ರಾಜ್ಯ ಸುದ್ದಿಗಳು

3½ ಯಿಂದ 4 ಲಕ್ಷ ಮತಗಳ ಅಂತರದಿಂದ ರಾಘಣ್ಣನನ್ನ ಗೆಲ್ಲಿಸಿ-ಬಿ.ವೈ.ವಿಜೇಂದ್ರ

ಸುದ್ದಿಲೈವ್/ಶಿವಮೊಗ್ಗ

ಎರಡು ಕಾರಣದಿಂದ ಎಸ್ ಟಿ ಮೋರ್ಚಾ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ತಿಳಿಸಿದರು.

ಅವರು ಶಿಕಾರಿಪುರದಲ್ಲಿರುವ ಹಳೇ ಮೈದಾನದ ಮಾರಿಕಾಂಬ ಬಯಲು ರಂಗ ಮಂದಿರಲದಲ್ಲಿ ತಾಲೂಕಿನ ಬಿಜೆಪಿ ಎಸ್ ಸಿ ಎಸ್ ಟಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್ ಎಸ್ ಸಿ ಎಸ್ ಟಿ ಉದ್ಧಾರಕ ಎಂದು ಹೇಳಿಕೊಂಡು‌ಬರುತ್ತಿದೆ. ಆದರೆ ಪರಿಶಿಷ್ಟ ಜಾತಿ ಮತ್ತು‌ ಶೋಷಿತ ಜನರನ್ನ ತುಳಿಯುತ್ತಾ ಬಂದಿದೆ. ಬಿಜೆಪಿ ಶೋಷಿತ ವರ್ಗದವರ ಬೆನ್ನಿಗೆ ನಿಂತಿದೆ ಎಂದು‌ ಕರೆ ನೀಡಿದರು.

ಸಂಸದ ರಾಘವೇಂದ್ರ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ. ಈ ಬಾರಿ 3½ ದಿಂದ 4 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಕರೆನೀಡಿದರು. ಸ್ವಾತಂತ್ರ್ಯ ಬಂದು 60 ವರ್ಷ ಕಾಂಗ್ರೆಸ್ ಅಧಿಕಾರ ನಡೆಸಿದೆ. ಬಾಬಾ ಸಾಹೇಬರ ಹೆಸರನ್ನ ಹೇಳಿಕೊಂಡು ಬಂದ‌ಕಾಂಗ್ರೆಸ್ ಯಾವ ರೀತಿ ನ್ಯಾಯವನ್ನೂ ನೀಡಲಿಲ್ಲ.

ಅಂಬೇಡ್ಕರ್ ಗೆ ಭಾರತ ರತ್ನ ಕೊಡುವ ಕೆಲಸ ಆಗಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿಅವರು ವಿಪಿ ಸಿಂಗ್ ಪ್ರಧಾನಿ ಆದಾಗ‌ ಕೊಡಿಸುವ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಅವರ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಜಾಗ ನೀಡಲಿಲ್ಲ. ನೆಹರೂ ಅವರ ಅಂತ್ಯ ಸಂಸ್ಕಾರಕ್ಕೆ 52 ಎಕರೆ ನೀಡಲಾಯಿತು. ಅಂಬೇಡ್ಕರ್ ಅವರಿಗೆ ಭೂಮಿ ನೀಡಲು ನಿರಾಕರಿಸಿರುವುದರ ಹಿಂದೆ ಕಾಂಗ್ರೆಸ್ ನ ದುರುದ್ದೇಶವಿದೆ  ಎಂದು ದೂರಿದರು.

ಅಂಬೇಡ್ಕರ್ ಅವರನ್ನ ಲೋಕಸಭಾ‌ ಚುನಾವಣೆಯಲ್ಲಿ ಸೋಲಿಸಲಾಗುತ್ತದೆ. ಇದು ಕಾಂಗ್ರೆಸ್ ನ ಕೊಡುಗೆ. ಅಂಬೇಡ್ಕರ್ ಅವರಿಗೆ ಶಾಶ್ವತ ಗೌರವ ನೀಡಿದವರು ಬಿಜೆಪಿಯ ಪ್ರಧಾನಿ ಮೋದಿ ಎಂದು ಹೇಳಿದರು. ಪರಿಶಿಷ್ಟ ಜಾತಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀತಿಗೆ ಬಜೆಟ್ ನಲ್ಲಿ ಮೊದಲಬಾರಿಗೆ 1100 ಕೋಟಿ ಕೊಟ್ಟಿದ್ದರು. ಈಗ ಅದು 6000 ಕೋಟಿ ಅನುದಾನವಾಗಿ ಬೆಳೆದಿದೆ ಎಂದರು.

ಬಿಜೆಪಿಗೆ ಮೂವರು ರಾಷ್ಟಪತಿಗಳನ್ನ ಆರಿಸಲಾಗಿದೆ ಮೊದಲಿಗೆ ಅಬ್ದುಲ್ ಕಲಾಂ, ರಾಮನಾಥ್ ಕೋವಿಂದ್, ದ್ರೌಪತಿ ಮುರ್ಮು ಅವರನ್ನ ಆಯ್ಕೆ ಮಾಡಿದೆ. ತುಳಿತಕ್ಕೆ ಒಳಗಾದವರನ್ನ ದೇಶದ ಉತ್ತಮ ಸ್ಥಾನಕ್ಕೆ ಏರಿಸಿದ ಕೀರ್ತಿ ಸಲ್ಲುತ್ತದೆ. ಬಣಜಾರ ಸಮುದಾಯಕ್ಕೆ ತಾಂಡ ಅಭಿವೃದ್ಧಿ ನಿಗಮ ರಚನೆ ಆಗಿದೆ. ಭೋವಿ ಅಭಿವೃದ್ಧಿ ನಿಗಮ, ವಾಲ್ಮೀಕಿ ಜಯಂತಿಗೆ ರಜೆ ಘೋಷಣೆ ಬಿಎಸ್ ವೈ ಮುಖ್ಯ ಮಂತ್ರಿ ಆದಾಗ ಎಂದು ಹೇಳಿದರು.

ಕಾಂಗ್ರೆಸ್ ನಿಂದ ಬಡವರ ಅಭಿವೃದ್ಧಿಯಾಗಿಲ್ಲ. ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಗೆಲುವಿನ ವಾತಾವರಣ ನಿರ್ಮಾಣವಾಗಿದೆ. ಸಂಸದ ರಾಘವೇಂದ್ರ ಅವರನ್ನ ಶಿಕಾರಿಪುರದಲ್ಲಿ ಹೆಚ್ಚು ಲೀಡ್ ನೀಡಿ ದೊಡ್ಡ ಅಂತರದಲ್ಲಿ ಗೆಲ್ಲಿಸಲು ಕರೆ ನೀಡಿದರು.

ಕಾರಜೋಳ ಮಾತು

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಜನನಾಯಕ ಎನಿಸಿಕೊಂಡವರು ಬಿಎಸ್ ವೈ ಮತ್ತು ಪ್ರಧಾನಿ‌ಮೋದಿಯವರು, ಸಮಾಜಕಲ್ಯಾಣ ವ್ಯವಸ್ಥೆಗೆ ಮುರಾರ್ಜಿ ದೇಸಾಯಿ ಶಾಲೆಗೆ ಸ್ವಾತಂತ್ರ್ಯ ಬಂದು 75 ವರ್ಷಗಳಿಗೆ ಕಟ್ಟಡ ನಿರ್ಮಾಣ ಅಭಿವೃದ್ಧಿಗೆ ಅತಿ ಹೆಚ್ಚು ಹಣಕೊಟ್ಟವರು ಬಿಎಸ್ ವೈ ಎಂದರು.

ಪ್ರಧಾನಿ ಮೋದಿ ಮಗದೊಮ್ಮೆ ಪ್ರಧಾನಿಯಾಗಲು ಬಿವೈ ಆರ್ ಸಂಸದರಾಗಬೇಕು. ಸಂಸದರಾಗಿ ಕೇಂದ್ರ ಸಚಿವರಾಗಬೇಕು ಎಂದರು.

ಮಾಜಿ ಸಿಎಂ ಬಿಎಸ್ ವೈ, ಸಂಸದ ಬಿ.ವೈ ರಾಘವೇಂದ್ರ, ಸುನೀಲ್ ವಲ್ಲಾಪುರ, ಮಾಜಿ ಸಚಿವ ರಾಜೂಗೌಡ ಕುಡಚಿರಾಜು, ಅಶೋಕ್ ನಾಯ್ಕ್, ಎಸ್ಟಿ ಮೋರ್ಚಾದ ಅಧ್ಯಕ್ಷ‌ ಹರೀಶ್, ಹನುಮಂತಪ್ಪ, ಬಳೇಗಾರ್, ಗುರುಮೂರ್ತಿ ಉಪಸ್ಥಿತರಿದ್ದರು.

ರಾಘಣ್ಣನನ್ನ ಗೆಲ್ಲಿಸಿ

ಮುಖಂಡ ರಾಜೂ ಗೌಡ ಮಾತನಾಡಿ, ಮೋದಿ ಪ್ರಧಾನಿಯಾಗಲು  ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಹೇಳಲ್ಲ ಆದರೆ ನಮ್ಮನ್ನ ನಾವು ರಕ್ಷಣೆ ಮಾಡಲು ಮೋದಿಯನ್ನ ಪ್ರಧಾನಿಯಾಗಬೇಕು. ಶತೃ ದೇಶದ ಪರ ನಿನ್ನೆ ವಿಧಾನ ಸಭೆಯಲ್ಲಿ ಕರೆಯಲಾಗಿತ್ತು. ನಾವು ಜೈ ಶ್ರೀರಾಮ್ ಕೂಗಿದ್ದಕ್ಕೆ ಪಾಕ್ ಪರ ಘೋಷಿಸಿದ್ದಾರೆ. ನಾವು ಜೈ ಭೀಮ್ ಎನ್ನು ತ್ತೇವೆ ಜೈಶ್ರೀರಾಮ್ ಎನ್ನುತ್ತೇವೆ. ಜೈ ಜಗಜೀವನ್ ರಾಮ್ ಎನ್ನುತ್ತೇವೆ. ನಿಮಗೆ ಈ ಘೋಷಣೆ ಕೂಗಲು ಸಾಧ್ಯನಾ ಎಂದು ಪ್ರಶ್ನಿಸಿದರು. ಹೀಗಾಗಗಿ ನಮ್ಮನ್ನ ರಕ್ಷಿಸಿಕೊಳ್ಳಲು ಪ್ರಧಾನಿ ಮೋದಿಯನ್ನ ಗೆಲ್ಲಿಸಲು ರಾಘಣ್ಣನನ್ನ ಗೆಲ್ಲಿಸಬೇಕು ಎಂದರು.

ಇದನ್ನೂ ಓದಿ-https://suddilive.in/archives/9726

Related Articles

Leave a Reply

Your email address will not be published. Required fields are marked *

Back to top button