ರಾಜ್ಯ ಸುದ್ದಿಗಳು

ಮಂಗನ ಕಾಯಿಲೆ-ಸಧ್ಯಕ್ಕೆ ಶಿವಮೊಗ್ಗ ತಣ್ಣಗೆ

ಸುದ್ದಿಲೈವ್/ಶಿವಮೊಗ್ಗ

ಮಂಗನ ಕಾಯಿಲೆ ಕುರಿತಂತೆ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಮೂರು ದಿನಗಳ ಹಿಂದೆ 11 ಜನರಲ್ಲಿ ಕೆಎಫ್ ಡಿ ಪಾಸಿಟಿವ್ ಕಾಣಿಸಿಕೊಡಿತ್ತು. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೆಲ್ತ್ ಬುಲಿಟಿನ್ ತಿಳಿಸಿದೆ‌

ಆದರೆ 11 ಜಿಲ್ಲೆಯಲ್ಲಿ ಈ ಕೆಎಫ್ ಡಿ ಅತಿ ಹೆಚ್ಚು ಭಾದಿತ ಜಿಲ್ಲೆಗಳಾಗಿವೆ. 11ಜಿಲ್ಲೆಯಲ್ಲಿ ಇವತ್ತು ಎರಡು ಜಿಲ್ಲೆಗಳಲ್ಲಿ ಕೆಎಫ್ ಡಿ ಪಾಸಿಟಿವ್ ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಮತ್ತು ಶಿರಸಿ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಒಟ್ಟು ಎರಡು ಜಿಲ್ಲೆಯಿಂದ ಎರಡು ಕೆಎಫ್ ಡಿ ಪ್ರಕರಣ ಕಾಣಿಸಿಕೊಂಡಿದೆ.

ಇಂದು 170 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 148 ಶಿವಮೊಗ್ಗ ಜಿಲ್ಲೆಯ ಜನರನ್ನ ಒಳಪಡಸಲಾಗಿತ್ತು.  ಅದರೆ ಯಾರಿಗೂ ಸೋಂಕು ಪತ್ತೆಯಾಗಿಲ್ಲ. ಶಿರಸಿ ಜಿಲ್ಲೆಯಲ್ಲಿ 10 ಜನರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. 33 ಜನರಲ್ಲಿ 1 ರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.

ಚಿಕ್ಕಮಗಳೂರಿನಲ್ಲಿ 7 ಜನರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಜನವರಿ 1, 2024 ರಿಂದ ಇವತ್ತಿನ ವರೆಗೆ 2737 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. 70 ಜನರಲ್ಲಿ ಸೋಂಕು ಪತ್ತೆಯಾಗಿದೆ. 41 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಲ್ಲಿ ಎರಡು ಸಾವಾಗಿದೆ. ಒಟ್ಟು 27 ಜನರಲ್ಲಿ ಸೋಂಕು ಇದೆ ಎಂದು ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.

ಇದನ್ನೂ ಓದಿ-https://suddilive.in/archives/8628

Related Articles

Leave a Reply

Your email address will not be published. Required fields are marked *

Back to top button