ಆಯನೂರಿಗೆ ಹೊಸ ಜವಬ್ದಾರಿ

ಸುದ್ದಿಲೈವ್/ಶಿವಮೊಗ್ಗ

ಯಾವುದೇ ಆಕಾಂಕ್ಷೆ ಇಲ್ಲದೆ ಕಾಂಗ್ರೆಸ್ ಸೇರಿದ್ದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ರಿಗೆ ಹೊಸ ಜವಬ್ದಾರಿಯನ್ನನೀಡಿ ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಫ್ಲೆಕ್ಸ್ ಮೂಲಕವೇ ಸದ್ದು ಮಾಡಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್ ಅನೇಕರ ವಿರೋಧದ ನಡುವೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಾಗ ಆದಂತ ಕಹಿ ಅನುಭವಗಳನ್ನ ಸಹ ಅನುಭವಿಸಿ ಗೌರವಿತವಾಗಿ ನಡೆದುಕೊಂಡಿದ್ದು ಈಗ ಹಳೇ ಸುದ್ದಿ.
ಆದರೆ ಈಗ ಡಿಸಿಎಂ ಡಿಕೆಶಿ ಅವರು ಮಾಧ್ಯಮಗಳೊಂದಿಗೆ ಚೆನ್ನಾಗಿ ಮಾತನಾಡುವುದರಿಂದ ಅವರನ್ನ ಕೆಪಿಸಿಸಿ ವಕ್ತಾರರಾಗಿ ನೇಮಿಸಿ ಆದೇಶಿಸಿದ್ದಾರೆ. ಪಕ್ಷದ ವಿಚಾರಧಾರೆಗಳನ್ನ ಬಿಂಬಿಸಲು ಮತ್ತು ಸರ್ಕಾರದ ಯೋಜನೆಗಳನ್ನ ಮಾಧ್ಯಮಗಳಲ್ಲಿ ಪ್ರಚಾರಪಡೆಸಲು ಅವರಿಗೆ ಹೊಸ ಜವಬ್ದಾರಿ ನೀಡಲಾಗಿದೆ.
ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಮಾಧ್ಯಮಗಳಿಗೆ ಆಯನೂರು ಹೆಚ್ಚಿನ ಸುದ್ದಿಗೋಷ್ಠಿ ನಡೆಸಿರುವುದು ಮತ್ತು ಬೈಟ್ ನೀಡಿರುವುದು ಸಹ ತುಂಬನೇ ವಿರಳ. ಮೊನ್ನೆ ನಡೆದ ರಾಗಿಗುಡ್ಡದ ವಿಚಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ನಾಯಕರ ಗಮನ ಸೆಳೆದಿರುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ-https://suddilive.in/archives/1144
