ರಾಜಕೀಯ ಸುದ್ದಿಗಳು

ದೇಶದ ಚುನಾವಣೆಯನ್ನ ಕಾಂಗ್ರೆಸ್ ಗ್ರಾಪಂ ಚುನಾವಣೆ ಮಟ್ಟಕ್ಕಿಳಿಸಿದೆ-ಡಿ.ಎಸ್.ಅರುಣ್

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆ ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯುತ್ತಿದೆ. ರಾಜ್ಯ ಸರ್ಕಾರದ ಧೋರಣೆ ಗಮನಿಸಿದರೆ, ಗ್ರಾಮಪಂಚಾಯಿತಿ ಮಟ್ಟದಲ್ಲಿ ನಡೆಯುವ ಚುನಾವಣೆಯಂತೆ ಕಾಂಗ್ರೆಸ್ ದೇಶದ ಚುನಾವಣೆಯನ್ನ ನೋಡುತ್ತಿದೆ ಎಂದು ಎಂಎಲ್ ಸಿ ಡಿ.ಎಸ್.ಅರುಣ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಚುನಾಣೆಯ ಬಗ್ಗೆ ಆರ್ಥಿಕ, ಸುರಕ್ಷಿತ ಮತ್ತು ಆರ್ಥಿಕ ವ್ಯವಸ್ಥೆಗಳ ಜೊತೆ ಸ್ಥಳೀಯ ಸಮಸ್ಯೆ ಬಗ್ಗೆ ಮಾತನಾಡಬೇಕು ಎಂದರು.

ಕರ್ನಾಟಕ, ತೆಲಂಗಾಣ ವಿಧಾನಸಭೆ ಚುನಾವಣೆ ಗೆದ್ದಾಗ ರಾಹುಲ್ ಗಾಂಧಿಯ ಗೆಲುವು ಎನ್ನುವ ಕಾಂಗ್ರೆಸ್ ನಾಯಕರು ಛತ್ತೀಸ್ ಘಡ್ ಸೋತಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಸೋಲು ಎಂದು ಅವರ ಪಕ್ಷದ ಅಧ್ಯಕ್ಷರನ್ನೇ ಅಪಮಾನಿಸುವಂತೆ ಮಾತನಾಡಿದರು.

ಸುಳ್ಳುಗಳನ್ನ ಹೇಳುತ್ತಾ ಬಂದಿರವ ಕಾಂಗ್ರೆಸ್ 15 ಲಕ್ಷ ಯಾರಾದ್ದಾದರಾ ಬ್ಯಾಂಕ್ ಖಾತೆಗೆ ಹಣ ಬಂತ ಎಂದು ಹೇಳುವ ಮೂಲಕ ಬಿಜೆಪಿಗೆ ಟಕ್ಕರ್ ನೀಡಲು ಯತ್ನಿಸುತ್ತಿದೆ. ದುರ್ಬಲವಾಗಿದ್ದ ಭಾರತವನ್ನ ಆರ್ಥಿಕ ಸ್ಥಿತಿಯನ್ನ 11 ನೇ ಸ್ಥಾನದಿಂದ ವಿಶ್ವದ ಐದನೇ ಸ್ಥಾನಕ್ಕೆ ತರಲಾಗಿದೆ. ಆದರೆ ಕಾಂಗ್ರೆಸ್ ಆರ್ಥಿಕ ನೀತಿ, ಸುರಕ್ಷತ ಭಾರತ ಮತ್ತು ಅಂತ್ಯೋದಯ ಕ್ಷೇತ್ರದ ಬಗ್ಗೆ ಮಾತನಾಡುತ್ತಿಲ್ಲ.

ಕೃಷಿ, ವ್ಯಾಪಾರದಲ್ಲ ಬದಲಾವಣೆ ತರಲಾಗಿದೆ. ಉದ್ಯೋಗವಾಗಿಲ್ಲ ಎಂಬುದನ್ನ ಕಾಂಗ್ರೆಸ್ ಹೇಳ್ತಾ ಇದೆ. ಭವಿಷ್ಯನಿಧಿಯಲ್ಲಿ ಕಾಂಗ್ರೆಸ್ ಏನು ಕೊಡುಗೆ ನೀಡಿದೆ. ಎಂಎಸ್ ಎಂಇ ಯಲ್ಲಿ 34 ಕೋಟಿ ಜನ ಉದ್ದಿಮೆದಾರರಾಗಿದ್ದಾರೆ. ನಾವು ನೀಡಿರುವ ಯೋಜನೆಯಲ್ಲಿಉದ್ಯೋಗ ಕಲ್ಪಿಸಿರುವ ಬಗ್ಗೆ ಮಾತನಾಡದ ಕಾಂಗ್ರೆಸ್ ರೆವೆನ್ಯೂ ಎಕ್ಸಪೆಂಡಿಚರ್ ಮತ್ತು ತೆರಿಗೆ ಸಂಗ್ರಹದ ಬಗ್ಗೆ ನೋಡಿದರೆ ಬಜೆಟ್ ನಲ್ಲಿ ಹಣ ಸಂಗ್ರಹದ ಕೊರತೆ ಎದ್ದು ಕಾಣುತ್ತಿದೆ ಎಂದರು.

ಕೈಗಾರಿಕಾ ಕ್ಷೇತ್ರದ ಸಚಿವ ಎಂಬಿ ಪಾಟೀಲ್ ಅವರ ಟ್ವಿಟ್ಟರ್ ಅಕೌಂಟ್ ನಲ್ಲಿ ಮಾತ್ರ ಉದ್ಯೋಗ ಸೃಷ್ಠಿಯಾದಂತೆ ಕಾಣಿಸುತ್ತಿದೆ. ಸರ್ಕಾರದಿಂದ ಯಾವ ಉದ್ಯೋಗವೂ ಸೃಷ್ಠಿಯಾಗಿಲ್ಲ.‌ ಎಂಪಿಗಳು ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸುವ ಕಾಂಗ್ರೆಸ್ ಗೆ ಗೊತ್ತಿಲ್ಲವೆಂದರೆ ಕೇಳಬೇಕು. ನಮ್ಮ ತೆರಿಗೆ ನಮ್ಮ ಹಕ್ಕಿನ ವಿಚಾರದಲ್ಲಿ ತೆರಿಗೆ ಉತ್ಪಾದನೆಯ ಬಗ್ಗೆ ಕಾಂಗ್ರೆಸ್ ಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು.

2.93 ಲಕ್ಷ ಕೋಟಿ ಕಳೆದ ಹತ್ತುವರ್ಷದಲ್ಲಿ ಬಿಜೆಪಿ ಕೇಂದ್ರ ಸರ್ಕಾರ ನೀಡಿದೆ ಇದೇ ಯುಪಿಎ ಸರ್ಕಾರದ 10 ವರಷದ ಅವಧಿಯಲ್ಲಿ 83 ಸಾವಿರ ಕೋಟಿ ಹಣ ಕರ್ನಾಟಕಕ್ಕೆ ಬಂದಿದೆ. ಇದರಲ್ಲಿ ಎಷ್ಟು ಪರ್ಸೆಂಟೇಜ್ ಹಣ ಹೆಚ್ಚಾಯಿತು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಸಂಗ್ರಹದ ಹಣ ಅಭಿವೃದ್ಧಿಗೆ ಎತ್ತಿಡಲಾಗುತ್ತಿಲ್ಲ.‌ 2021-2022 ಮತ್ತು 2023-2024 ರ ವಾರ್ಷಿಕ ಯೋಜನೆಯಲ್ಲಿ ಬಿಎಸ್ ವೈ ಸರ್ಕಾರ ಮತ್ತು ಬೊಮ್ಮಾಯಿ ಸರ್ಕಾರ. ಸಾಲ ಮಾಡಲು ಅವಕಾಶ ಇದ್ದರೂ ಮಾಡಲಿಲ್ಲ. ಆದರೆ ಪ್ರಸಕ್ತ ಸರ್ಕಾರ ಬಜೆಟ್ ನಲ್ಲಿಯ 51 ಸಾವಿರ ಕೋಟಿ ಹಣ ಬಿಟ್ಟು ಬೇರೆ ಯಾವುದೇ ಹಣ ಅಭಿವೃದ್ಧಿ ಗೆ ವಿನಿಯೋಗಿಸುತ್ತಿಲ್ಲ. ಇದು 2024-2025ರಲ್ಲೂ ಅಭಿವೃದ್ಧಿಯ ಶೂನ್ಯ ವರ್ಷವಾಗಿ ಮುಂದುವರೆಯಲಿದೆ ಎಂದರು.

ಇದನ್ನೂ ಓದಿ-https://suddilive.in/archives/12573

Related Articles

Leave a Reply

Your email address will not be published. Required fields are marked *

Back to top button