ಕ್ರೈಂ ನ್ಯೂಸ್

ಹೊಳಲೂರು ಮಳೆ ಮಾಪನದಲ್ಲಿ ಕಳ್ಳತನ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ತಾಲೂಕಿನ ಹೊಳಲೂರಿನಲ್ಲಿರುವ ಮಳೆಮಾಪನ ಕೇಂದ್ರವನ್ನ ಕಿಡಿಗೇಡಿಗಳು ಗೈದ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೊಳಲೂರು ಗ್ರಾಮದ ಸಾಮಾನ್ಯ ಮಳೆ ಮಾಪನ ಕೇಂದ್ರ. ನಂ-2 ಜಲ ಮಾಪನ ಶಿವಮೊಗ್ಗದಲ್ಲಿ ಸಹಾಯಕ ಕಾರ್ಯಪಾಲ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ವಿನಾಯಕ ಬಾಲಹುಣಸಿ ಎಂಬುವರು ಠಾಣೆಗೆ ದೂರು ನೀಡಿದ್ದಾರೆ.

ಹೊಳಲೂರು ಗ್ರಾಮದ ಸಾಮಾನ್ಯ ಮಳೆ ಮಾಪನ ಕೇಂದ್ರದಲ್ಲಿ ಸ್ಥಳಿಯ ನಿವಾಸಿಯಾದ Prt time Gauge Reader ರವರಾದ ರೇವಪ್ಪ ಎಂ.ಪಿ ರವರು ಫೆ.11 ರಂದು ಬೆಳ್ಳಿಗ್ಗೆ 08-30 ಗಂಟೆ ಸಮಯದಲ್ಲಿ ಮಳೆ ಮಾಪನ ಕೇಂದ್ರಕ್ಕೆ ಭೇಟಿ ನೀಡಿದಾಗ ಯಾರೋ ಕಿಡಿಗೇಡಿಗಳು ಮಾಪನ ಕೇಂದ್ರವನ್ನು ಸಂಪೂರ್ಣ ಹಾಳು ಮಾಡಿ ಮಾಪನ ಕೇಂದ್ರದ ಬೇಲಿ ಕಂಬಗಳನ್ನು ಸಂಪೂರ್ಣ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ.

ಮಾಪನ ಕೇಂದ್ರದಲ್ಲಿದ್ದ 5.50 x 5.50 ಮೀ ಹೊಂದಿದ್ದ ಕೇಂದ್ರದ 1.65 ಮೀಟರ್ ಉದ್ದದ 25 ಕಂಬಗಳು, 0.60 x 0.45 ಅಳತೆಯ ನಾಮಫಲಕ, 12 x 12 gaugeತಂತಿ ಬೇಲಿ 1.0 x 1.0 mtr ಗೇಟ್ ತಂತಿ ಬೇಲಿ ಕಂಬಗಳನ್ನು ಕಳವು ಮಾಡಲಾಗಿದೆ. ಕಳುವಾದ ವಸ್ತುಗಳ ಮೌಲ್ಯ 75.000/ ರೂ ಎಂದು ಅಂದಾಜಿಸಲಾಗಿದೆ.

ಮೇಲಾಧಿಕಾರಿಯವರಿಗೆ ವಿಚಾರ ತಿಳಿಸಿ, ಈ ದಿನ ಸರ್ಕಾರಿ ಆಸ್ತಿಯನ್ನು ಕಳವು ಮಾಡಿಕೊಂಡು ಹೋಗಿರುವವರ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಅಭಿಯಂತರರು ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9180

Related Articles

Leave a Reply

Your email address will not be published. Required fields are marked *

Back to top button