ಶೈಕ್ಷಣಿಕ ಸುದ್ದಿಗಳು

ನೂತನ ಕುಲಸಚಿವರಾಗಿ ಶಿವರಾಜು.ಪಿ ನೇಮಕ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ (ಆಡಳಿತ)ಸರ್ಕಾರ ಮೈಸೂರಿನ ಎಡಿಸಿ (ಅಪರ ಜಿಲ್ಲಾಧಿಕಾರಿ) ಆಗಿದ್ದ ಶಿವರಾಜು ಪಿ ನೇಮಕಗೊಂಡಿದ್ದಾರೆ.

ಇದುವರೆಗೂ ಪ್ರಭಾರಿಯಾಗಿ ಶಿವಮೊಗ್ಗದ ಸಿಇಒ ಸುಧಾಕರ್ ಲೋಖಂಡೆ ಅವರು ನೇಮಕಗೊಂಡಿದ್ದರು. ಶಿವರಾಜು ಅವರ ನೇಮಕದಿಂದ ಸಿಇಒ ಲೋಖಂಡೆ ಅವರ ಪ್ರಭಾವಿ ನೇಮಕಾತಿ ಕೊನೆಗೊಂಡಿದೆ.‌ ಶಿವರಾಜು ಅವರು ಎಂ ಪದವೀಧರರಾಗಿದ್ದು ಕೆಎಎಸ್ ನ ಶ್ರೇಣಿಯ ಅಧಿಕಾರಿಯಾಗಿದ್ದಾರೆ.

ಮೈಸೂರಿನ ಎಡಿಸಿ ಆಗಿದ್ದ ಶಿವರಾಜು ಅವರನ್ನ ವರ್ಗಾವಣೆ ಮಾಡಿ ಅವರ ಕಾರ್ಯಸ್ಥಾನದ ಜಾಗವನ್ನ‌ ಕಾಯ್ದಿರಿಸಿ ಆದೇಶಿಸಿತ್ತು. ಆದರೆ ಇಂದು ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ಸರ್ಕಾರ ನೇಮಕಾತಿ ಮಾಡಿದೆ.

ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕಗೊಂಡಿದ್ದ ಶಿವರಾಜು ಪಿ ಅವರ ಮುಂದೆ ದೊಡ್ಡ ದೊಡ್ಡ ಸವಾಲುಗಳೇ ಇವೆ. ವಿವಿಯಲ್ಲಿರುವರುವ ಬ್ಯಾಕ್ ಲಾಗ್ ನೇಮಕಾತಿಗಳು, ಅತಿಥಿ ಉಪನ್ಯಾಸಕರಿಗೆ ಮತ್ತು ಔಟ್ ಸೋರ್ಸ್ ಸಿಬ್ಬಂದಿಗಳಿಗೆ  ನಿಗದಿತ ದಿನಾಂಕದಲ್ಲಿ ಸಂಬಳ ಮಾಡುವಂತದ್ದು

ಸ್ಮಾರ್ಟ್ ಕ್ಲಾಸ್ ಗಳ ಅವ್ಯವಹಾರವೂ ಸಹ‌ ನೂತನವಾಗಿ ಆಗಮಿಸವ ಕುಲಸಚಿವರಿಗೆ ಸವಾಲಾಗಿದೆ. ದೂರ ಶಿಕ್ಷಣದ ಬಗ್ಗೆನೂ ಕುಲಸಚಿವರು ಅನುಕೂಲ ಮಾಡಿಕೊಡಬೇಕಿದೆ. ಮೈಸೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣಕ್ಕೆ ಮಾತ್ರ ಅವಕಾಶ ಕಲ್ಪಿಸಿರುವ ಸರ್ಕಾರ ಈ ಆದೇಶದಿಂದ ಸಡಿಲಗೊಳಿಸಿದ್ದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅವೆಲ್ಲಾದಕ್ಕೂ ಹೆಚ್ಚಾಗಿ ವಿವಿಯ ರ್ಯಾಕಿಂಗ್ ಮಟ್ಟವನ್ನ ಏರಿಸುವುದು ದೊಡ್ಡ ಸವಾಲಾಗಿದೆ. ಇದನ್ನ ಹೇಗೆ ನಿಭಾಯಿಸಲಿದ್ದಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/8109

Related Articles

Leave a Reply

Your email address will not be published. Required fields are marked *

Back to top button