ಕ್ರೈಂ ನ್ಯೂಸ್

ಆನವಟ್ಟಿ ರಫೀಕ್ ಮರ್ಡರ್ ನ ವಿಡಿಯೋ ವೈರಲ್

ಸುದ್ದಿಲೈವ್/ಸಾಗರ

ಮೊನ್ನೆ ಸಾಗರ ತಾಲೂಕಿನಲ್ಲಿ ನಡೆದ ಭೀಕರ ಮರ್ಡರ್  ಬಳಿಕ ಮೃತನ ದೇಹದ ಮೇಲೆ ಕಾರು ಹತ್ತಿಸಿಕೊಂಡು ಹೋಗಿರುವ ದೃಶ್ಯ ಮೊಬೈಲ್ ‌ನಲ್ಲಿ ಸೆರೆಯಾಗಿದ್ದು ಆ ದೃಶ್ಯಗಳು ಈಗ ವೈರಲ್ ಆಗ್ತಾ ಇದೆ. ಕಾರು ಹತ್ತಿಸಿ ಮರ್ಡರ್ ಮಾಡಿರುವ ವಿಡಿಯೋ ವೈರಲ್ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಿಪ್ಪಳ್ಳಿ ಬಳಿ ಆನವಟ್ಟಿ ರಫೀಕ್ ನನ್ನ ಆಸ್ತಿ ವಿಚಾರದಲ್ಲಿ ಸಹೋದರನಿಂದಲೇ ಕೊಲೆ ನಡೆದಿತ್ತು.‌ ಫೆ.29 ರಂದು ಈ ಘಟನೆ ನಡೆದಿತ್ತು. ಆನವಟ್ಟಿ ರಫೀಕ್ ಮೇಲೆ ಹಲ್ಲೆ ನಡೆಸಿ ಆತನ ಮೇಲೆ ಕಾರು  ಹತ್ತಿಸಿ ಕೊಲೆ ಮಾಡಲಾಗಿತ್ತು.

ರಸ್ತೆ ಬಳಿ ಕೆಳಗೆ ಬಿದ್ದಿದ್ದ ರಫೀಕ್ ನ ಮೇಲೆ ಕಾರು ಹತ್ತಿಸಿ ಮರ್ಡರ್ ಮಾಡಿದ ಆರೋಪಿಗಳುಎಸ್ಕೇಪ್ ಆಗಿದ್ದರು.‌ ರಫೀಕ್ ಮೇಲೆ ಕಾರು ಹತ್ತಿಸಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ. ಸೆರೆಹಿಡಿದ ದೃಶ್ಯ ಈಗ ವೈರಲ್ ಮಾಡಲಾಗಿದೆ. 6 ತಿಂಗಳ ಹಿಂದೆ ರಫೀಕ್ ಸಹೋದರನೊಬ್ಬನನ್ನ ಆಸ್ತಿ ವಿಚಾರದಲ್ಲಿ ಕೊಲೆ ಮಾಡಿದ್ದನು.‌

ಸಹೋದರ ಸಲೀಂ ಮರ್ಡರ್ ವಿಚಾರದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ರಫೀಕ್ ಜಾಮೀನಿನ ಮೇಲೆ ಹೊರಗೆ ಬಂದಿದ್ದನು. ಮೂರು ತಿಂಗಳ ಹಿಂದಷ್ಟೆ ಜಾಮೀನಿನ ಮೇಲೆ ಹೊರಗೆ ಬಂದ ರಫೀಕ್ ನನ್ನ ಸಹೋದರ ಇನಾಯತ್ ಮತ್ತು ಸಂಬಂಧಿ ಸಮೀರ್ ಸೇರಿ ಮರ್ಡರ್ ಮಾಡಿರುತ್ತಾರೆ.‌

ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ  ಪ್ರಕರಣದ ಕುರಿತು ಪ್ರಕರಣ ದಾಖಲಾಗಿತ್ತು. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ-https://suddilive.in/archives/10306

Related Articles

Leave a Reply

Your email address will not be published. Required fields are marked *

Back to top button