ವಿಮಾನ ನಿಲ್ದಾಣ ಕುರಿತು ಸಚಿವರ ಜೊತೆ ಮಹತ್ತರ ಚರ್ಚೆ

ಸುದ್ದಿಲೈವ್/ಶಿವಮೊಗ್ಗ

ಸಚಿವ ಎಂಬಿ ಪಾಟೀಲ್ ಜೊತೆ ಒಂದು ಗಂಟೆ ಸಭೆ ನಡೆಸಿ ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನ.29 ರಿಂದ ಸ್ಟಾರ್ ಏರ್ ವೇಸ್ ನವರು ಗೋವ ತಿರುಪತಿ ಮತ್ತು ಹೈದ್ರಾಬಾದ್ ಗೆ ವಿಮಾನ ಹಾರಾಡಲಿದೆ. ಏರ್ ವೇಸ್ ಮತ್ತು ನೈಟ್ ಲ್ಯಾಂಡಿಂಗ್ ಕುರಿತು ಮಾತನಾಡಲಾಗಿದೆ. ಏರ್ ವೇಸ್ ಮತ್ತು ನೈಟ್ ಲ್ಯಾಂಡಿಂಗ್ ನ್ನಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದರು.
ವಿಮಾನ ನಿಲ್ದಾದ ಪರವಾನಗಿ ತಾತ್ಕಾಲಿಕವಾಗಿ ಪಡೆಯಲಾಗಿದ್ದು ಇದರ ಅವಧಿ ನ.28 ಕ್ಕೆ ಮುಗಿಯಲಿದೆ. ಏರೋ ಡ್ರಂ ಸೆಕ್ಯೂರಿ ಪ್ರೋಗ್ರಾಮ್ ನ. 28.11 23ಗೆ ಮುಗಿಯಲಿದೆ. ಇದನ್ನ ಖಾಯಂ ಆಗಿ ಪಡೆಯಲು ಸಹ ಚರಛಿಸಲಾಗಿದೆ.. 2½ ಕೋಟಿ ರೂ ವೆಚ್ಚ ತಗುಲಿದ್ದು ಇದನ್ನ . ಪರಿಶೀಲನೆ ನಡೆಸಿ ಖಾಯಂ ಪರವಾನಗಿ ಪಡೆಯ ಬೇಕಿದೆ ಎಂದರು.
.
ಮಂಜಿನ ವಾತಾವರಣದಿಂದ ವಿಮಾನ ಹಾರಾಟಕ್ಕೆ ತೊಂದರೆ ಆಗುತ್ತಿದೆ. ನೇವಿಗೇಷನ್ ಉಪಕರಣ ಬೇಕಿದೆ ಇವೆಲ್ಲದರ ಬಗ್ಗೆ ಸಚಿವರ ಬಗ್ಗೆ ಚಿಂತಿಸಲಾಗಿದೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆ 50% ಮುಗಿದಿದೆ ಅದನ್ನ ಬೇಗ ಮುಗಿಸಬೇಕಿದೆ. ಡೈಲಿ ನಿರ್ವಾಹಣೆಗೆ ವರ್ಷಕ್ಮೆ 15 ಕೋಟಿ ಬೇಕಾಗಿದೆ. ಇದಕ್ಕೂ ಸಲಹೆ ನೀಡಲಾಗಿದೆ. ನಿಲ್ದಾಣಕ್ಕೆ ಬೋಯಿಂಗ್ ಫ್ಲೈಟ್, ಏರ್ ಬಸಸ್ ಗಳನ್ನ ಆರಂಭಿಸುವುದು, ಏರ್ ಸಂಸ್ಥೆಗಳಿಗೆ ತರಬೇತಿ ನೀಡಲು 58 ಎಕರೆ ತರಬೇತಿ ಬಳಸಿಕೊಂಡಲ್ಲಿ ಇದರಿಂದ ಅನುಕೂಲವಾಗಲಿದೆ ಎಂದರು.
ಕೋಲ್ಡ್ ಸ್ಟೋರೇಜ್, ಪ್ರವಾಸೋದ್ಯಮವನ್ನ ವಾಣಿಜ್ಯೋದ್ಯಮ ಮಾಡಿಕೊಂಡು ಆದಾಯ ಬರುವಂತೆ ಮಾಡಲು ಸಲಹೆ ನೀಡಲಾಗಿದೆ. ಕೆಐಡಿಸಿ ಯಿಂದ ಮಾಡಲಾಗುತ್ತಿದೆ. ನಿನ್ನೆ ಮಹತ್ತರ ಸಭೆ ಯಶಸ್ವಿಯಾಗಿದೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕಿದೆ ಎಂದರು.
ಇದನ್ನೂ ಓದಿ-https://suddilive.in/archives/1954
