ಸ್ಥಳೀಯ ಸುದ್ದಿಗಳು

ಈ ಮೂವರಿಗೆ ನಮಸ್ಕರಿಸಿ ನೂತನ ದಾಂಪತ್ಯಕ್ಕೆ ಕಾಲಿಟ್ಟ ವಧುವರರು

ಸುದ್ದಿಲೈವ್/ಶಿವಮೊಗ್ಗ

ನಗರದ ಗಾಯಿತ್ರಿ‌ ಮಾಂಗಲ್ಯ ಮಂದಿರದಲ್ಲಿ  ಮದುವೆಯೊಂದು ವಿಶೇಷವಾಗಿ ನಡೆದಿದೆ. ಮದುವೆ ಎಲ್ಲರ ಖಾಸಗಿ ಬದುಕಿನಲ್ಲಿ ನಡೆಯುವ ಕಾಲಘಟ್ಟವೆಂದೇ ಕರೆಯಲ್ಪಡುತ್ತದೆ. ಅದೇ ರೀತಿ ಇಂದು ನಡೆದ ನಿತೀಶ್ ಮತ್ತು ವಿಧ್ಯಾಶ್ರೀ ಅವರ ಮದುವೆ ಸ್ಪೆಷಲ್ ಆಗಿಯೇ ಜರುಗಿದೆ.

ಚಿಕ್ಕಮಗಳೂರಿನ ನೀತೇಶ್, ಶಿವಮೊಗ್ಗ‌ ನಗರದ ಗುರುಪುರದ ಹುಡುಗಿ ವಿದ್ಯಶ್ರೀ ಇಂದು ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ನವಜೀವಕ್ಕೆ ಕಾಲಿಡುವ ವಧುವರರ ಈ ಮದುವೆ ಸಮಾರಂಭ ಗಮನ ಸೆಳೆದಿದೆ. ಸರಳವಾಗಿ ನಡೆದ. ಮದುವೆಯಲ್ಲಿ ಸೈನಿಕ ಉಮೇಶ್ ಬಾಪಟ್,  ರೈತರಾದ ಶೇಖರಪ್ಪ ಮತ್ತು ಪೌರಕಾರ್ಮಿಕ ವೆಂಕಮ್ಮ‌ಗಂಗಯ್ಯ, ನಮಸ್ಕರಿಸಿ ನೂತನ ದಂಪತಿಗಳು ನವ ಜೀವನಕ್ಕೆ ಹೆಚ್ಚೆ ಇಟ್ಟಿರುವುದು ವಿಶೇಷವಾಗಿದೆ.

ಮಾಂಗಲ್ಯ ಶಾಸ್ತ್ರ ಮುಗಿಸಿದ ವಧುವರರು ಈ ರೀತಿ ಮೂವರಿಗೆ ನಮಸ್ಕರಿಸುವ ಹಿಂದೆ ದೇಶಭಕ್ತಿಯ ಸಙದೇಶವಿದೆ. ನೂತನ ಜೀವನಕ್ಕೆ ಕಾಲಿಡುವ ವಧುವರರು ಈ ಮೂವರಿಗೆ ನಮಸ್ಕರಿಸುವ ಮೂಲಕ ದೇಶದ ತ್ರಿವರ್ಣ ಧ್ವಜಕ್ಕೆ ನಮಸ್ಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮುಖ್ಯ ಉದ್ದೇಶವಾಗಿದೆ.

ಸೈನಿಕ ಈ ದೇಶದ ಬಾವುಟದಲ್ಲಿರುವ ಕೇಸರಿಯ ಸಂಕೇತ, ರೈತ ಹಸಿರುನ ಸಂಕೇತ, ಪೌರಕಾರ್ಮಿಕ ಬಿಳಿಯ ಸಂಕೇತ ಎಂಬುದು ನವ ಜೀವನಕ್ಕೆ ಕಾಲಿಡುತ್ತಿರುವವರ ವಧು ವರರ ನಂಬಿಕೆಯಾಗಿದೆ.

ಇದನ್ನೂ ಓದಿ-https://suddilive.in/archives/4617

Related Articles

Leave a Reply

Your email address will not be published. Required fields are marked *

Back to top button