ಶೈಕ್ಷಣಿಕ ಸುದ್ದಿಗಳು

ಪಿಯುಸಿ ಪರೀಕ್ಷೆ-310 ಜನ ವಿದ್ಯಾರ್ಥಿಗಳು ಗೈರು

ಸುದ್ದಿಲೈವ್/ಶಿವಮೊಗ್ಗ

ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದೆ. ಮಾರ್ಚ್ ಮೊದಲನೇ ದಿನದಿಂದ‌ಮಾ.22 ರ ವರೆಗೆ ಈ ಪರೀಕ್ಷೆ ನಡೆಯಲಿದೆ.

ಮೊದಲನೆ ದಿನ ಕನ್ನಡ ಭಾಷ ಪರೀಕ್ಷೆ ನಡೆದಿದ್ದು, ಜಿಲ್ಲೆಯಲ್ಲಿ 15348 ಜನ ವಿದ್ಯಾರ್ಥಿಗಳು ಇಂದು ಪರೀಕ್ಷೆಗೆ ಹಾಜರಾಗಬೇಕಿತ್ತು. ಇದರಲ್ಲಿ 15038 ಜನ‌ವಿದ್ಯಾರ್ಥಿಗಳು ಹಾಜರಾಗಿದ್ದರು.

310 ಜನ ವಿದ್ಯಾರ್ಥಿಗಳು ಮೊದಲನೇ ಪ್ರರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಪ್ರತಿವರ್ಷ ಈ ಗೈರು ಹಾಜರಿ ಮಾಮೂಲಿಯಾಗಿದೆ. ಜಿಲ್ಲೆಯಲ್ಲಿ 36 ಪರೀಕ್ಷಾ ಕೇಂದ್ರಗಳನ್ನ ತೆರೆಯಲಾಗಿದೆ. ನಗರದಲ್ಲಿ 13 ಪರೀಕ್ಷಾ ಕೇಂದ್ರಗಳನ್ನ ನಿರ್ಮಿಸಲಾಗಿತ್ತು.

ಪರೀಕ್ಷೆ ಶಾಂತಿಯುತವಾಗಿ ನಡೆದಿದ್ದು ಯಾವುದೇ ಕಾಪಿ ಹೊಡೆಯುವ ಪ್ರಕರಣಗಳು ವರದಿಯಾಗಿಲ್ಲವೆಂದು ಡಿಡಿಪಿಯು ಕೃಷ್ಣಪ್ಪ ಸುದ್ದಿಲೈವ್ ಗೆ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9858

Related Articles

Leave a Reply

Your email address will not be published. Required fields are marked *

Back to top button