ರಾಜ್ಯ ಸುದ್ದಿಗಳು

ವಾರದ ರಜೆಯ ಭತ್ಯೆಯನ್ನು ಸಂಘದ ಬೇಡಿಕೆಯಂತೆ ಪರಿಷ್ಕರಣೆ-ಸಿ.ಎಸ್.ಷಡಾಕ್ಷರಿ ಭರವಸೆ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ, ಶಿವಮೊಗ್ಗ ವಿಭಾಗಿಯ ಶಾಖೆ ಶಿವಮೊಗ್ಗ ವತಿಯಿಂದ 2024ನೇ ಸಾಲಿನ ದಿನಚರಿ ಮತ್ತು ದಿನದರ್ಶಿಕೆ ಬಿಡುಗಡೆ ಸಮಾರಂಭ, ನಿವೃತ್ತ ಗಸ್ತು ಅರಣ್ಯ ಪಾಲಕರು ಮತ್ತು ಅರಣ್ಯ ವೀಕ್ಷಕರಿಗೆ ಸನ್ಮಾನ ಹಾಗೂ ಮುಖ್ಯಮಂತ್ರಿ ಪದಕ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮವು ಇಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಶ್ರೀಗಂಧ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಕೆ ಟಿ ಹನುಮಂತಪ್ಪ (ಭಾ. ಅ. ಸೇ ) ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಶಿವಮೊಗ್ಗ ವೃತ್ತ ಶಿವಮೊಗ್ಗ ಇವರು ಮಾಡಿದರು.  ಸಿ ಎಸ್ ಷಡಕ್ಷರಿ ಮಾನ್ಯ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರ ಘನ ಉಪಸ್ಥಿತಿಯಲ್ಲಿ ನಡೆಯಿತು.

ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಉಪವಲಯ ಅರಣ್ಯ ಅಧಿಕಾರಿ ಹುದ್ದೆ ಶೇಕಡ 100ರಷ್ಟು ಮುಂಬಡ್ತಿಯಿಂದಲೇ ಭರ್ತಿ ಮಾಡುವುದಾಗಿ ಭರವಸೆ ನೀಡಿದರು.‌ಆರನೆಯ ವರದಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗ 2 ರಂತೆ ಅರಣ್ಯ ಇಲಾಖೆಯ ಕ್ಷೇತ್ರ ಮುಂಚಣಿ ಸಿಬ್ಬಂದಿ ಉಪ ವಲಯ ಅರಣ್ಯ ಅಧಿಕಾರಿ ಹುದ್ದೆಯನ್ನು ಶೇಕಡ 100 ರಷ್ಟು ಮುಂಬಡ್ತಿಯ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು  ಭರವಸೆ ನೀಡಿದರು ವಾರದ ರಜೆಯ ಭತ್ಯೆಯನ್ನು ಸಂಘದ ಬೇಡಿಕೆಯಂತೆ ಪರಿಷ್ಕರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜು ಲಿಂಬು ಚವ್ಹಾಣ, ಅಧ್ಯಕ್ಷರು ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಶಿವಮೊಗ್ಗ ವೃತ್ತ ಶಿವಮೊಗ್ಗ ಇವರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು  ಅಶೋಕ್ ಕುಮಾರ್ ಎಸ್ ಪಿ, ಗಸ್ತು ಅರಣ್ಯ ಪಾದಕರು ಶಿವಮೊಗ್ಗ ವನ್ಯಜೀವಿ ವಲಯ ಇವರು ಮಾಡಿದರು.

ಗಣ್ಯರನ್ನು ಸಂತೋಷ್ ಕುಮಾರ್ ಎಂ ಗಸ್ತು ಅರಣ್ಯಪಾಲಕ ಮಂಡಗದ್ದೆ ವಲಯ ಇವರು ಸ್ವಾಗತಿಸಿದರು. ಮೋಹನ್ ಕುಮಾರ್ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು, ಪ್ರಸನ್ನ ಕೃಷ್ಣಪಟಗಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವನ್ಯಜೀವಿ ವಿಭಾಗ ಶಿವಮೊಗ್ಗ, ಶ್ರೀ ಆದರ್ಶ ವಲಯ ಅರಣ್ಯಾಧಿಕಾರಿಗಳು ಮಂಡಗದ್ದೆ ವಲಯ, ಹನುಮಂತರಾಯ ಪ್ರಭಾರ ವಲಯ ಅರಣ್ಯ ಅಧಿಕಾರಿಗಳು ಅರಣ್ಯ ಸಂಚಾರಿದಳ ಶಿವಮೊಗ್ಗ,

ರಶೀದ್ ಬೇಗ್ ಎಚ್ ಕಾರ್ಯದರ್ಶಿ ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಶಿವಮೊಗ್ಗ ವೃತ್ತ ಶಿವಮೊಗ್ಗ,  ಗೌಸ್ ಖಾನ್ ಅಧ್ಯಕ್ಷರು ಆನೆಕಾವಾಡಿ ಆನೆ ಮಾವುತರ ಸಂಘ ಸಕ್ರೆಬೈಲ್,  ಫಾರೂಕ್ ಬಾಷಾ ಅಧ್ಯಕ್ಷರು ವಾಹನ ಚಾಲಕರ ಸಂಘ ಶಿವಮೊಗ್ಗ,  ಗಂಗಾಧರಪ್ಪ ಅಧ್ಯಕ್ಷರು ಡಿ ದರ್ಜೆ ನೌಕರರ ಸಂಘ ಶಿವಮೊಗ್ಗ ಉಪಸ್ಥಿತರಿದ್ದರು. 2021-22ನೇ ಸಾಲಿನಲ್ಲಿ ಮುಖ್ಯಮಂತ್ರಿ ಪದಕ ವಿಜೇತರಾದ  ರಾಘವೇಂದ್ರ ಕೊಡಗಲ್ ಉಪ ವಲಯ ಅರಣ್ಯಾಧಿಕಾರಿಗಳು ಸಂಶೋಧನಾ ವಲಯ ತೀರ್ಥಳ್ಳಿ, ರಾಜೇಂದ್ರ ಉಪ ವಲಯ ಅರಣ್ಯಾಧಿಕಾರಿಗಳು ಮೇಗರವಳ್ಳಿ ವಲಯ,  ಮೊಹಮ್ಮದ್ ಫಯಾಜ್ ನಿವೃತ್ತ ವಾಹನ ಚಾಲಕರು, ರಾಮಚಂದ್ರ ನಿವೃತ್ತಗಸ್ತು ಅರಣ್ಯಪಾಲಕರು ಇವರಿಗೆ ಸಂಘದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಇದನ್ನೂ ಓದಿ-https://suddilive.in/archives/7290

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373