ರಾಜಕೀಯ ಸುದ್ದಿಗಳು

ಪಿಎಸ್ಐ ಮಂಜುನಾಥ್ ಕುರಿ ವರ್ಗಾವಣೆಯಲ್ಲಿ ಪ್ರಾಮಾಣಿತೆ ಎಷ್ಟಿದೆ?

ಸುದ್ದಿಲೈವ್/ಶಿಕಾರಿಪುರ

ಶಿರಾಳಕೊಪ್ಪ ಮತ್ತು ಶಿಕಾರಿಪುರ ಪೊಲೀಸರ ವರ್ಗಾವಣೆಯಲ್ಲಿ ತಾರತಮ್ಯವಾಗಿರುವ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಹಿಂದೂ ಯುವಕ ಸುಶೀಲ್ ಗೆ ಚಾಕು ಇರಿತ ಪ್ರಕರಣದಲ್ಲಿ ಹೋರಾಟ ನಡೆಸಿದ ಬಿಜೆಪಿಯ ಪ್ರತಿಭಟನೆಯಲ್ಲಿ ಮುಖಂಡರಾದ ಗುರುಮೂರ್ತಿಯ ಭಾಷಣ ಇಂದು ಚರ್ಚೆಗೆ ಗ್ರಾಸವಾಗಿದೆ.

1 ವರ್ಷ 3 ತಿಂಗಳಲ್ಲೇ ಶಿರಾಳಕೊಪ್ಪದಲ್ಲಿ ಮಂಜುನಾಥ್ ಕುರಿಯನ್ನ ರೆಗ್ಯೂಲರ್ ಬೇಸ್ ಮೇಲೆ ವರ್ಗಾವಣೆ ಮಾಡಲಾಗಿದೆ. 6 ತಿಂಗಳ ಹಿಂದೆಯೇ ಷಡ್ಯಂತ್ರದಿಂದ ಮಂಜುನಾಥ್ ಕುರಿ ಯನ್ನ ವರ್ಗಾಯಿಸಬೇಕಾಗಿತ್ತು. ಆದರೆ ಇದೇ ಸುದ್ದಿಲೈವ್ ಅವರ ಬೆನ್ನಿಗೆ ನಿಂತು ವರದಿ ಮಾಡಿತ್ತು.

ಸುದ್ದಿಲೈವ್ ವರದಿಯನ್ನ ಇಲಾಖೆ ಪರಿಗಣಿಸಿ ವರ್ಗಾವಣೆಯಿಂದ ಹಿಂದೆ ಸರಿದಿತ್ತು, ಈಗ ಅವರನ್ನ ಹೊಳೆಹೊನ್ನೂರು ಠಾಣೆಗೆ ವರ್ಗಾಯಿಸಿದ್ದಾರೆ. ನಮ್ಮ‌ಆಕ್ಷೇಪಣೆ ಇರೋದು ವರ್ಗಾವಣೆಯಲ್ಲಿ ಅಲ್ಲ. ಒಬ್ಬ ಪೊಲೀಸ್ ಇನ್ನೊಂದು ಪೊಲೀಸ್ ಠಾಣೆಗೆ ವರ್ಗಾವಣೆಗೆ ಆಗೋದು.

ಆದರೆ ಅದೇ ರೀತಿ ಎಲ್ಲರನ್ನೂ ನೋಡಿ ವರ್ಗಾಯಿಸಲಾಗಿದೆಯಾ? ಅಥವಾ ಪಿಕ್ ಅಂಡ್ ಚೂಸ್ ತಂತ್ರವನ್ನ ಅಳವಡಿಸಿಕೊಂಡು ವರ್ಗಾವಣೆ ಮಾಡಲಾಗಿದೆಯಾ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಪೊಲೀಸ್ ವರ್ಗಾವಣೆ ಯಾವ ರಾಜಕೀಯದ ಮಿನಿಟ್ ಮೇಲೆ ನಡೆದಿಲ್ಲ ಎಂದು ಹೇಳಲು ಅಸಾಧ್ಯ.

ಆಗಲಿ ಒಬ್ಬ ಪ್ರಾಮಾಣಿಕ ಅಧಿಕಾರಿಗಳನ್ನ ತಾರತಮ್ಯದ ವರ್ಗಾವಣೆ ಮಾಡುವುದು ಎಷ್ಟು ಸರಿ? ಹಾಗಂತ ಶಿಕಾರಿಪುರ ಟೌನ್ ಠಾಣೆಯಲ್ಲೇ ಇರುವ ಪಿಎಸ್ ಐ ಒಬ್ಬ(ಅಗತ್ಯ ಬಿದ್ದಲ್ಲಿ ಹೆಸರು ಪ್ರಕಟಿಸಲಾಗುವು) ಕಳೆದ ಎರಡು ವರೆ ವರ್ಷದಿಂದ ವರ್ಗಾವಣೆ ಆಗಿಲ್ಲ ಏಕೆ? ಈ ಅಧಿಕಾರಿಗೆ ಒಂದು ನ್ಯಾಯ ಇನ್ ಸ್ಪೆಕ್ಟರ್ ಕುರಿಗೆ ಒಂದು ನ್ಯಾಯ ಯಾಕೆ?

ಜಾತಿ, ರಾಜಕೀಯದವರ ಸಂಪರ್ಕ, ಇತ್ಯಾದಿ ಇತ್ಯಾದಿ ಇದ್ದವರು ಮಾತ್ರ ಪೊಲೀಸ್ ಆಗಬೇಕು ಎಂಬ ಅಲಿಖಿತ ನಿಯಮವನ್ನ ಮೀರಿ ನಿಲ್ಲುವ ಕಾಲ ಎಲ್ಲಿಯವರೆಗೂ ಬರೋದಿಲ್ಲವೋ ಅಲ್ಲಿಯ ವರೆಗೆ ಹೊಲಸು ವರ್ಗಾವಣೆ ನಡೆಯುತ್ತಲೆ ಇರುತ್ತದೆ. ಕಾಂಗ್ರೆಸ್ ಪಕ್ಷ ಸ್ವಲ್ಪ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತದೆ ಎಂಬ ಭರವಸೆಯು ಕುಸಿದು ಹೋಗಿದೆ.

ಇದನ್ನೂ ಓದಿ-https://suddilive.in/archives/8598

Related Articles

Leave a Reply

Your email address will not be published. Required fields are marked *

Back to top button