ಸ್ಥಳೀಯ ಸುದ್ದಿಗಳು

ಎರಡು ಸಂಘಟನೆಯಿಂದ ಸಂಸದ ಮತ್ತು ರಾಜ್ಯಾಧ್ಯಕ್ಷರ ಮನೆ ಮುತ್ತಿಗೆ ಯತ್ನ

ಸುದ್ದಿಲೈವ್/ಶಿವಮೊಗ್ಗ

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ ವಿಚಾರದಲ್ಇ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಮತ್ತು ವಿನೋಬ ನಗರದಲ್ಲಿರುವ ಸಂಸದ ರಾಘವೇಂದ್ರ ಅವರ ಮನೆಯನ್ನ ಕಾಂಗ್ರೆಸ್ ನ ಎರಡು ಸಂಘಟನೆಗಳು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ವಿಜಯೇಂದ್ರ‌ ನಿವಾಸದ ಮುಂದೆ ಎನ್ ಎಸ್ ಯು ಐ ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ವಿಜಯೇಂದ್ರ‌ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎನ್ ಎಸ್ ಯುಐ‌ ಕಾರ್ಯಕರ್ತರನ್ನ  ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದಿದ್ದಾರೆ.

ವಿಜಯೇಂದ್ರ‌ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುತ್ತಿಗೆ ವೇಳೆ ಮಧು, ಚೇತನ್ ಗೌಡ ಉಪಸ್ಥಿತರಿದ್ದರು.

ಅದರಂತೆ ಯುವ ಕಾಂಗ್ರೆಸ್ ನ ಕಾರ್ಯಕರ್ತರು ಗಿರೀಶ್ ನೆತೃತ್ವದಲ್ಲಿ ವಿನೋಬ ನಗರದಲ್ಲಿ ಸಂಸದ ರಾಘವೇಂದ್ರ ಅವರ ಮನೆಯನ್ನ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಮುತ್ತಿಗೆ ಯತ್ನಿಸಿದ ಯುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನ ವಿನೋಬ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ-https://suddilive.in/archives/8593

Related Articles

Leave a Reply

Your email address will not be published. Required fields are marked *

Back to top button