ಜಿಲ್ಲೆಯ ಐದು ಜನ ಪೊಲೀಸ್ ಇನ್ ಸ್ಪೆಕ್ಟರ್ ವರ್ಗಾವಣೆ-ನಗರ ಠಾಣೆಗಳಿಗೆ ಪಿಐ ಆಗಿ ಬರುವವರು ಹೆದರುತ್ತಿದ್ದಾರಾ?

- ಸತ್ಯನಾರಾಯಣ ವೈ- ಕರ್ನಾಟಕ ಲೋಕಾಯುಕ್ತದಿಂದ ಶಿವಮೊಗ್ಗ ಗ್ರಾಂತರ ಠಾಣೆಗೆ ವರ್ಗಾವಣೆ
- ಶ್ರೀಧರ್.ಕೆ-ರಾಜ್ಯ ಗುಪ್ತವಾರ್ತೆ ಇಲಾಖೆಯಿಂದ ಮಾಳೂರು ವೃತ್ತ ಠಾಣೆಗೆ ವರ್ಗಾವಣೆ
- ಅಣ್ಣಯ್ಯ ಕೆ.ಟಿ-ದಾವಣಗೆರೆ ಪೊಲೀಸ್ ಠಾಣೆಯಿಂದ ಶಿವಮೊಗ್ಗ ಜಿಲ್ಲೆ ಡಿಎಸ್ ಬಿ ಗೆ ವರ್ಗಾವಣೆ
- ಸಂತೋಷ್ ಎಂ.ಪಾಟೀಲ್ -ಶಿವಮೊಗ್ಗ ಜಿಲ್ಲ ಡಿ.ಎಸ್.ಬಿಯಿಂದ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಗೆ ವರ್ಗಾವಣೆ
- ಅಂಜನ್ ಕುಮಾರ್ ಕೆ-ದೊಡ್ಡಪೇಟೆ ಪೊಲೀಸ್ ಠಾಣೆಯಿಂದ ಸಿಟಿ ಎಸ್ ಬಿ ಬೆಂಗಳೂರು ನಗರ ಠಾಣೆಗೆ ವರ್ಗಾವಣೆ
ಹೀಗೆ ರಾಜ್ಯಾದ್ಯಂತ 35 ಪೊಲೀಸ್ ಇನ್ ಸ್ಪೆಕ್ಟರ್ ನ್ನ ವರ್ಗಾವಣೆ ಮಾಡಲಾಗಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲೂ ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆಯಾಗಿದೆ. ಅಚ್ಚರಿ ಎಂದರೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಯಾರು ಪಿಐ ಎಂಬುದು ಇನ್ನೂ ಯಾರು ಅಂತ ತೋರಿಸಿಲ್ಲ.

ಈ ಹಿಂದೆನೆ ಇಲ್ಲಿನ ಪಿಐ ವರ್ಗಾವಣೆಯಾಗಿದ್ದರು. ಆದರೆ ಯಾರು ರಿಲೀವರ್ ಇಲ್ಲದೆ ಇವರ ವರ್ಗಾವಣೆ ನಿಂತಿತ್ತು. ಈಗ ಯಾರು ಇವರಿಗೆ ರಿಲೀವರ್ ಎಂಬುದು ತೋರಿಸದೆ ಮತ್ತೆ ವರ್ಗಾಯಿಸಲಾಗಿದೆ. ಈಗಾಗಲೇ ಖಾಲಿ ಇರುವ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ಪಿಐ ಆಗಿದ್ದ ಅಭಯ್ ಪ್ರಕಾಶ್ ಸ್ಥಾನಕ್ಕೆ ಸತ್ಯನಾರಾಯಣ್ ಅವರನ್ನ ವರ್ಗಾವಣೆ ಮಾಡಲಾಗಿದೆ.
ಚುನಾವಣೆಯ ವೇಳೆ ಕೋಟೆ ಪೊಲೀಸ್ ಠಾಣೆಯ ಪಿಐ ಆಗಿ ವರ್ಗಾವಣೆಯಾಗಿದ್ದ ಶಿವಪ್ರಸಾದ್ ಅವರಿಗೆ ಇನ್ನೂ ರಿಲೀವರ್ ಸಿಕ್ಕಿಲ್ಲ. ಆ ಮಧ್ಯದಲ್ಲಿಯೇ ಗ್ರಾಮಾಂತರ ಠಾಣೆಯ ಪಿಐ ಅಮಾನತ್ತು ಮಾಡಲಾಗಿದೆ. ಅದರ ಬೆನ್ನಲ್ಲೇ ದೊಡ್ಡಪೇಟೆ ಪೊಲೀಸ್ ಠಾಣೆಗೆ ಪಿಐ ಆಗಿ ಯಾರು ಎಂಬುದೇ ಸ್ಪಷ್ಟವಾಗದೆ ಅಲ್ಲಿನ ಪೊಲೀಸ್ ಇನ್ ಸ್ಪೆಕ್ಟರ್ ನ್ನ ವರ್ಗಾಯಿಸಲಾಗಿದೆ. ಜಯನಗರದಲ್ಲೂ ಪಿಐ ಇಲ್ಲ. ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ಸಿಪಿಐ ಇಲ್ಲವಾಗಿದೆ.
ನಗರದ ವಿವಿಧ ಠಾಣೆಗೆ ಪಿಐ ಆಗಿ ಯಾರು ಬರುತ್ತಿಲ್ವಾ?
ಇಂತಹದ್ದೊಂದು ಗುಲ್ಲುಹಬ್ವುತ್ತಿದೆ. ಶಿವಮೊಗ್ಗ ಎಂದರೆನೆ ರಾಜಕೀಯ ಹಸ್ತಕ್ಷೇಪ, ಕೋಮು ಸಂಘರ್ಷದ ತವರೂರು ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಈ ಕಾರಣಕ್ಕಾಗಿ ನಗರದ ವಿವಿಧ ಪೊಲೀಸ್ ಠಾಣೆಗೆ ಪಿಐ ಆಗಿ ಬರಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಸಾರ್ವಜನಿಕರ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಈ ಚರ್ಚೆಯನ್ನ ಹರಿಬಿಡಲಾಗಿದೆಯೋ ಅಥವಾ ನಿಜವಾಗಿಯೂ ಈ ಸ್ಥಿತಿ ನಿರ್ಮಾಣವಾಗಿದೆಯೋ ಗೊತ್ತಿಲ್ಲ. ಹರ್ಷನ ಹತ್ಯೆಯ ವೇಳೆ ಪಿಐಗಳು ಆಯಾ ಠಾಣೆಯಲ್ಲಿ ಭದ್ರವಾಗಿ ನೆಲಯೂರಿರುವ ಸಂಬಂಧ ಹತ್ತೆಗಳು ಹೆಚ್ಚಾಗುತ್ತಿದೆ ಎಂಬ ಮಾತು ಕೇಳಿ ಬಂತಿತ್ತು. ಈಗ ಯಾವ ಪಿಐಗಳು ಶಿವಮೊಗ್ಗ ನಗರಕ್ಕೆ ಬರುತ್ತಿಲ್ಲವೆಂದು ಹೇಳಲಾಗುತ್ತಿದೆ.
ಆದರೆ ಶಿವಮೊಗ್ಗ ನಗರದಲ್ಲಿ ಕೋಮು ಸಂಘರ್ಷವನ್ನ ಹತ್ತಿಕ್ಕಲು ಪೊಲೀಸರಿಗೆ ಅದರಲ್ಲೂ ಸ್ಥಳೀಯ ಠಾಣೆಯ ಠಾಣಾಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಡದಿದ್ದರೆ ಈ ಸ್ಥಿತಿ ಮುಂದಿನ ದಿನಗಳಲ್ಲಿ ಗಂಭೀರ ಸ್ಥಿತಿಗೆ ತಲುಪಲಿದೆ. ಆದರೆ ರಾಜಕೀಯ ಹಸ್ತಕ್ಷೇಪ ರಾಜ್ಯದ ಎಲ್ಲಾ ಠಾಣೆಗಳಲ್ಲೂ ಇದೆ. ಕೋಮು ಸಂಘರ್ಷ ಹೆಚ್ಚಲು ರಾಜಕಾರಣಿಗಳ ಹಸ್ತ ಕ್ಷೇಪವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ-https://suddilive.in/archives/1609
