ಭದ್ರ ನೀರು ಬಿಡುಗಡೆ ಕುರಿತು ಡಿಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ-ಜಲಾಶಯದ ಕಂಡೀಷನ್ ಹೇಗಿದೆ?

ಸುದ್ದಿಲೈವ್/ಶಿವಮೊಗ್ಗ

ಮಳೆಯ ಕೊರತೆಯಿಂದಾಗಿ ಭದ್ರನದಿಯ ನೀರು ಈಗ 40.1 ಅಡಿಗೆ ಕುಸಿದಿದೆ. ಈ ಹಿಂದೆ ಕಾಡಾ ಸಭೆಯಲ್ಲಿ ಭದ್ರಾ ಜಲಾಶಯದ ನೀರನ್ನ ನದಿಗೆ ಆನ್ ಅಂಡ್ ಆಫ್ ಸಿಸ್ಟಮ್ ನಲ್ಲಿ ಬಿಡುಗಡೆ ಮಾಡಲು ನಿರ್ಧಾರವಾಗಿತ್ತು. ಇದರ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆ ಜಲಾಶಯದಿಂದ ನೀರು ಬಿಡಲು ತೀರ್ಮಾನಿಸಿದೆ. ಆದರೆ ನೀರಿನ ಪರಿಸ್ಣಿತಿ ಹೇಗಿದೆ? ಇವುಗಳ ಬಗ್ಗೆ ತಿಳಿಯೋಣ!
ಆದರೆ ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಕುಮಾರಕೃಪದಲ್ಲಿ ಸಚಿವ ಮಧು ಬಂಗಾರಪ್ಪ, ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್, ದಾವಣಗೆರೆಯ ಶಾಸಕ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಜೊತೆ ಸಭೆ ನಡೆಸಿ ನೀರು ಬಿಡಲು ತೀರ್ಮಾನ ಕೈಗೊಳ್ಳಲಾಗಿದೆ.

ಅ.16 ಕ್ಕೆ ಈ ಆನ್ ಅಂಡ್ ಆಫ್ ಸಿಸ್ಟಮ್ ಅವಧಿ ಮುಗಿಯಲಿದೆ. ಆನ್ ಅಂಡ್ ಆಫ್ ಸಿಸ್ಟಮ್ ಆರಂಭಕ್ಕೂ ಮುನ್ನ ಆ. 9 ರಿಂದ ಮುಂದಿನ 100 ದಿನಗಳ ವರೆಗೆ ಜಲಾಶಯದಿಂದ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಯಾವಾಗ ಚನ್ನಗಿರಿ, ತರೀಕೆರೆ, ಶಿವಮೊಗ್ಗ ಗ್ರಾಮಾಂತ ಭಾಗದ ರೈತರು ಪ್ರತಿಭಟನೆ ನಡೆಸಿ 100 ದಿನ ನಿರಂತರ ನೀರು ಬಿಡದಂತೆ ತೀರ್ಮಾನಕೈಗೊಳ್ಳಲಾಗಿತ್ತು.
ಆನ್ ಅಂಡ್ ಆಫ್ ಸಿಸ್ಟಮ್ ಜಾರಿಗೆ ತಂದಾಗ ದಾವಣಗೆರೆ ಭಾಗದ ರೈತರು ಸಹ ಪ್ರತಿಭಟಿಸಿ 100 ದಿನ ನಿರಂತರ ನೀರು ಹರಿಸಲು ಒತ್ತಾಯಿಸಿದ್ದರು. ಆದರೆ ಆನ್ ಅಂಡ್ ಆಫ್ ವ್ಯವಸ್ಥೆಯಿಂದ ಬದಲಾಗಲಿಲ್ಲ. ಆದರೆ ಅ.16 ಕ್ಕೆ ಈ ವ್ಯವಸ್ಥೆ ಮುಕ್ತಾಯಗೊಳ್ಳಲಿದ್ದು ದಾವಣಗೆರೆಗೆ ನೀರು ಹರಿಸುವ ಕುರಿತು ಡಿಕೆಶಿ ನೇತೃತ್ವದಲ್ಲಿ ನಡೆದ ಸಭೆ ಮಹತ್ವ ಪಡೆದುಕೊಂಡಿದೆ.
ಸಭೆಯಲ್ಲಿ ಭದ್ರ ಜಲಾಶಯದಿಂದ ನೀರು ಬಿಡಲು ತೀರ್ಮಾನಿಸಲಾಗಿದೆ. ಆದರೆ ಆನ್ ಅಂಡ್ ಆಫ್ ಸಿಸ್ಟಮ್ ಮುಂದುವರೆಯುತ್ತಾ ಅಥವಾ ನೀರು ನಿರಂತರವಾಗಿ ಹರಿಸಲಾಗುತ್ತಾ ಎಂಬುದೇ ಕುತೂಹಲದ ವಿಷಯವಾಗಿದೆ. ಸಧ್ಯಕ್ಕೆ 40.1 ಟಿಎಂಸಿ ನೀರು ಸಂಗ್ರಹ ವಾಗಿದೆ. 29 ಅಡಿಗೆ ನೀರು ಡೆಡ್ ಸ್ಟೋರೇಜ್ ಗೆ ಬರಲಿದೆ. 7 ಟಿಎಂಸಿ ನೀರು ಕುಡಿಯುವ ನೀರಿಗೆ ಉಳಿಸಿಕೊಳ್ಳಬೇಕು.
ಉಳಿದ 4 ಟಿಎಂಸಿ ನೀರು ಮಾತ್ರ ಜಲಾಶಯದ ನೀರು ಹರಿಸಲಾಗುತ್ತದೆ. ಇದು ಹೇಗೆ ಬಿಡಲಾಗುತ್ತದೆ ಎಂಬುದೇ ಕುತೂಹಲದ ವಿಷಯವಾಗಿದೆ.
ಇದನ್ನೂ ಓದಿ-https://suddilive.in/archives/1271
