ಸ್ಥಳೀಯ ಸುದ್ದಿಗಳು

ಶಿವಮೊಗ್ಗದಲ್ಲಿ ಮೂರುದಿನ ಭಾರಿ ಕ್ರಿಕೆಟ್ ಪಂದ್ಯಾವಳಿ

ಸುದ್ದಿಲೈವ್/ಶಿವಮೊಗ್ಗ,ಜ.13

ಇಲ್ಲಿನ ಟೀಮ್ ಮಾಧ್ಯಮದಿಂದ ಎಲ್ಲರೂ ಬಾಗವಹಿಸಬಹುದಾದ ಅಂತರ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯನ್ನು ಜ.26ರಿಂದ 28ರವರೆಗೆ ಶಾರದ ದೇವಿ ಅಂಧರ ವಿಕಾಸ ಕೇಂದ್ರದ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಮಾಧ್ಯಮ ಕಪ್‌ಗೆ ಮಾಧ್ಯಮದವರಲ್ಲದೇ ಎಲ್ಲರೂ ಭಾಗವಹಿಸಬಹುದು ಎಂದು ಟೀಮ್ ಮಾಧ್ಯಮ ತಂಡ ತಿಳಿಸಿದೆ.

ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಮಾಧ್ಯಮ ತಂಡದ ಶಿ.ಜು.ಪಾಶ, ಎಸ್.ಕೆ.ಗಜೇಂದ್ರ ಸ್ವಾಮಿ ಮತ್ತು ಜಿ.ಚಂದ್ರಶೇಖರ್ ಅವರು, ಈ ಪಂದ್ಯಾವಳಿಯು ಪತ್ರಕರ್ತರಿಗೆ ಮಾತ್ರವಲ್ಲ, ರಾಜ್ಯದ ಯಾವುದೇ ತಂಡ ಕೂಡ ಭಾಗವಹಿಸಬಹುದು. ಮೊದಲು ಬಂದವರಿಗೆ ಮೊದಲ ಆಧ್ಯತೆ. ಈ ಪಂದ್ಯಾವಳಿಯಲ್ಲಿ ರೌಂಡ್ ಆರ್ಮ-ಬೌಲರ್‌ಗಳಿಗೆ ಮಾತ್ರ ಅವಕಾಶವಿದ್ದು ಥ್ರೋ ಮತ್ತು ಅಂಡರ್ ಆರ್ಮ್ ಬೌಲರ್‌ಗಳಿಗೆ ಅವಕಾಶ ಇರುವುದಿಲ್ಲ. ಮತ್ತು ಇದು ನಾಕೌಟ್ ಪಂದ್ಯವಾಗಿದೆ ಎಂದರು.

ಪ್ರತಿ ತಂಡಕ್ಕೆ ಪ್ರವೇಶ ಶುಲ್ಕವನ್ನು 5 ಸಾವಿರ ರೂ.ಗಳಿಗೆ ನಿಗಧಿಪಡಿಸಲಾಗಿದೆ. ಜ 22 ರ ಒಳಗೆ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಪ್ರವೇಶ ಶುಲ್ಕವನ್ನು ಬ್ಯಾಂಕ್ ಅಕೌಂಟ್‌ಗೆ ಸಂದಾಯಮಾಡಬೇಕು. ಎಸ್.ಬಿ.ಅಕೌಂಟ್ ನಂ
04281040001911098, IFSC Code IBKL000428/MICR:577259202
ಗೆ ಕಳಿಸಬಹುದು ಎಂದರು.

ಈ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನವಾಗಿ 50,000 ರೂ , 2 ನೇ ಬಹುಮಾನ 25,000ಹಾಗೂ ಸೆಮಿ ಫೈನಲ್‌ನಲ್ಲಿ ಸೋತ ಎರಡು ತಂಡಗಳಿಗೂ ತಲಾ 7,000 ರೂ.ಗಳ ನಗದು ಹಾಗೂ ಆಕರ್ಷಕ ಟ್ರೋಪಿಯನ್ನು ನೀಡಲಾಗುತ್ತದೆ. ಇದರ ಜೊತೆಗೆ ಸರಣಿ ಶ್ರೇಷ್ಠ, ಉತ್ತಮ ಬ್ಯಾಟ್ಸ್‌ಮ್ಯಾನ್, ಬೌಲರ್, ಕೀಪರ್, ಪಿಲ್ಡರ್ ನಗದು ಬಹುಮಾನ ಕೂಡ ಇರುತ್ತದೆ ಎಂದರು.

ಅಂಪೈರ್ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರವೇಶ ಶುಲ್ಕ ನೀಡಿ ಹೆಸರು ನೊಂದಾಯಿಸಿಕೊಂಡತಹ ತಂಡಗಳನ್ನು ಪರಿಗಣನೆಗೆ ತೆಗೆದುಕೊಂಡು ಪಂದ್ಯಾವಳಿಗೆ ಅವಕಾಶ ಮಾಡಿಕೊಡಲಾಗುವುದು. ಇದು 6 ಓವರ್‌ಗಳ ಪಂದ್ಯಾವಳಿಯಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಟೀಮ್ ಮಾಧ್ಯಮದ ಜಿ.ಪದ್ಮನಾಬ್ ಭಟ್, ಸುಧೀರ್ ಇದ್ದರು. ವಿವರಗಳಿಗೆ 9845484824, 9448256183 ಗೆ ಸಂಪರ್ಕಿಸಿ

ಇದನ್ನೂ ಓದಿ-https://suddilive.in/archives/6759

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373