ರಾಜಕೀಯ ಸುದ್ದಿಗಳು

ಈಶ್ವರಪ್ಪನವರ ಕೆವಿಟ್ ಗೆ ರಾಘಣ್ಣ‌ಏನಂದ್ರು?

ಸುದ್ದಿಲೈವ್/ಶಿವಮೊಗ್ಗ

ಇಂದು ಬಿಜೆಪಿಯ ‌ಸಂಸ್ಥಾಪನಾ ದಿನ, ಎಲ್ಲಾ ಬೂತ್ ನಲ್ಲು‌ ಸಂಸ್ಥಾಪನಾ ದಿನ ಆಚರಣೆ ಮಾಡ್ತಿದ್ದೇವೆ.1700 ಕ್ಕಿಂತ ಹೆಚ್ಚಿನ ಬೂತ್ ಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಬೂತ್ ನಲ್ಲೇ‌ ಇರಬೇಕು, ಕಾರ್ಯಕ್ರಮ ಮಾಡಬೇಕು ಎಂದು ಸಂಸದ ರಾಘವೇಂದ್ರ ತಿಳಿಇದರು.

ಮಾಧ್ಯಮಗಳಿಗೆ ಮಾತನಾಡಿ,  ನಾನು ಸಹ 8-10 ಬೂತ್ ಗಳಿಗೆ ಪ್ರವಾಸ ಮಾಡ್ತೇನೆ. ಶಿವಮೊಗ್ಗದಲ್ಲಿ ನಡೆಯುವ ಮಹಿಳಾ ಸಮಾವೇಶದಲ್ಲಿ ಭಾಗವಹಿಸುತ್ತೇನೆ ಎಂದರು.

ತೀರ್ಥಹಳ್ಳಿ ಬಿಜೆಪಿ ‌ಕಾರ್ಯಕರ್ತನನ್ನು ಎನ್ ಐಎ ವಿಚಾರಣೆ ನಡೆಸಿದ ವಿಚಾರ ಕುರಿತು ಮಾತನಾಡಿದ ಸಂಸದ ರಾಘವೇಂದ್ರ ಎನ್ ಐಎ ತನಿಖೆ ತಂಡ ವಿಚಾರಣೆಗೆ ಕರೆದೊಯ್ದಿದ್ದಾರೆ. 24 ಗಂಟೆಯಲ್ಲಿ ಕಾರ್ಯಕರ್ತನನ್ನು ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಕಾರ್ಯಕರ್ತ ವಾಪಸ್ ಬಂದ ನಂತರ ಆತಂಕದ ವಿಚಾರ ಗೊತ್ತಾಯಿತು

ಮೊಬೈಲ್ ಶಾಪ್ ನಲ್ಲಿ ಹೊಸ ಸಿಮ್ ಖರೀದಿ ಮಾಡಿದ್ದರು. ನಮ್ಮ ಹಿಂದು ಹುಡುಗರು ಕೊಡುವ ದಾಖಲಾತಿ ಪೋರ್ಜರಿ ಮಾಡಿ ಅವರ ಹೆಸರಿನಲ್ಲಿ ಇನ್ನೊಂದು ಸಿಮ್ ಖರೀದಿ ಮಾಡಿದ್ದಾರೆ. ಇಂತಹ ದುಷ್ಕೃತ್ಯ ಮಾಡುವ ಮನಸ್ಥಿತಿ ಇರುವ ವ್ಯಕ್ತಿಗಳಿಗೆ ಸಿಮ್ ಕೊಡ್ತಿದ್ದರು.

ಸರ್ವ ಜನಾಂಗದ ಶಾಂತಿಯ ತೋಟ ಎಂಬಂತಹ ಕುವೆಂಪು ಅವರ ಜನ್ಮ ಸ್ಥಳದಲ್ಲಿ‌ ಇಂತಹ ಘಟನೆ ನಡೆಯುತ್ತಿರೋದು ಆತಂಕದ ವಿಚಾರವಾಗಿದೆ. ಕೇಂದ್ರ ಸರಕಾರದಿಂದ ಗಟ್ಟಿಯಾದ ನಿಲುವು ತನಿಖೆ ಆಗ್ತಿದೆ. ಈ‌ ಆತಂಕದಿಂದ ಮುಕ್ತ ಆಗಬೇಕು ಅಂದ್ರೆ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಎಂದರು.

ಸಮಾಜ ಜಾಗೃತಿಗೊಳ್ಳುತ್ತಿದೆ. ಈಶ್ವರಪ್ಪ ಕೆವಿಯೆಟ್ ಸಲ್ಲಿಕೆ ವಿಚಾರವನ್ನೂ ಪ್ರತಿಕ್ರಿಯಿಸಿದ ಸಂಸದರು, ಮೋದಿ ಬೇಕು. ಮೋದಿ ಅವರಿಗಿಂತ‌ ಇನ್ನೊಂದು ಹಿಂದುತ್ವದ ಮುಖ ಬೇರೊಂದಿಲ್ಲ. ಮೋದಿ ಪಕ್ಷದ ಅಧಿಕೃತ ಅಭ್ಯರ್ಥಿ ನಾನಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೋದಿ ಪೋಟೋ ಹಾಕಿಕೊಂಡು ಅವರೊಂದು ಪ್ರಯತ್ನ ಮಾಡ್ತಿದ್ದಾರೆ.

ಜನ ಪ್ರಜ್ಞಾವಂತರಿದ್ದಾರೆ ಇದರಲ್ಲಿ ಸ್ವಾರ್ಥ ಇದೆಯಾ, ನಿಜವಾದ ಹಿಂದುತ್ವಕ್ಕಾಗಿ ಪಕ್ಷ ಬಿಜೆಪಿ ‌ಪಕ್ಷವಾಗಿದೆ. ಹಿಂದುತ್ವ ಕಟ್ಟಿ ಬೆಳೆಸುವ ಕಾರ್ಯ ನಡೆದಿದೆ. ಮನಸ್ಸಿಗೆ ನೋವಾಗಿ ಸ್ವಂತಕೋಸ್ಕರ ಹಿಂದುತ್ವ ಬಳಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ಜನ ಕೊಡ್ತಾರೆ ಎಂದರು.

ಇದನ್ನೂ ಓದಿ-https://suddilive.in/archives/12211

Related Articles

Leave a Reply

Your email address will not be published. Required fields are marked *

Back to top button