ಶೈಕ್ಷಣಿಕ ಸುದ್ದಿಗಳು

ಗ್ರಾಮೀಣ ವಿದ್ಯಾರ್ಥಿನಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಆಯ್ಕೆ

ಸುದ್ದಿಲೈವ್/ಶಿವಮೊಗ್ಗ

ಹಾರೋಗೊಳಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸಾನಿಕ B D ರಾಜ್ಯಮಟ್ಟಕ್ಕೂ ಮತ್ತು ಕುಮಾರಿ ಶ್ರೀ ಲಕ್ಷ್ಮಿ M U ಜಿಲ್ಲಾ ಮಟ್ಟಕ್ಕೂ ಆಯ್ಕೆ ಆಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ.

7ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಸಾನಿಕ ದಿನಾಂಕ ಮೂರು ಜನವರಿ 2024ರಂದು ನಡೆದ ತಾಲೂಕು ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಬಂಧ ಗೋಷ್ಠಿ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡು, ದಿನಾಂಕ 6 ಜನವರಿ 24ರಂದು ಸೊರಬದಲ್ಲಿ ನಡೆದ 18ನೇ ಜಿಲ್ಲಾಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಘೋಷ್ಠಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಕ್ಕೆ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿರುತ್ತಾಳೆ.

ಹಾಗೆಯೇ ಬಹುಮುಖ ಪ್ರತಿಭೆಯ ಈ ವಿದ್ಯಾರ್ಥಿನಿ ಪ್ರತಿಭಾ ಕಾರಂಜಿಯ ಅಭಿನಯ ಗೀತೆ ವಿಭಾಗದಲ್ಲಿ ಮತ್ತು ಆಶುಭಾಷಣೆ ವಿಭಾಗದಲ್ಲಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾಳೆ .ಈಕೆಯು ಬಾಲನ ಕೊಡುಗೆಯ ಶ್ರೀ ದೇವರಾಜ್ ಮತ್ತು ಶ್ರೀಮತಿ ವಿನಂತಿ ದಂಪತಿಯ ಪುತ್ರಿಯಾಗಿರುತ್ತಾಳೆ.

ಶಾಲೆಯ ಮತ್ತೋರ್ವ ಏಳನೇ ತರಗತಿ ವಿದ್ಯಾರ್ಥಿನಿಯಾದ ಕುಮಾರಿ ಶ್ರೀ ಲಕ್ಷ್ಮಿ M U ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಕಥೆ ಹೇಳುವ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡು ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾಳೆ. ಈಕೆಯು ಮಧುಗೆರೆಯ ಶ್ರೀ ಉದಯ್ ಕುಮಾರ್ ಮತ್ತು ಶ್ರೀಮತಿ ಜಯಂತಿ ದಂಪತಿಯ ಪುತ್ರಿ ಯಾಗಿರುತ್ತಾಳೆ.

ಶಾಲೆಗೆ ಕೀರ್ತಿ ತಂದಿರುವ ಈ ಇಬ್ಬರು ವಿದ್ಯಾರ್ಥಿನಿಯರನ್ನು, ಮತ್ತು ಇವರನ್ನು ತರಬೇತಿಗೊಳಿಸಿದ ಶಿಕ್ಷಕ ವೃಂದವನ್ನು SDMC ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಹಾರ್ದಿಕವಾಗಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/6562

Related Articles

Leave a Reply

Your email address will not be published. Required fields are marked *

Back to top button