ರಾಷ್ಟ್ರೀಯ ಸುದ್ದಿಗಳು

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಈ ಬಾರಿ ನನಗೆ-ಕಾಂತೇಶ್

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಚುನಾವಣೆಗೆ ಸಧ್ಯಕ್ಕೆ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಆಕಾಂಕ್ಷಿಗಳಿಲ್ಲ. ಬಹುಶಃ ಕಾಂಗ್ರೆಸ್ ನಲ್ಲೂ ಇರುವ ಸಾಧ್ಯತೆ ಕಡಿಮೆಯೇ, ಆದರೆ ಬೇರೆ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿಯೇ ಇವೆ. ಅವರುಗಳ ಹೆಸರು ಬರಲಿದೆಯಾ ಅಥವಾ ಬೇರೆಯವರ ಹೆಸರು ಪ್ರಕಟವಾಗಲಿದೆಯಾ ಎಂಬ ಆತಂಕ ಹೆಚ್ಚಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಎರಡೂ ಪಕ್ಷದಲ್ಲೂ ಶೀಘ್ರದಲ್ಲಿಯೇ ಹೆಸರುಗಳು ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಜೆಪಿಯಿಂದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಯಾಗಿರುವ ಮಾಜಿ ಡಿಸಿಎಂ ಈಶ್ವರಪ್ಪನವರ ಪುತ್ರ ಕಾಂತೇಶ್ ಸಹ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್, ಮತ್ತು ಸಂದೀಪ್ ಪಾಟೀಲ್ ನಡುವೆ ಟಿಕೇಟ್ ಗಾಗಿ ತೀವ್ರ ಪೈಪೋಟಿಯಿದೆ.

ಈ ಬಗ್ಗೆ ಇಂದು ಶಿವಮೊಗ್ಗದ ಸ್ವಗೃಹದಲ್ಲಿ ಮಾತನಾಡಿರುವ ಮಾಜಿ ಡಿಸಿಎಂ ಪುತ್ರ ಕಾಂತೇಶ್ ಈ ಬಾರಿ ಹಾವೇರಿ-ಗದಗ ಲೋಕಸಭಾ ಚುನಾವಣೆಯ ಬಿಜೆಪಿ ಟಿಕೇಟ್ ನನಗೆ ಸಿಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ದೃಶ್ಯ ಮಾಧ್ಯಮಗಳಲ್ಲಿ ಹಾವೇರಿ ಲೋಕಸಭಾ ಚುನಾವಣೆಗೆ ಕಾಂತೇಶ್ ಗೆ ಪಕ್ಷದ ಟಿಕೇಟ್ ಸಿಗುತ್ತಾ ಅಥವಾ ಇಲ್ಲವೋ ಎಂಬ ಗೊಂದಲಗಳು ಆರಂಭವಾಗಿರುವುರಿಂದ ಕಾರ್ಯಕರ್ತರು ಸ್ವಲ್ಪ ಗೊಂದಲದಲ್ಲಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಗೊಂದಲ ಪಡುವುದು ಬೇಡ ನನಗೆ ಬಿಜೆಪಿ ಟಿಕೇಟ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಎರಡು ವರೆ ತಿಂಗಳ ಹಿಂದೆ ಪಕ್ಷದ ಟಿಕೇಟ್ ಕೊಡಿಸುವುದಾಗಿ ಮತ್ತು ಪ್ರಚಾರಕ್ಕೆ ಬರುವುದಾಗಿ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು. ಹಾಗಾಗಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿಯ ಟಿಕೇಟ್ ನನಗೆ ಸಿಗಲಿದೆ ಎಂದಿದ್ದಾರೆ.

ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಗೊಂದಲಗಳಿವೆ. ಯಾವ‌ಕ್ಷೇತ್ರದಲ್ಲಿ ಇಲ್ಲ ಹೇಳಿ? ಕಾರ್ಯಕರ್ತರು ಪ್ರಶ್ನೆ ಮಾಡುವುದರಿಂದ ಈ ಬಗ್ಗೆ ಆತಂಕ ಹೆಚ್ಚಾಗಿದೆ. ಆದರೆ ನನಗೆ ವಿಶ್ವಾಸವಿದೆ ನನಗೆ ಪಕ್ಷದ ಟಿಕೇಟ್ ಸಿಗಲಿದೆ. ಆ ಗೊಂದಲ‌ ಕಾರ್ಯಕರ್ತರಲ್ಲಿ ಶೀಘ್ರದಲ್ಲಿಯೇ ನಿವಾರಣೆ ಆಗುತ್ತೆ ಎಂದರು.

ತಾಯಿಯ ಸ್ವರೂಪದಲ್ಲಿ ಬಿಜೆಪಿ ಪಕ್ಷವಿದೆ. ಯಾವುದೇ ಕಾರಣಕ್ಕೂ ತಾಯಿ ಒಂದು ಕಣ್ಣಿಗೆ ಸುಣ್ಣ‌ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಲ್ಲ. ತಂದೆ ಈಶ್ವರಪ್ಪನವರಿಗೆ ಪಕ್ಷ ಚುನಾವಣೆ ರಾಜಕಾರಣದಿಂದ ನಿವೃತ್ತಿಯಾಗಿ ಎಂದು ಸೂಚನೆ ನೀಡಿದ ತಕ್ಷಣವೇ ರಾಜೀನಾಮೆ ನೀಡಿದ್ದರು. ಪಕ್ಷಕ್ಕೆ ನಿಷ್ಠರಾಗಿ ನಡೆದುಕೊಂಡರು. ರಾಜ್ಯಾದ್ಯಂತ ಪ್ರವಾಸ ಮಾಡಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯಿಯಲ್ಲಿ ಭಾಗಿಯಾಗಿದ್ದರು.‌

ಪಕ್ಷದ ವರಿಷ್ಠರು, ನನಗೆ ಪಕ್ಷ ಗುರಿತಿಸಿ ಟಿಕೇಟ್ ನೀಡುವ ಭರವಸೆ ನೀಡಿರುವುದರಿಂದ ಕ್ಷೇತ್ರದಲ್ಲಿ ಓಡಾಡಿದ್ದೇನೆ. ಸಂಘಟನೆ ಮಟ್ಟದಲ್ಲಿಯೂ ಸಹ ಕ್ಷೇತ್ರದಲ್ಲಿ ಓಡಾಡಿ ಎಂಬ ಸೂಚನೆ ಸಿಕ್ಕಿದ್ದರಿಂದ ಕ್ಷೇತ್ರದಲ್ಲಿ ಓಡಾಡಿರುವೆ. ನನಗೆ ಟಿಕೇಟ್ ಸಿಗಲಿದೆ ಎಂಬ ಕಾರಣಕ್ಕೆ ಪಕ್ಷದ ಟಿಕೇಟ್ ನಲ್ಲೇ ಸ್ಪರ್ಧಿಸುವುದಾಗಿ ತಿಳಿಸಿದರು.

ಹಾವೇರಿ-ಗದಗ ಲೋಕಸಭಾ‌ ಕ್ಷೇತ್ರಕ್ಕೆ ನನ್ನ ಆಯ್ಕೆಯೇ‌ ಫೈನಲ್ ಆಗುವ ನಿರೀಕ್ಷೆ ಇರುವುದರಿಂದ ಟಿಕೇಟ್ ಸಿಗಲಿದೆ. ಈ ಬಾರಿಯ ಲೋಕಸಮರಕ್ಕೆ ಬಿಜೆಪಿಯ ಅಭ್ಯರ್ಥಿ ನಗಣ್ಯ, ಏಕೆಂದರೆ, ಪ್ರಧಾನಿ ಅವರೇ ಕ್ಯಾಂಡಿಡೇಟ್ ಆಗಿದ್ದಾರೆ. ಹಾಗಾಗಿ ಅವರ ಆಯ್ಕೆಯನ್ನ ಜನ ಮಾಡುವುದರಿಂದ ನನ್ನ ಗೆಲವು ನಿಶ್ಚಿತ ಎಂದರು.

ಇದನ್ನೂ ಓದಿ-https://suddilive.in/archives/10323

Related Articles

Leave a Reply

Your email address will not be published. Required fields are marked *

Back to top button