ಸ್ಥಳೀಯ ಸುದ್ದಿಗಳು

ಕಾಂಗ್ರೆಸಿಗರಿಗೆ ಪಂಥ ಆಹ್ವಾನಿಸಿದ ಜಿಲ್ಲಾ ಬಿಜೆಪಿ

ಸುದ್ದಿಲೈವ್/ಶಿವಮೊಗ್ಗ

ರಾಮನಗರಕ್ಕೆ ಡಿಕೆಶಿ ಸೀಮಿತರಾಗಿದ್ದಾರೆ. ಬರ ಇರುವ ಬಗ್ಗೆ ಉಸ್ತುವಾರಿಸಚಿವ ಮಧು ಬಂಗಾರಪ್ಪ ವಿಫಲರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಅಭಿವೃದ್ಧಿ, ಚುನಾವಣೆ ವಿಚಾರದಲ್ಲಿ ಬಿಜೆಪಿಯ ಹಿರಿಯ ಮತ್ತು ಮಾಜಿ ಮುಖ್ಯಮಂತ್ರಿಗಳು ಮತ್ತು ಪುತ್ರನ ವಿರುದ್ಧ ಮಾತನಡಿದ್ದಾರೆ. ಅವರಿಗೆ ತಕತ್ತಿದ್ದರೆ ಬಹಿರಂಗ ಚರ್ಚೆಗೆ ಆಹ್ವಾನಿಸಿದರು.‌

ಸಾರ್ವಜನಿಕರ ಕಣ್ಣೀರು ವರೆಸಲು ಸರ್ಕಾರಕ್ಕೆ ಶಗಲಿ ಅಥವಾ ಸಚಿವರಿಗೆ ಆಗಲಿ ಆಗುತ್ತಿಲ್ಲ.‌ ಸಚಿವರಿಗೆ ದೂರದೃಷ್ಠಿ ಹೀನತೆಯಿಂದ 5-8 ನೇ ತರಗತಿ ಮಕ್ಕಳು ಗೊಂದಲದಲ್ಲಿದ್ದಾರೆ. ರಜದಲ್ಲಿ ಅಜ್ಜ ಅಜ್ಜಿಯ ಜೊತೆ ಇರಬೇಕಿದ್ದ ಮಕ್ಕಳು ಆತಂಕದಲ್ಲಿದ್ದಾರೆ ಎಂದರು.

ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುವುದನ್ನ ಬಿಟ್ಟು ಶೈಕ್ಷಣಿಕ ವಿಷಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಉಸ್ತುವಾರಿ ಸಚಿವರು ಮತ್ತು ಶಾಸಕರು ಸಚಿವ ಅವರ ಭಾಷೆ ಸುಂಸ್ಕೃತವನ್ನ ತೋರುತ್ತಿಲ್ಲ. ಹಡಬೆ ಎಂಬ ಭಾಷೆ ಬಳಕೆ ಎಷ್ಟು ಸರಿ. 1990 ರಲ್ಲಿ ಸಿಎಂ ಆಗಿದ್ದ ಬಂಗಾರಪ್ಪನವರು ಮಕ್ಕಳು ಆದಾಗ ನಾವು ಗೌರವದಿಂದ ಮಾತನಾಡ ಬೇಕು. ಬೇರೆಯವರಿಗೆ ಅವರು ಗೌರವ ಕೊಡಲ್ಲ ಎಂಬುದು ಹೇಗೆ ಎಂದು ಪ್ರಶ್ನಿಸಿದರು.

ಬಸ್ ಸ್ಟ್ಯಾಂಡ್ ರಾಘು ಎಂಬ ಪದ ಬಳಕೆಯನ್ನ‌ ಶಾಸಕ ಬೇಳೂರು ಮಾಡಿದ್ದಾರೆ. ನಮ್ಮ ಸಂಸದರು ಬಸ್ ಸ್ಟ್ಯಾಂಡ್ ರಾಘವು ಹೌದು ವಿಮಾನ ನಿಲ್ದಾಣದ ರಾಘುನೂ ಹೌದು, ಜಿಲ್ಲೆಯ ಸಮಗ್ರ ಅಭಿವೃದ್ಧಿಯ ರಾಘುವೂ ಹೌದು. ನಿಮ್ಮ ಸರ್ಟಿಫಿಕೇಟ್ ನಮ್ಮ ನಾಯಕರಿಗೆ ಬೇಡ ಎಂದು ಗುಡುಗಿದರು.

ವಿಪಕ್ಷಗಳ ಟೀಕೆ ಆರೋಗ್ಯಕರ ವಾಗಿರಬೇಕು.‌ ಅಸಭ್ಯ‌ ಪದಬಳಕೆ‌ ಮಾಡುವುದು ದೊಡ್ಡತನ ಎನಿಸಿಕೊಳ್ಳುವುದಿಲ್ಲ. ಜನ ಈಗಾಗಲೇ ಬುದ್ದಿ ಕಲಿಸಿದ್ದಾರೆ. ಜನ‌ ಮತ್ತೊಮ್ಮೆ ಬುದ್ದಿಕಲಿಸುವ ಸಮಯ ಬಂದಿದೆ ಎಂದ ಅವರು ಮೋದಿ ಬಗ್ಗೆ ಟೀಕಿಸುತ್ತಾರೆ. ನಿಮಗೆ ಅರ್ಹತೆ ಇದೆಯಾ? ಮೋದಿಯನ್ನ ಟೀಕಿಸುವ ಮೂಲಕ ತಮ್ಮ ಹೆಸರು ಪೇಪರ್ ನಲ್ಲಿ ಬರಲಿದೆ ಎಂಬ ಕಾರಣಕ್ಕೆ ಟೀಕಿಸುತ್ತಿದ್ದೀರಿ. ಕಾಂಗ್ರೆಸ್ ತನ್ನ ಸೋಲನ್ನ‌ ಈಗಾಗಲೇ ಒಪ್ಪಿಕೊಂಡಿದೆ. ಇವಿಎಂ‌ ವಿರುದ್ಧ ದೂಷಿಸುತ್ತಿದೆ. ಸೋಲಿನ ಕಾರಣ ಪದಬಳಕೆ ಮಾಡಲಾಗುತ್ತಿದೆ ಎಂದು ದೂರಿದರು.

ಶರಾವತಿ ಮುಳುಗಡೆ ಸಂತ್ರಸ್ತ್ರ ಪರ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ. ಬಿಜೆಪಿ ಪಕ್ಷ ಸಂತ್ರಸ್ತ್ರ ಪರ ಇದೆ. ಹಕ್ಕುಪತ್ರಕ್ಕೆ ಹೋರಾಡಿದೆ. ಸಮಸ್ಯೆ ಬಗೆಹರಿಸಲು ಶ್ರಮಿಸಿದೆ. ಸ್ವತಂತ್ರ ಭಾರತದಲ್ಲಿ 75 ವರ್ಷದಲ್ಲಿ 67 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಇದುವರೆಗೂ ಜ್ವಲಂತ ಸಮಸ್ಯೆಯನ್ನ ಹಾಗೆ ಉಳಿಸಿಕಡಿದ್ದೇಕೆ ಎಂದು ದೂರಿದರು.

ಅಭಿವೃದ್ಧಿಯ ದೃಷ್ಠಿಯಲ್ಲಿ ಹೆದ್ದಾರಿ, ರೈಲ್ವೆ ಮೂಲಬೂತ ಕ್ಷೇತ್ರದಲ್ಲಿ, ಸೇತುವೆ ನಿರ್ಮಾಣ ಸಂಬಂಧಪಟ್ಟಂತಹ ಕೆಲಸದ ಬಗ್ಗೆ ಕಾಂಗ್ರೆಸ್ ಬಹಿರಂಗ ಚರ್ಚೆಗೆ ಆಹ್ವಾನಿಸಿದೆ.‌ ತಾಕತ್ತಿದ್ದರೆ ದಾಖಲೆ ಸಹಿತ ಮಾಧ್ಯಮಗಳ ಜೊತೆ ಚರ್ಚೆಗೆ ಬನ್ನಿ ಎಂದು ಪಂಥ ಆಹ್ವಾನ ನೀಡಿದರು.

ಗೋಪಾಲ‌ಕೃಷ್ಣ ಬೇಳೂರನ್ನ‌ಜಿಲ್ಲೆಯಲ್ಲಿ ಗುದ್ದಲಿ ಗೋಪಾಲ ಎಂದು ಕರೆಯುತ್ತಾರೆ ಎಂಬುದನ್ನ ಶಾಸಕರು ಮರೆಯಬಾರದು. ಜೋಗ‌ಅಭಿವೃದ್ಧಿಯನ್ನ ಸುಳ್ಳು ಎಂದು ಬಿಂಬಿಸಿದ್ದೀರಿ. ಚೌಕಟ್ಟಿನ ಒಳಗೆ ರಾಜಕಾರಣ ಮಾಡಿ ಎಂದು ಬಿಜೆಪಿ ನಮಗೆ ಸಂಸ್ಕಾರನೀಡಿದೆ. ಬರಗಾಲದ ಸಮಯದಲ್ಲಿ ನಿಮ್ಮ ಕರ್ತವ್ಯ ಮಾಡಿ ಎಂದು ತಾಕೀತು ಮಾಡಿದರು.

ಮುಂದಿನ ದಿನಗಳಲ್ಲಿ ನಿಮ್ಮ ಅಧಿಕಾರವಿದ್ದರೆ ರಚನಾತ್ಮಕವಾಗಿ ಕೆಲಸ ಮಾಡಿ ಅದಕ್ಕೆ ಬೆಂಬಲವಾಗಿ ಬಿಜೆಪಿ ನಿಲ್ಲುತ್ತದೆ ಎಂದು ಗುಟುರ್ ಹಾಕಿದರು.

ಇದನ್ನೂ ಓದಿ-https://suddilive.in/archives/11183

Related Articles

Leave a Reply

Your email address will not be published. Required fields are marked *

Back to top button