ಕ್ರೈಂ ನ್ಯೂಸ್

ನಿರುದ್ಯೋಗಕ್ಕೆ ಹೊಯ್ತಾ ಜೀವ?

ಸುದ್ದಿಲೈವ್/ಸಾಗರ

ಮನೆಯ ಟೆರಸ್ ಮೇಲೆ ನೀರಿನ ಟ್ಯಾಂಕ್ ಕೂರಿಸಲು ನಿರ್ಮಿಸಲಾಗಿರುವ ಕಬ್ಬಿಣದ ಸರಳಿನ ಸ್ಟ್ಯಾಂಡ್ ಗೆ  ವ್ಯಕ್ತಿಯೋರ್ಯ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಘಟನೆ ನಗರದ ನೆಹರೂ ನಗರದಲ್ಲಿ ಶುಕ್ರವಾರ ನಡೆದಿದೆ.

55 ವರ್ಷದ ಮಧುಸೂದನ್ ಎಂಬ ವ್ಯಕ್ತಿ ತನ್ನ ಸಂಬಂಧಿಕರ ಮನೆಯ ಟ್ರೆಯಸ್ ಮೇಲೆ ಇರುವ ಸಿಂಟೆಕ್ಸ್ ಸ್ಟಾಂಡ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ನಡೆದಿರುವ ಕಟ್ಟಡದ ಮುಂಭಾಗದಲ್ಲಿ ಗಾರೆ ಕೆಲಸ ಮಾಡುತ್ತಿರುವ ಕೆಲಸಗಾರರು ವ್ಯಕ್ತಿ ನೇಣು ಬಿಗಿದು ಕೊಂಡಿರುವುದನ್ನು ಕಂಡು ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಸಾಗರದ ಹೆಸರಾಂತ ಬೇಕರಿಯೊಂದರಲ್ಲಿ  ಹಲವು ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದ ಮಧುಸೂದನ್ ಕೆಲವು ತಿಂಗಳುಗಳ ಹಿಂದೆ ಬೇಕರಿ ಕೆಲಸ ಬಿಟ್ಟಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ನಂತರ ಉದ್ಯೋಗ ಆರಿಸಿ ವಿವಿಧ ಕಡೆ ಉದ್ಯೋಗ ಮಾಡುತ್ತಿದ್ದ ಮಧುಸೂದನ್ ಇಂದು ಶಿರಸಿಗೆ ಉದ್ಯೋಗ ಕೇಳಲು ಹೋಗಬೇಕಾಗಿತ್ತು ಎಂದು ಕುಟುಂಬ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ನಿರುದ್ಯೋಗಕ್ಕೆ ವ್ಯಕ್ತಿ ಬಲಿಯಾಗಿರುವುದಾ ಅಥವಾ ಬೇರೆ ಕಾರಣಗಳಿವೆಯಾ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಮಧುಸೂದನ್ ರವರ ನಿವಾಸ ಎಸ್ಎನ್ ನಗರದ ನಾಲ್ಕನೇ ತಿರುವಿನಲ್ಲಿ ಇದ್ದು ನೆಹರೂ ನಗರದಲ್ಲಿ ಇರುವ ತನ್ನ ಸಂಬಂಧಿಕರ ಮನೆಯಲ್ಲಿ 10 ದಿನಗಳಿಂದ ನೆಲೆಸಿದ್ದರು ಎಂದು ತಿಳಿದುಬಂದಿದೆ. ಮೃತಪಟ್ಟ ವ್ಯಕ್ತಿಗೆ ತಾಯಿ, ಹೆಂಡತಿ ಹಾಗೂ ಎರಡು ಗಂಡು ಮಕ್ಕಳಿದ್ದು ಓರ್ವ ಹಿರಿಯ ಮಗ ಹೊರದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾನೆ ಮತ್ತೊರ್ವ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾನೆ.

ಸ್ಥಳಕ್ಕೆ 112 ಪೊಲೀಸ್ ವಾಹನದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ .

ಇದನ್ನೂ ಓದಿ-https://suddilive.in/archives/9853

Related Articles

Leave a Reply

Your email address will not be published. Required fields are marked *

Back to top button