ರಾಜ್ಯ ಸುದ್ದಿಗಳು

ಶುದ್ಧ ನೀರು ಘಟಕ ನಿರ್ಮಾಣಕ್ಕಾಗಿ ಜಿಪಂ ಮುಂದೆ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸೋಮಿನಕೊಪ್ಪದ ಬಳಿಯ ಅಬ್ಬಲಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೋಜಪ್ಪ ಹೊಸೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮತ್ತು ಬಾಕ್ಸ್ ಚೆರಂಡಿ ನಿರ್ಮಾಣಕ್ಕೆ ಆಗ್ರಹಿಸಿ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಜಿಲ್ಲಾ ಪಂಚಾಯಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಖಾಲಿ ಕೊಡಪಾನವನ್ನ ಮುಂದಿಟ್ಟುಕೊಂಡು ಮಹಿಳೆಯರು ಮತ್ತು ಸಂಘಟನೆ ಶುದ್ಧ ಕುಡಿಯುವ ನೀರಿಗಾಗಿ ಮತ್ತು ಬಾಕ್ಸ್ ಚೆರಂಡಿ ನಿರ್ಮಿಸಲು ಆಗ್ರಹಿಸಲಾಯಿತು. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಫ್ಲೈ ಓವರ್ ಗಳಂತಹ ಅಭಿವೃದ್ಧಿ ಕಾಮಗಾರಿಗಳು ನಡೆಯಿತ್ತಿದೆ.‌ಆದರೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಗ್ರಾಮಸ್ಥರು ಪರದಾಡುವಂತಾಗಿದೆ ಎಂದು ಆಗ್ರಹಿಸಿದರು.ಬ

ಗ್ರಾಮದಲ್ಲಿ 300 ಮನೆಗಳಿದ್ದು ಕುಡಿಯುವ ನೀರಿಗಾಗಿ ಬೇರೆ ಬೇರೆ ಗ್ರಾಮಗಳಿಗೆ ತೆರಳಿ ಹೊತ್ತು ತರಬೇಕಿದೆ. ಅಲ್ಲದೆ ಅಧಿಕ ಮಳೆಯಾದಲ್ಲಿ ಮಳೆ ನೀರು ಹರಿದು ಹೋಗಲು ಬಾಕ್ಸ್ ಚರಂಡಿ ನಿರ್ಮಿಸಬೇಕು ಎಂದು ಆಗ್ರಹಿಸಲಾಯಿತು. ಹಲವು ಬಾರಿ ಪಿಡಿಒಗೆ ಮನವಿ ನೀಡಿದರು ಯಾವ ಪ್ರಯೋಜನವಾಗಿಲ್ಲ. ಬೇರೆ ಉರಿಗೆ ಹೋದರು

ವೇದಿಕೆ ಅಧ್ಯಕ್ಷ ಎಂ ಮುಕ್ಮುಲ್ ಅಹಮದ್, ಗ್ರಾಮಾಂತರ ಘಟಕದ ಅಧ್ಯಕ್ಷ, ಹಬೀಬುಲ್ಲ, ದಾದಾ ಖಲಂದರ್, ಇಮ್ತೀಯಾಜ್ ಖಾನ್, ನಗರ ಅಧ್ಯಕ್ಷ ರಾಮಕೃಷ್ಣ, ಗೌಸ್ ಫೀರ್, ಅನ್ಸರ್ ಪಾಶಾ, ಸಯ್ಯದ ಜಬೀರ್, ತುಳಸಮ್ಮ, ಮುಬೀನಾ ಕೌಸರ್, ಹಾಗೂ ಗ್ರಾಮಸ್ಥರು ಉಪಸ್ಥಿತರು.

ಇದನ್ನೂ ಓದಿ-https://suddilive.in/archives/9370

Related Articles

Leave a Reply

Your email address will not be published. Required fields are marked *

Back to top button