ರಾಗಿಗುಡ್ಡದಲ್ಲಿ ಕೆಲಕಾಲ ಗೊಂದಲ ಎಸ್ಪಿ ಮಧ್ಯಸ್ಥಿಕೆಯಲ್ಲಿ ನಿವಾರಣೆ

ಸುದ್ದಿಲೈವ್/ಶಿವಮೊಗ್ಗ

ನಗರದ ರಾಗಿಗುಡ್ಡದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ನಲ್ಲಿ ಬಿಳಿ ಬಣ್ಣ ಬಳಿದ ವಿಚಾರದಲ್ಲಿ ಗೊಂದಲ ನಿರ್ಮಾಣವಾಗಿತ್ತು ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಅವರ ಮಧ್ಯಸ್ಥಿಕೆಯಲ್ಲಿ ಗೊಂದಲ ನಿವಾರಣೆ ಆಗಿದೆ.
ರಾಗಿಗುಡ್ಡದ ಚಾನೆಲ್ ಏರಿಯಾದ ಮೇಲೆ ಈದ್ ಮೆರವಣಿಗೆ ಪ್ರಯುಕ್ತ ಟಿಪ್ಪು ಕಟೌಟ್ ನಿರ್ಮಿಸಲಾಗಿದ್ದು ಟಿಪ್ಪು ಎದುರಾಳಿಯ ಸೈನಿಕನನ್ನ ಕತ್ತಿಯಲ್ಲಿ ಇರಿದ ಚಿತ್ರ ನಿರ್ಮಿಸಲಾಗಿತ್ತು. ಈ ಚಿತ್ರದ ಬಗ್ಗೆ ಆಕ್ಷೇಪಿಸಲಾಗಿದೆ.
ಈ ರೀತಿ ಕಟೌಟ್ ಕಾನೂನು ಬಾಹಿರವಾಗಿದ್ದು ಕಾನೂನು ಬಾಹಿರ ಕಟೌಟ್ ನಿರ್ಮಾಣಕ್ಕೆ ಅವಕಾಶವಿಲ. ಆದಕಾರಣ ಕಟೌಟ್ ನ ಸೈನಿಕ ಚಿತ್ರಕ್ಕೆ ಬಿಳಿ ಬಣ್ಣ ಹೊಡೆಯಲಾಗಿತ್ತು. ಇದು ಆಕ್ಷೇಪಣೆಗೆ ಕಾರಣವಾಗಿದೆ.
ಎಸ್ಪಿ ಮಿಥುನ್ ಕುಮಾರ್ ಮಧ್ಯ ಪ್ರವೇಶದಿಂದ ಹಾಗೂ ಸಮುದಾಯದ ಮುಖಂಡರ ಬಳಿ ಮಾತನಾಡಿ ನಂತರ ಬಿಳಿ ಬಣ್ಣ ಹೊಡೆದ ಜಾಗದಲ್ಲಿ ಹಸಿರು ಬಣ್ಣ ಹೊಡೆಯಲು ಸೂಚನೆ ನೀಡಿದ್ದಾರೆ.
ಇದರಿಂದ ಗೊಂದಲ ನಿವಾರಣೆ ಆಗಿದೆ. ಅಲ್ಲದೆ ರಾಗಿಗುಡ್ಡದ ಪ್ರವೇಶದ್ವಾರದಲ್ಲಿ ಅಲಿ ಖಡ್ಗ ತೂಗುಹಾಕಲು ಅನುಮತಿ ನೀಡಿದ್ದರಿಂದ ಖಡ್ಗ ನಿರ್ಮಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ರಾಗಿಗುಡ್ಡದಲ್ಲಿ ಕೆಲಗೊಂದಲ ನಿರ್ಮಾಣವಾಗಿತ್ತು. ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಗೊಂದಲ ನಿರ್ಮಾಣವಾಗಿತ್ತು. ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಕೆಲ ಸಂಪರ್ಕದ ಕೊರತೆಯಿಂದ ಗೊಂದಲ ನಿರ್ಮಾಣವಾಗಿತ್ತು. ಬಗೆಹರಿಸಲಾಗಿದೆ ಎಂದರು.
ಇದನ್ನೂ ಓದಿ-https://suddilive.in/2023/10/01/ಲಾರಿ-ಹರಿದು-ಮೂವರು-ಬೈಕ್-ಸವಾ/
