ಹೊಸ ಹೊಸ ಕಾರೀದಿಸಲು ಹಣ ಇದೆಯಲ್ವಾ? ದಸರಾಕ್ಕೆ ಕೇವಲ 20-ಲಕ್ಷನಾ? ಕೆಬಿಪಿ

ಸುದ್ದಿಲೈವ್/ಶಿವಮೊಗ್ಗ

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹೆಚ್ ಡಿ ಕುಮಾರ್ ಸ್ವಾಮಿ ಅವರನ್ನ ನೇಮಕ ಮಾಡಿದ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರ ಕ್ರನವನ್ನ ಸ್ವಾಗಿಸುವುದಾಗಿ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಕೆ.ಬಿ.ಪ್ರಸನ್ನಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಹೆಚ್.ಡಿ. ಕುಮಾರಸ್ವಾಮಿ ರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷರಾದ ದೇವೆಗೌಡ್ರು ಪಕ್ಷದ ನಾಯಕರ ಜೊತೆ ಚರ್ಚಿಸಿ ನಿರ್ಧರಿಸಿದ್ದಾರೆ.ಇವರ ಆಯ್ಕೆಯನ್ನು ಜೆಡಿಎಸ್ ಶಿವಮೊಗ್ಗ ಜಿಲ್ಲಾ ಘಟಕ ಸ್ವಾಗತಿಸುತ್ತದೆ ಎಂದು ತಿಳಿಸಿದರು.
ಕೋಟಿ ಕೋಟಿ ಕಾರು ಖರೀದಿಸಲಾಗುತ್ತದೆ ದಸರಾ ಹಬ್ಬ ಮಾಡಲು ಹಣವಿಲ್ಲವಾ?
ದಸರಾ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸೂಕ್ತವಾದ ಹಣ ಬಿಡುಗಡೆ ಮಾಡಬೇಕು. ಮೈಸೂರಿನ ನಂತರ ಶಿವಮೊಗ್ಗ ದಸರಾವನ್ನು ಅದ್ದೂರಿಯಾಗಿ ಅಚರಿಸಲಾಗುತ್ತೆ. ಹಿಂದಿನ ಎಲ್ಲಾ ಸರ್ಕಾರದ ಅವಧಿಯಲ್ಲಿ ಒಂದು ಕೋಟಿ ಹಣ ನೀಡಲಾಗ್ತಿತ್ತು ಎಂದು ಅವರು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ ಅವರು ಸಿಎಂ ಆದಾಗಲೇ ದಸರಾ ಹಬ್ಬಕ್ಕೆ 1 ಕೋಟಿ ಕೊಟ್ಟಿದ್ದರು. ಆದ್ರೇ, ಈ ರಾಜ್ಯ ಸರ್ಕಾರ ಕೇವಲ 20 ಲಕ್ಷ ರೂ. ಮಾತ್ರ ನೀಡಿದೆ. ಇನ್ನು ಕಾಲ ಮಿಂಚಿಲ್ಲ, ಈಗಲಾದ್ರೂ ಸರ್ಕಾರ ದಸರಾಗೆ ಹಣ ಕೊಡಬೇಕು ಎಂದರು.
ಸರ್ಕಾರದಲ್ಲಿ ಹಣ ಇಲ್ಲ ಅನಿಸುತ್ತಿಲ್ಲ. ಹೊಸ ಹೊಸ ಕಾರು ತಗೋತ್ತಾ ಇದ್ದಾರಲ್ಲಾ. ಪಾಲಿಕೆಯಲ್ಲಿನ ಜನರ ತೆರಿಗೆ ಹಣ ಬಳಸಿ, ದಸರಾ ಆಚರಿಸೋದು ಸೂಕ್ತ ಅಲ್ಲ. ಹಾಗಾಗೀ ಸರ್ಕಾರ ತ್ವರಿತವಾಗಿ ದಸರಾ ಹಬ್ಬಕ್ಕೆ ಹಣ ಬಿಡುಗಡೆ ಮಾಡಬೇಕು ಎಂದರು.
ಲೋಡ್ ಶೆಡ್ಡಿಂಗ್
ರಾಜ್ಯದಲ್ಲಿ ವಿದ್ಯುತ್ ಗೊತ್ತು- ಗುರಿಯಿಲ್ಲದೇ ಕಟ್ ಅಗ್ತಿದೆ. ರೈತರು, ವಿದ್ಯಾರ್ಥಿಗಳು ಎಲ್ಲರಿಗೂ ಇದರಿಂದ ಸಮಸ್ಯೆಯಾಗುತ್ತಿದೆ. ದುಡ್ಡು ಕೊಡ್ತೇವೆ ಎಂದರೂ ಇವರು ಕರೆಂಟ್ ಕೊಡ್ತಾ ಇಲ್ಲ. ಸರ್ಕಾರ ನಿರೀಕ್ಷೆಯಿಲ್ಲದ ಭಾಗ್ಯಗಳನ್ನು ಕೊಡುತ್ತಿರುವುದರಿಂದ ಈ ಎಲ್ಲಾ ವ್ಯವಸ್ಥೆಗಳು ಉಲ್ಟ ಹೊಡೆಯುತ್ತಿದೆ ಎಂದು ಮಾಜಿ ಶಾಸಕ ಪ್ರಸನ್ನಕುಮಾರ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ-https://suddilive.in/archives/1633
