ಸ್ಥಳೀಯ ಸುದ್ದಿಗಳು

ಲಕ್ಷ್ಮಿ ನರಸಿಂಹ ಸ್ವಾಮಿ ರಥೋತ್ಸವ-ರೈಲು ನಿಲುಗಡೆ

ಸುದ್ದಿಲೈವ್/ಶಿವಮೊಗ್ಗ

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ ಪ್ರಯುಕ್ತ ಕೆ.ಆರ್ ನಗರ ತಾಲೂಕಿನ ಅಕ್ಕಿಹೆಬ್ಬಾಳು ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನ ರೈಲ್ವೆ ಇಲಾಖೆ ಪ್ರಕಟಿಸಲಾಗಿದೆ.

ಮುಂಬರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವ ಪ್ರಯುಕ್ತ ರೈಲು ಸಂಖ್ಯೆ 16206/16205 ಮೈಸೂರು-ತಾಳಗುಪ್ಪ-ಮೈಸೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲುಗಳನ್ನು ಫೆಬ್ರವರಿ 21 ರಿಂದ 28, 2024 ರವರೆಗೆ ಅಕ್ಕಿಹೆಬ್ಬಾಳು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಒದಗಿಸಲು ನಿಗದಿಪಡಿಸಲಾಗಿದೆ. ಈ ತಾತ್ಕಾಲಿಕ ನಿಲುಗಡೆಯು ರಥೋತ್ಸವದಲ್ಲಿ ಭಾಗವಹಿಸುವ ಭಕ್ತರ ಅನುಕೂಲವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.

ಅಕ್ಕಿಹೆಬ್ಬಾಳು ನಿಲ್ದಾಣದಲ್ಲಿ ರೈಲುಗಳ ಆಗಮನ / ನಿರ್ಗಮನದ ವಿವರಗಳು ಈ ಕೆಳಗಿನಂತಿವೆ.

1. ರೈಲು ಸಂಖ್ಯೆ 16206 ಮೈಸೂರು-ತಾಳಗುಪ್ಪ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಅಕ್ಕಿಹೆಬ್ಬಾಳು ನಿಲ್ದಾಣಕ್ಕೆ ಬೆಳಿಗ್ಗೆ 06:55 ಗಂಟೆಗೆ ಆಗಮಿಸಿ, 06.56 ಗಂಟೆಗೆ ಹೊರಡಲಿದೆ.

2. ರೈಲು ಸಂಖ್ಯೆ 16205 ತಾಳಗುಪ್ಪ-ಮೈಸೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಅಕ್ಕಿಹೆಬ್ಬಾಳು ನಿಲ್ದಾಣಕ್ಕೆ ರಾತ್ರಿ 08:44 ಗಂಟೆಗೆ ಆಗಮಿಸಿ, 08:45 ಗಂಟೆಗೆ ಹೊರಡಲಿದೆ.

ಇದನ್ನೂ ಓದಿ-https://suddilive.in/archives/9155

Related Articles

Leave a Reply

Your email address will not be published. Required fields are marked *

Back to top button