ರಾಜಕೀಯ ಸುದ್ದಿಗಳು

ನಿರುತ್ಸಾಹದ ಬಜೆಟ್-ಆಮ್ ಆದ್ಮಿ ಆರೋಪ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಸಿಎಂ ಸಿದ್ದರಾಮಯ್ಯ ನವರು ಮಂಡಿಸಿರುವ ಬಜೆಟ್ ಸಂಪೂರ್ಣ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ಆಮ್ ಆದ್ಮಿ ಪಕ್ಷದ ನಜೀರ್ ಅಹ್ಮದ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರ ದಾಖಲೆಯ 15 ನೇ ಬಜೆಟ್ ಮಂಡನೆಯಲ್ಲಿ ವಿಶ್ವಾಸದ ಕೊರತೆ ಕಂಡು ಬಂದಿದೆ. ಸಿಎಂ ಅವರು ಗ್ಯಾರೆಂಟಿಗಳ ಗುಂಗಿನಿಂದ ಹೊರಗೆ ಬಂದಿಲ್ಲ. ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ 10 ತಿಂಗಳು ಕಳೆದರೂ ಗ್ಯಾರೆಂಟಿಯನ್ನೇ ಸರಿಯಾಗಿ ಹಂಚಿಲ್ಲ ಎಂದರು.

ಗ್ಯಾರೆಂಟಿಗಳಿಗೆ ಹಣ ಕೊಟ್ಟು ಸಮೃದ್ಧ ಕರ್ನಾಟಕ ಅಧೋಗತಿಗೆ ಇಳಿದಿದೆ. ಕೆ.ಎಸ್.ಆರ್ ಟಿ ಸಿ ಸಿಬ್ಬಂದಿಗಳಿಗೆ ವೇತನ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಸರ್ಕಾರಿ ನೌಕರರಿಗೆ ವೇತನ ಪಾವತಿಯಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತಿವೆ ಎಂದು ದೂರಿದರು.

147 ಕಿಮಿ ವೈಟ್ ಟ್ಯಾಪಿಂಗ್ ಯೋಜನೆಗೆ ಒಟ್ಟು 1700 ಕೋಟಿ ಅನುದಾನ ಬಿಡುಗಡೆ ಮಾಡಿರುವುದು ವ್ಯಾಪಕ ಭ್ರಷ್ಠಾಚಾರ ಎಡೆಮಾಡಿಕೊಟ್ಟಿದೆ.‌ರಾಜ್ಯದಲ್ಲಿ ಬರಗಾಲವುದ್ದರೂಗಮನ ಹರಿಸಿಲ್ಲ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/9171

Related Articles

Leave a Reply

Your email address will not be published. Required fields are marked *

Back to top button