿ ಮತ್ತೊಮ್ಮೆ ಖಚಿತ ಪಡಿಸಿದರು.

ಧರ್ಮಾಧಿಕಾರಿಗಳಿಗೆ ಸ್ಪರ್ಧಿಸುವುದಾಗಿ ಭರವಸೆ ನೀಡಿ ಈಗ ಸ್ಪರ್ಧೆಯಿಂದ ಹಿಂದೆ ಸರಿದರೆ ದೇವಿ ಮೆಚ್ಚುತ್ತಾಳಾ ಎಂದು ಗುಡುಗಿರುವ ಈಶ್ವರಪ್ಪ
ಅಲ್ಲೇ ಮಾರುತಿ ದೇವರಿಂದ ಪ್ರಸಾದವಾಗಿದೆ. ಚುನಾವಣೆ ಶ್ರಮ ಹಾಕಿದರೆ ಗೆಲ್ಲುತ್ತೀರಿ ಎಂದು ಅರ್ಚಕರು ತಿಳಿಸಿದ್ದಾರೆ.

ಇದಕ್ಕೆ ನನ್ನ ಬೆಂಬಲಕ್ಕೆ ನಿಂತಿರುವ ನೀವು ಶ್ರಮ ಹಾಕುತ್ತೀರ ಎಂದು ಸಭೀಕರಿಗೆ ಕೇಳಿದರು. ಇದಕ್ಕೆ ಗ್ರಾಮಾಂತರ ಭಾಗದಿಂದ ಬಂದ ಬೆಂಬಲಿಗೆರು ಯಾವುದೇ ಕಾರಣಕ್ಜೂ ಹಿಂದೆ ಸರಿಯುವ ಮಾತಿಲ್ಲ ಎಂದು ಹೇಳಿದರು. ಮತ್ತೆ ಇನ್ನೋಂದು ಗ್ಯಾಂಗ್ ಬರುತ್ತೆ ನೋಡಿ ಏನು ಮಾಡ್ತೀರಿ ಎಂದಾಗಲು ಅವರಿಗೂ ನಿಮಗೆ ಮತಹಾಕುವುದಾಗಿ ಹೇಳುವುದಾಗಿ ಈಶ್ವರಪ್ಪನವರ ಬೆನ್ನಿಗೆ ನಿಂತರು.

ಮಾ.26 ರಂದು ನಗರ ಬೂತ್ ಮಟ್ಟದ ಸಭೆಯನ್ನ ಶುಭಮಂಗಳದಲ್ಲಿ ನಡೆಯಲಿದೆ. ಬೆಳಿಗ್ಗೆ 11 ರಂದು ನಡೆಯಲಿದೆ. ಗ್ರಾಮಾಂತರ ಬೂತ್ ಮಟ್ಟದ ಕಾರ್ಯಕರ್ತರನ್ನ ಸಭೆಗೆ ಕರೆತರುವಂತೆ ಈಶ್ವರಪ್ಪ ಕೋರಿದರು. 242 ಗ್ರಾಮಾಂತರ ಬೂತ್ ಬರಲಿದೆ. ತೀರ್ಥಹಳ್ಳಿ 33 ಬೂತ್ ಬರಲಿದೆ ಒಂದೊಂದು ಬೂತ್ ನಿಂದ ಒಬ್ಬರನ್ನ ಸಭೆಗೆ ಕರೆತರಲು ಸೂಚಿಸಿದರು.

ನಗರ, ಗ್ರಾಮಾಂತರ ಭಾಗದಲ್ಲಿ‌ಲೀಡ್ ಪಡೆಯುವ ವಿಶ್ವಾಸ ಬಂದಿದೆ. ಶಿಕಾರಿಪುರದಲ್ಲಿ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಅಪ್ಪ ಮಕ್ಕಳು ಹಣ ಸುರಿದರು 11 ಸಾವಿರ ಅಂತರದ ಗೆಲುವಾಯಿತು. ಕಳೆದ ಬಾರಿ ಲೋಕಸಭೆಯಲ್ಲಿ 60. ಸಾವಿರ ಲೀಡ್ ಬಂದಿತ್ತು. ಹರಸಾಹಸ ಪಡಬೇಕಾಗಿದೆ ಎಂದರು.

ನಾನು ಯುವ ಮೋರ್ಚಾ ಅಧ್ಯಕ್ಷನಾಗಿದ್ದಾಗ ಒನ್ ಬೂತ್ 10 ವೋಟ್ಸ್ ಎಂಬ ಅಭಿಯಾನ ನಡೆಸಿದ್ದೆ. ಈ ಬಾರಿ ಒನ್ ಬೂತ್ ಫೈವ್ ವೋಟ್ಸ್ ಎಂದು ಅಭಿಯಾನ ನಡೆಸೋಣ ಎಂದು ಕರೆದರು.
28 ರಂದು ಈಶ್ವರಪ್ಪ ನವರ ಮನೆಯಲ್ಲೇ ಲೋಕಸಭಾ ಕ್ಷೇತ್ರದ ಕಾರ್ಯಾಲಯ ಉದ್ಘಾಟಿಸುತ್ತಿದ್ದೇನೆ.

ಇದನ್ನೂ ಓದಿ-https://suddilive.in/archives/11191

Related Articles

Leave a Reply

Your email address will not be published. Required fields are marked *

Back to top button