ರಾಜ್ಯ ಸುದ್ದಿಗಳು

Kfd ಕಣ್ಣಮುಚ್ಚಾಲೆ ಆಟ-ನಿನ್ನೆ 11 ಇವತ್ತು ನಿಲ್!

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಜಿಲ್ಲೆಯಲ್ಲಿ 11 ಜನರಲ್ಲಿ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆ, ಇಂದು ಶಿವಮೊಗ್ಗದಲ್ಲಿ ಯಾರಿಗೂ ಕೊರೋನ ಪತ್ತೆಯಾಗಿಲ್ಲ. ಆದರೆ ಚಿಕ್ಕಮಗಳೂರಿನಲ್ಲಿ 1 ಕೆಎಫ್ ಡಿ ಪಾಸಿಟಿವ್ ಕಂಡು ಬಂದಿದೆ.

ಇಂದು ಮೂವರಿಗೆ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಓರ್ವರಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಶಿರಸಿ ಜಿಲ್ಲೆಯಲ್ಲಿ ಕೆಎಫ್ ಡಿ ಪಾಸಿಟಿವ್ 64 ರಿಂದ 65 ಜನರಲ್ಲಿ ಕಾಣಿಸಿಕೊಂಡಿದೆ.

65 ಜನರಲ್ಲಿ 26 ಜನ ಗುಣ ಮುಖರಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 37 ಜನ ನಿಗದಿತ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯಿತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ 12 ಜನರಲ್ಲಿ ಮಂಗನ ಕಾಯಿಲೆ ಆಕ್ಟಿವ್ ಆಗಿದ್ದರೆ, ಶಿರಸಿ ಜಿಲ್ಲೆಯಲ್ಲಿ 23 ಜನರಿಗೆ ಕೆಎಫ್ ಡಿ ಪಾಸಿಟಿವ್ ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

ಇದನ್ನೂ ಓದಿ-https://suddilive.in/archives/8495

Related Articles

Leave a Reply

Your email address will not be published. Required fields are marked *

Back to top button