ಕ್ರೈಂ ನ್ಯೂಸ್

ಶೋರೂಮ್ ಹೇಗಿದೆ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಶಂಕರ ಮಠದ ರಸ್ತೆಯಲ್ಲಿರುವ ರಾಹುಲ್ ಹುಂಡೈ ಕಾರು ಶೋ ರೂಮ್ ನಲ್ಲಿ ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ ನಲ್ಲಿ ಕಾಣಿಸಿಕೊಂಡಿರುವ ಬೆಂಕಿಯನ್ನ ರಾತ್ರಿ ಸುಮಾರು 1½ ಗಂಟೆಗೆ ಆರಿಸಲಾಗಿದೆ.

ದಿಡೀರ್ ಬೆಂಕಿಯನ್ನ ಸುಮಾರು ಮೂರುವರೆ ಗಂಟೆಗಳ ನಂತರ ಅಗ್ನಿಶಾಮಕ ದಳದವರು ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದ ಮಾಹಿತಿಯ ಪ್ರಕಾರ ರಾಹುಲ್ ಹುಂಡೈ ಕಾರ್ ಶೋ ರೂಮ್ ನವರು ಒಳಗಿದ್ದ  ಬಹುತೇಕ ಕಾರನ್ನ ಆಚೆ ತೆಗೆದುಕೊಂಡ ಪರಿಣಾಮವಾಗಿ ಹೇಳಿಕೊಂಡಿರುವ ನಷ್ಟ ಉಂಟಾಗಿಲ್ಲವೆಂದು ಕೇಳಿ ಬಂದಿದೆ.

ರಾಹುಲ್ ಹೂಂಡೈ ಶೋರೂಮ್ ನಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದಾಗಿ ಪಕ್ಕದಲ್ಲಿರುವ ಟಾಟಾ ಶೋರೂಮ್ ನ ವಾಹನಗಳಿಗೆ ಹಾನಿ ಉಂಟಾಗಿದೆ. ಟಾಟಾರವರ ನಾಲ್ಕು ವಾಹನಗಳು ಬೆಂಕಿಯಿಂದ ಹಾನಿಗೊಳಗಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ರಾಹುಲ್ ಹೂಂಡೈನ ಶೋರೂಮ್ ನಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯ ಆಯಿಲು, ಫರ್ನೀಚರ್ ಗಳು ಸುಟ್ಟುಕರಕಲಾಗಿವೆ.

ರಾಹುಲ್ ಹೂಂಡೈ ಶೋರೂಮ್ ಮತ್ತು ಟಾಟಾ ಶೋರೂಮ್ ನ ಮಧ್ಯದ ಕಾಂಪೌಂಡ್ ಪಕ್ಕದಲ್ಲಿ ಟಾಟಾ ಶೋರೂಮ್ ಅವರ ಕಾರುಗಳು ಬೆಂಕಿಯ ಅನಾಹುತಕ್ಕೆ ಹಾನಿಉಂಟಾಗಿವೆ ಎಂದು ಹೇಳಲಾಗಿದೆ. ಶಂಕರ ಮಠ ರಸ್ತೆಯ ಒಂದು ಬದಿಯ ರಸ್ತೆಯನ್ನ ಪೊಲೀಸ್ ಬಂದ್ ಮಾಡಿದ್ದಾರೆ. ಒಂದು ಪೊಲೀಸರ ವಾಹನವನ್ನ ಸ್ಥಳದಲ್ಲಿಯೇ ನಿಲ್ಲಿಸಲಾಗಿದೆ.

ಶೋರೂಮ್ ನಲ್ಲಿದ್ದ ಸರ್ವರ್ ಕೊಠಡಿಯಲ್ಲಿ ವಿಧ್ಯುತ್ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಕಾಣಿಸಿಕೊಂಡ ಬೆಂಕಿ ಬೃಹದಾಕಾರವಾಗಿ ಕಾಣಿಸಿಕೊಂಡಿತ್ತು. ಪಕ್ಕದ ಶೋರೂಮ್ ಸಹ ಹೂಂಡೈ ಶೋರೂಮ್ ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಪರಿಣಾಮ ಎದುರಿಸಬೇಕಾಗಿದೆ.

ಇದನ್ನೂ ಓದಿ-https://suddilive.in/archives/9151

Related Articles

Leave a Reply

Your email address will not be published. Required fields are marked *

Back to top button