ರಾಜಕೀಯ ಸುದ್ದಿಗಳು

ಅನಂತ ಕುಮಾರ್ ಹೆಗಡೆ ಹೇಳಿದ್ರಲ್ಲಿ ತಪ್ಪಿಲ್ಲ-ಈಶ್ವರಪ್ಪ

ಅನಂತ್ ಕುಮಾರ್ ಹೆಗಡೆ ಮಾತನ್ನ‌ ಬೆಂಬಲಿಸಿರುವ ಈಶ್ವರಪ್ಪ, ಅಯೋಧ್ಯಗೆ ಹೋಗುವುದಾಗಿ ಹೇಳಿ ಯೂಟರ್ನ್ ಹೊಡೆದ ಸಿದ್ದರಾಮಯ್ಯ ಹಾಗೂ ಹಾನಗಲ್ ನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಕುರಿತು ಈಶ್ವರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಸುದ್ದಿಲೈವ್/ಶಿವಮೊಗ್ಗ

ಅನಂತ ಕುಮಾರ್ ಹೆಗಡೆ ಅವರು ಶ್ರೀರಂಗಪಟ್ಟಣ ಮತ್ತು ಶಿರಸಿಯಲ್ಲಿ ದೇವಸ್ಥಾನ ಕೆಡವಿ ಮಸೀದಿ ಕಟ್ಟಿರುವ ಕುರಿತು ಹೇಳಿದ್ದರು. ಅದರಲ್ಲಿ ತಪ್ಪಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

ಮಾಧ್ಯಮಗಳಲ್ಲಿ ಮಾತನಾಡಿ, ಆಗಿನ ಕಾಲದಲ್ಲಿ ಹೋರಾಟ ಮಾಡಿದ್ದು ಕೇವಲ ರಸ್ತೆ ನೀರು ಚರಂಡಿ ನಿರ್ಮಾಣಕ್ಕೆ ಮಾತ್ರ ಅಲ್ಲ ನಮ್ಮ‌ ದೇಶದ ಸಂಸ್ಕೃತಿಯನ್ನ‌ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದರು. ಅದರ ಫಲವೇ ಈಗಿನ ಅಯೋಧ್ಯ ರಾಮ ಮಂದಿರ ಎಂದು ವಿವರಿಸಿದರು.

ಅನಂತ ಕುಮಾರ್ ಹೆಗಡೆ ಸಿದ್ದರಾಮಯ್ಯರನ್ನ ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಸಿದ್ದರಾಮಯ್ಯ ಮೊದಿ ವಿರುದ್ಧನೂ ಏಕವಚನ ಪ್ರಯೋಗಿಸಿದ್ದಾರೆ. ನಾವು ಅಯೋಧ್ಯಗೆ ಹೊಗಲ್ಲ ಎಂದಿದ್ದ ಸಿದ್ದರಾಮಯ್ಯರಿಗೆ ಒಳ್ಳೆ ಬುದ್ದಿನೆ ನೀಡಲಿ ಎಂದು ದೇವರಲ್ಲಿ ಕೇಳಿಕೊಂಡಿದ್ವಿ ಆದರೆ ನಂತರ ಸಿದ್ದರಾಮಯ್ಯ ಉದ್ಘಾಟನೆಯ ನಂತರ ಹೋಗ್ತೀನಿ ಅಂದ್ರು ನಾನೇ ಅವರ ಹೇಳಿಕೆಯನ್ನ ಸ್ವಾಗತಿಸಿದ್ದೆ ಎಂದರು.

ಇವತ್ತು ಅಯೋಧ್ಯಗೆ ಹೋಗುವುದಾಗಿ ಹೇಳಿಲ್ಲ ಎಂದು ಯೂ ಟರ್ನ್ ಹೊಡೆದರು? ಈ ಧ್ವಂಧ್ವ ಯಾಕೆ? ಸಿದ್ದರಾಮಯ್ಯನವರು ಅಯೋಧ್ಯೆಗೆ ದಯಮಾಡಿ ಹೋಗಿ ಪಾಪ ಕಳೆದುಕೊಂಡು ಬನ್ನಿ ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಯೂ ಟರ್ನ್ ಹೊಡೆದ್ರು ರಾಮಮಂದಿರದ ಬಗ್ಗೆನೂ ಯೂಟರ್ನ್ ಹೊಡೆದ್ರು. ಯಾಕೆ ಎಂಬುದು ಅವರನ್ನ ಕೇಳಬೇಕು. ರಾಂಮ ಮಂದಿರ ವಿಚಾರದಲ್ಲಿ ನಾವು ರಾಜಕೀಯ ಮಾಡಿಲ್ಲ. ರಾಮ ಭಕ್ತರು ಎಲ್ರೂ ಬರಬೇಕು. ಖರ್ಗೆ ಮತ್ತು ಸಿದ್ದರಾಮಯ್ಯ ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ರು ಸಂತೋಷವಾಗಿತ್ತು. ಬಿಜೆಪಿ ಯಾವ ವಿಚಾರದಲ್ಲಿ ರಾಜಕೀಯ ನಡೆದಿದೆ ಹೇಳಬೇಕು‌ನಾವು ತಿದ್ಕೋತೀವಿ ಎಂದರು.

ಹಾನಗಲ್ ಗ್ಯಾಂಗ್ ರೇಪ್ ವಿಚಾರದಲ್ಲಿ ಮಾತನಾಡಿದ ಈಶ್ವರಪ್ಪ ಬೆಳಗಾವಿಯಲ್ಲಿ ಅನ್ಯಧರ್ಮ ವಿಚಾರದಲ್ಲಿ ಪಾರ್ಕ್ ನಲ್ಲಿದ್ದ ಯುವಕ ಯುವತಿಯರು ಕೆಲ ಮುಸ್ಲೀಂ ರು ಬಂದು ಹೊಡೆದ್ರು, ಹಾನ್ ಗಲ್ ನಲ್ಲಿ ಅನ್ಯಕೋಮಿನ ಯುವಕ ಯುವತಿಯರು ಮದುವೆಯಾಗಿದ್ದಕ್ಕೆ ಹೆಣ್ಣುಮಗಳನ್ನ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಆಗಿದೆ.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ನೈತಿಕ ಪೊಲೀಸ್ ಗಿರಿ ಮಾಡಲು ಬಿಡಲ್ಕ ಎಂದಿದ್ದ ಸರ್ಕಾರದ ಸಚಿವರು ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.

ಕಾಂತೇಶ್ ಗೆ ಎಂಪಿ ಸೀಟ್ ಕೊಡವಂತೆ ಮನವಿ

ದೆಹಲಿಗೆ ಹೋಗಿದ್ದೆ. ರಾಜ್ಯದಲ್ಲಿರುವ ಪಕ್ಷದ ಸಣ್ಣ ಸಣ್ಷ ಗೊಂದಲಗಳು ಇವೆ. ಅಮಿತ್ ಶಾರಿಗೆ ತಿಳಿಸಿರುವೆ. ಹಾಗೆ ಶಾಸಕ ಯತ್ನಾಳ್ ಮತ್ತು ಸೋಮಣ್ಣರ ಸಮಸ್ಯೆ ಸರಿ‌ಮಾಡಲು ಕೋರಿರುವೆ. ಪಕ್ಷದ ಜವಬ್ದಾರಿ ನೀಡಲು ಕೋರಿರುವೆ. ಪುತ್ರ ಕಾಂತೇಶ್ ವಿಚಾರದಲ್ಲಿ ವಿಧಾನ ಸಭೆಯ ಚುನಾವಣೆಗೆ ಸೊಸೆಗೆ ಪಕ್ಷದ ಟಿಕೇಟ್ ನೀಡಿ ಸ್ಪರ್ಧಿಸಲು ಸೂಚಿಸಿದ್ದರು. ಅದನ್ನ ಒಪ್ಪಿರಲಿಲ್ಲ. ಈಗ ಪುತ್ರ ಕಾಂತೇಶ್ ಹಾವೇರಿಯಲ್ಲಿ ಸ್ಪರ್ಧಿಸುವುದಾಗಿ ಅಇತ್ ಶಾರಿಗೆ ಹೇಳಿದ್ದೇವೆ. 28 ಕ್ಷೇತ್ರದಲ್ಲೂ ಸಂಘಟನೆ ಆಗ್ತಾ ಇದೆ. ಹಾವೇರಿಯಲ್ಲೂ ಆಗ್ತಾ ಇದೆ.ಪುತ್ರನಿಗೆ ಟಿಕೇಟ್ ಕೊಡದಿದ್ದರು ಪಕ್ಷದ ಅಭ್ಯರ್ಥಿಯನ್ನ  ಗೆಲ್ಲುಸಿಕೊಂಡು ಬರುವುದಾಗಿ ತಿಳಿಸಿದ್ದೇವೆ ಎಂದು ದೆಹಲಿ ಟೂರ್ ಬಗ್ಗೆ ವಿವರಿಸಿದರು.

ಅಲ್ಲಮ ಪ್ರಭು ಹೆಸರನ್ನ ಫ್ರೀಡಂ ಪಾರ್ಕ್ ಗೆ ಇಡುವುದು ಸ್ವಾಗತಾರ್ಹ. ಯಾವ ಸಾಧು ಸಂತರ ಹೆಸರಿಟ್ಟರೂ ಸ್ವಾಗತಾರ್ಹ ಎಂದರು.

ಇದನ್ನೂ ಓದಿ-https://suddilive.in/archives/6785

Related Articles

Leave a Reply

Your email address will not be published. Required fields are marked *

Back to top button