ರಾಜಕೀಯ ಸುದ್ದಿಗಳು

ಮತ್ತೊಮ್ಮೆ ಕರೆದರೂ ದೆಹಲಿಗೆ ಹೋಗುವೆ, ಆದರೆ ಸ್ಪರ್ಧೆಯಿಂದ ಹಿಂದೆ ಸರಿಯೊಲ್ಲ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಈ ದೇಶದ ಉಕ್ಕಿನ‌ ಮನುಷ್ಯ ಗೃಹಸಚಿವ ಅಮಿತ್ ಶಾ ದೆಹಲಿಗೆ ಬರಲು ಹೇಳಿದ್ದರು. ಅವರ ಕರೆಗೆ ಗೌರವ ಕೊಟ್ಟು ದೆಹಲಿಗೆ ಹೋಗಿದ್ದೆ. ರಾಜೇಶ್ ಜಿ ಮನೆಗೆ ಭೇಟಿ ಮಾಡಲು ಸೂಚಿಸಿದ್ದರು.

ಅಮಿತ್ ಶಾ ಕಚೇರಿಯವರು ಅವರ ಕರೆ ಬಂದ ಮೇಲೆ ಕರೆತೀವಿ ಎಂದರು. ನಂತರ ಅವರ ಭೇಟಿಯ ಅವಶ್ಯಕತೆ ಇಲ್ಲ ಎಂದಿದ್ದಾರೆ ಎಂದು ಕಚೇರಿಯವರು ತಿಳಿಸಿದರು. ಹೊರಡ್ಲಾ ಎಂದೆ ಹೋಗಬಹುದು ಎಂದರು. ಆದರೆ ಅವರ ಭೇಟಿಗೆ ನಿರಾಕರಿಸಿದ್ದಾರೆ ಎಂದು ಬಿಂಬಿಸಲಾಗಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು..

ಅವರು ಹೊರಡು ಎಂದಿರುವುದು ನೀನು ಸ್ಪರ್ಧಿಸು ಎಂಬ ಪರೋಕ್ಷಸಂದೇಶವಾಗಿದೆ. ಈ ಹಿಂದೆಯೇ ನಾನು ಸ್ಪರ್ಧೆಗೆ ಏಕೆ ಎಂದು ಸ್ಪಷ್ಟಪಡಿಸಿದ್ದೆ. ಹಿಂದುತ್ವದ ಹೋರಾಟ ಮಾಡಿರುವ ಅಮಿತ್ ಶಾರಿಗೆ ಕರ್ನಾಟಕದಲ್ಲಿ ಬಿಜೆಪಿಯ ಶುದ್ಧೀಕರಣ ಅನಿರ್ವಾಯಕ್ಕಾಗಿ ಸ್ಪರ್ಧೆ ಎಂದಿರುವೆ.

ಪಕ್ಷ ಶುದ್ಧೀಕರಣ, ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದ ಲ್ಲಿ ಬಿಎಸ್ ವೈ ವಿರುದ್ಧ ನಾನು ಆಕ್ಷೇಪಿಸಿರುವ ಪ್ರಶ್ನೆಗೆ ಅಮಿತ್ ಶಾ ಬಳಿ ಯಾವುದೇ ಉತ್ತರ ಇರಲಿಲ್ಲ. ಹಾಗಾಗಿ ಅವರು ಹೊರಡು ಎಂದಿದ್ದಾರೆ ಎಂದು ಹೇಳಿದ ಈಶ್ವರಪ್ಪ ಈ ಬಾರಿ ಚುನಾವಣೆ ಗೆದ್ದು ನಂತರ ಭೇಟಿ ಮಾಡುವೆ ಎಂದರು.

ಎಲ್ಲೂ ಗೊಂದಲವಿಲ್ಲ. ಅವರ ಅಪೇಕ್ಷೆ ಈಶ್ವರಪ್ಪ ಗೆದ್ದು ತೋರಿಸಲಿ ಎಂದು ಇದ್ದೆ. ಅವರ ನಿರ್ಣಯ ಸ್ವಾಗತಿಸುವೆ. ಚುನಾವಣೆ ಸಂದರ್ಭವಾದುದರಿಂದ ರಾಜ್ಯಾಧ್ಯಕ್ಷರ ಬದಲಾವಣೆ ಅನಿವಾರ್ಯವಾಗಿತ್ತು. ಶುದ್ಧೀಕರಣದ ಬಗ್ಗೆ ಮಾತನಾಡಿರುವುದಕ್ಕೆ ಚರ್ಚೆ ಆರಂಭವಾಗಿದೆ.

ದೊಡ್ಡವರನ್ನೂ ಮಚ್ಚಿಸಲು ದೆಹಲಿಗೆ ಹೋಗಿದ್ದೆ. ಭಗವಂತ ರಾಜ್ಯದಲ್ಲಿ ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತಿ ತೋರಲಿದ್ದಾನೆ. ಇನ್ನೂ ಯಾರೂ ಸಂಧಾನಕ್ಕೆ ಬರೊಲ್ಲ. ಕಾಂಗ್ರೆಸ್ ಜೆಡಿಎಸ್ ಆದಿಯಾಗಿ ಎಲ್ಲರೂ ಬೆಂಬಲಿಸಲಿದ್ದಾರೆ.

ವಿಜೇಂದ್ರರಿಗೆ ಸಹೋದರನ ಸೋಲಿನ ಭೀತಿ‌ ಬಂದಿದೆ. ಮತ್ತೊಮ್ಮೆ ಅವರು ಈಶ್ವರಪ್ಪನವರನ್ನ ಸಮಾಧಾನ ಗೊಳಿಸಲಾಗುವುದು ಎಂದು ಹೇಳಿಕೆಕೊಟ್ಟರೆ ಬೇರೆ ರೀತಿಯ ಭಾಷೆಯಲ್ಲಿ ಮಾತನಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೀತರನ್ನ ಡಮ್ಮಿ ಎಂದು ಹಗುರವಾಗಿ ಹೇಳಿಲ್ಲ. ನಾಗರಾಜ ಗೌಡ ಮತ್ತು ಗೋಣಿ ಮಾಲ್ತೇಶ್ ಎಂಬ ಯುವಕನನ್ನ ಶಿಕಾರಿಪುರದಲ್ಲಿ ಬಲಿಕೊಟ್ಟರು. ಗೀತಾ ನನ್ನ ಸಹೋದರಿ. ಬಿಎಸ್ ವೈ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ತಾ ಇದ್ದಾರೆ ಎಂದು ಹೇಳಿದ್ದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಗೂ ಮುನ್ನ ದೆಹಲಿಯಿಂದ ಬಂದ ಈಶ್ವರಪ್ಪ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮನೆಯವರೆಗೆ ಬೈಕ್ ರ್ಯಾಲಿಯಲ್ಲಿ ಅಭಿಮಾನಿಗಳು ಕರೆತಂದರು.ನಂತರ ಮನೆಯಲ್ಲೇ ಸುದ್ದಿಗೋಷ್ಠಿ ನಡೆಸಲಾಯಿತು.

ಮೋದಿ ಯಾರಪ್ಪನ ಮನೆ ಆಸ್ತಿಯಲ್ಲ. ಹಾಗಾಗಿ ನಾನು ಹೃದಯದಲ್ಲಿ ಇಟ್ಟುಕೊಂಡಿರುವೆ. ಅಪ್ಪಮಕ್ಕಳತರ ಅಲ್ಲ ಎಂದು ಬಿಎಸ್ ವೈ ಕುಟುಂಬದ ವಿರುದ್ಧ ಹರಿಹಾಯ್ದ ಈಶ್ವರಪ್ಪ ಮೋದಿ ಪೋಟೋ ಬಳಸುವೆ ಎಂದರು.

ಮತ್ತೆ ದಹಲಿಯಿಂದ ಕರೆ ಬಂದರೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ‌ ಕರೆದರೆ ಹೋಗುವೆ ಆದರೆ ಚುನಾವಣೆಯಿಂದ ಹಿಂದೆ ಸರಿಯಲ್ಲ. ಮೊದಲ ಬಾರಿಗೆ ಸಂಘದ ಮಾತು ಮುರಿದಿರುವೆ. ಹಾಗಾಗಿ ಗೌರವಪೂರಕವಾಗಿ ಹೋಗಿ ಬರುವೆ ಆದರೆ ಸ್ಪರ್ಧೆಯಿಂದ ಹಿಂದೆ ಸರಿಯೊಲ್ಲ ಎಂದರು.

ಇದನ್ನೂ ಓದಿ-https://suddilive.in/archives/12089

Related Articles

Leave a Reply

Your email address will not be published. Required fields are marked *

Back to top button