ರಾಜಕೀಯ ಸುದ್ದಿಗಳು

ಮೋದಿ ಫೊಟೊ ಬಳಕೆಗೆ ಈಶ್ವರಪ್ಪನವರಿಂದ ಕಾನೂನು ಹೋರಾಟ

ಸುದ್ದಿಲೈವ್/ಶಿವಮೊಗ್ಗ

ಮೋದಿ ಭಾವಚಿತ್ರಕ್ಕಾಗಿ ಬಳಸುವುದಾಗಿ ಹೇಳಿರುವ ಮಾಜಿ ಡಿಸಿಎಂ ಈಶ್ವರಪ್ಪ ನ್ಯಾಯಾಲಯದಿಂದ ಕೆವಿಟ್ ತಂದಿದ್ದು ಬಿಜೆಪಿ ಅಭ್ಯರ್ಥಿಗೆ ಸೆಡ್ಡು ಹೆಡೆದಿದ್ದಾರೆ.

ಮೋದಿ ಪೋಟೊ ಬಳಕೆ ಬಗ್ಗೆ ಬಿಗ್ ಫೈಟ್ ಶುರುವಾಗಿತ್ತು. ಸಂಸದರಾದ ಬಿ ವೈ ರಾಘವೇಂದ್ರ ಅವರು ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪನವರು ಮೋದಿ ಭಾವಚಿತ್ರ ಬಳಸಿಕೊಂಡು ಪ್ರಚಾರಕ್ಕೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

ಇದಕ್ಕೆ ಉತ್ತರ ನೀಡಿದ ಈಶ್ವರಪ್ಪನವರು ಮೋದಿ ಭಾವಚಿತ್ರ ಯಾರು ಬೇಕಾದರೂ ಬಳಸಿಕೊಳ್ಳಬಹುದು ಮೋದಿ ಏನು ಅವರಪ್ಪನ ಆಸ್ತಿನಾ ಎಂದು ತಿರುಗೇಟು ನೀಡಿದ್ದರು.

ಮೋದಿ ಅವರ ಭಾವಚಿತ್ರವನ್ನು ಬಳಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಈಶ್ವರಪ್ಪನವರು ನ್ಯಾಯಾಲಯದಲ್ಲಿ  ಕೆವಿಯಟ್  ಸಲ್ಲಿಸಿದ್ದು ಮೋದಿ ಅವರ ಭಾವಚಿತ್ರವನ್ನು ಬಳಸಿಕೊಳ್ಳುವುದನ್ನು ಕಾನೂನಾತ್ಮಕವಾಗಿ ತಡೆಯಲು ಪ್ರಯತ್ನಿಸಿದ್ದಾರೆ.

ಅದಕ್ಕೆ ಮುನ್ನೆಚ್ಚರಿಕೆವಾಗಿ ತಾವು ಭಾರತದ ಪ್ರಧಾನಿಯ ಭಾವಚಿತ್ರವನ್ನು ಉಪಯೋಗಿಸುತ್ತಿದ್ದು ಭಾರತೀಯ ಸಂವಿಧಾನದಲ್ಲಿ ಎಲ್ಲಾ ಭಾರತೀಯರು ಹೆಮ್ಮೆಯ ಪ್ರಧಾನಿಯ ಭಾವಚಿತ್ರವನ್ನು ಬಳಸಿಕೊಳ್ಳಲು ಅವಕಾಶವಿದೆ.

ಅದರ ವಿರುದ್ಧ ಯಾರಾದರೂ ದಾವೇ ಹೂಡಿದರೆ ತಡೆಯಲು ಮುಂಜಾಗ್ರತ ಕ್ರಮವಾಗಿ ಘನ ನ್ಯಾಯಾಲಯದಲ್ಲಿ ಕೆವಿಯಟ್ ಸಲ್ಲಿಸಿದ್ದು ಇದರ ಅವಧಿ ಮೂರು ತಿಂಗಳಾಗಿರುತ್ತದೆ.

ಚುನಾವಣೆ ಮುಗಿಯುವ ವರೆಗೂ ಕೆವಿಟ್ ನ ಅವಧಿ ಇರುವುದರಿಂದ ಅಲ್ಲಿಯವರೆಗೆ ಮೋದಿ ಭಾವಚಿತ್ರ ಬಳಸಿಕೊಳ್ಳಲು ಈಶ್ವರಪ್ಪನವರ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ-https://suddilive.in/archives/12204

Related Articles

Leave a Reply

Your email address will not be published. Required fields are marked *

Back to top button