ರಾಜಕೀಯ ಸುದ್ದಿಗಳು

ಶ್ವೇತ ಪತ್ರ ಹೊರಡಿಸಿದರೆ ಸಿದ್ದರಾಮಯ್ಯ ಬೆತ್ತಲಾಗಲಿದ್ದಾರೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದ ಹಣಕಾಸು ಪರಿಸ್ಥಿತಿಯ ಕುರಿತು ಶ್ವೇತ ಪತ್ರ ಹೊರಡಿಸಿದರೆ ಸಿದ್ದರಾಮಯ್ಯ ಬೆತ್ತಲಾಗಲಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.‌

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತ ಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ಇದು ಸ್ವಾಗತಾರ್ಹವಾದರೂ ಇದೂ ಒಂದು ಸುಳ್ಳೇ. ಯಾಕೆಂದರೆ ಜಾತಿಗಣತಿ ವರದಿ ಬಿಡುಗಡೆ ಮಾಡ್ತೀವಿ ಎಂದ ಸಿಎಂ‌ ಏನೂ ಮಾಡಿಲ್ಲ. ಈಗ ಮತ್ತೊಂದು ಸುಳ್ಳು ಹೇಳುತ್ತಿದ್ದಾರೆ ಎಂದು ಅಗ್ರಹಿಸಿದರು.

ಡಿಕೆ ಸುರೇಶ್ ಅವರು ಕರ್ನಾಟಕದ ಪಾಲುಸಿಗ್ತಾ ಇಲ್ಲ. ಹಾಗಾಗಿ ದಕ್ಷಿಣ ಭಾರತ ರಾಜ್ಯಗಳು ಪತ್ರೇಕ ದೇಶ ಹೊಂದುವ ಬಗ್ಗೆ ವಿಚಾರ ಮಾಡಬೇಕು ಎಂದು ಹೇಳಿರುವ ಹೇಳಿಕೆ ನೋವುಂಟಾಗಿದೆ ಎಂದರು.

ಪಾಕಿಸ್ತಾನದಲ್ಲಿದ್ದ ಜನ ನೋವಿಂದ‌ಬದುಕುತ್ತಿದ್ದಾರೆ. ದೇಶವನ್ನ ಕಾಂಗ್ರೆಸ್ ಒಡೆಯಿತು. ಜಿನ್ನಾ ಸಂಸ್ಕೃತಿಯನ್ನ ಆ ಪಕ್ಷ ಮುಂದು ವರೆಸಿಕೊಂಡು ಬಂದಿದೆ. ಜಿನ್ನಾ ಸಂಸ್ಕೃತಿಯಿಂದ ಬಂದ ಡಿಕೆಸು ಮತ್ತು ಡಿಕೆಶಿ ಪ್ರತ್ಯೇಕ ದೇಶದ ಮಾತನಾಡಿದ್ದಾರೆ. ಇದನ್ನ ಇತರರು ಒಪ್ಪಿಲ್ಲ ಎಂದು ವಿವರಿಸಿದರು.

ಸಿದ್ದರಾಮಯ್ಯನವರು ಡಿಕೆಸು ಅವರ ಪ್ರತ್ಯೇಕ ರಾಜ್ಯದ ಮಾತನ್ನ ಒಪ್ಪಿಲ್ಲ. ಎಐಸಿಸಿ ಅಧ್ಯಕ್ಷ ಖರ್ಗೆ ಮತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಮ್ಮ‌ನಿಲುವನ್ನ ಸ್ಪಷ್ಟಪಡಿಸಲಿ. ಇದರಿಂದ ಜನರು ಪಕ್ಷದ ಮುಖಂಡರ ನಿಲುವನ್ನ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಆಗ್ರಹಿಸಿದರು.

ಕರ್ನಾಟಕಕ್ಕೆ ಅನ್ಯಾಯವಾಗಿದೆ ಅದಕ್ಕಾಗಿ ಪ್ರತ್ಯೇಕ ದೇಶ ಕೇಳಿರುವೆ ಎಂಬ ಡಿಕೆಸು ಹೇಳಿಕೆ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹೇಳಿಕೊಂಡಿದ್ದಾರೆ. ತಮಗೆ ಅನ್ಯಾಯವಾಗಿದೆ ಎಂದರೆ ರಾಜೀನಾಮೆ ನೀಡಬಹುದಿತ್ತು.ದೇಶ ಒಡೆಯುವ ಮಾತು ಆಡಬಾರದಿತ್ತು ಎಂದು ಆಗ್ರಹಿಸಿದರು.

ಭಾರತ್ ಜೋಡೋ ಎನ್ನುವರ ಬಾಯಲ್ಲಿ ಭಾರತ್ ತೋಡೋ ಮಾತು ಹೇಗೆ ಮತ್ತು ಯಾಕೆ ಎಂಬುದನ್ನ ಕಾಂಗ್ರೆಸ್ ಸ್ಪಷ್ಟಪಡಿಸಬೇಕಿತ್ತು ಎಂದ ಈಶ್ವರಪ್ಪ ಕಾಂಗ್ರೆಸ್ ಪಕ್ಷ ಯಾರು ಏನು ಬೇಕಾದರೂ ಮಾತನಾಡಬಹುದಾಗಿದೆ. ಎಐಸಿಸಿ ಅಧ್ಯಕ್ಷರು ಹೇಳಿದರೆನೇ ಕಾಂಗ್ರೆಸ್ ನ ಇತರೆ ನಾಯಕರು ಕೇಳಲು ಸಿದ್ದವಿಲ್ಲ. ರಾಜಣ್ಣ ಮತ್ತಿತರೆ ನಾಯಕರು ಹೈಕಮಾಂಡ್ ಹೇಳಿದಂತೆ ಕೇಳುವ ಗುಲಾಮರಲ್ಲ ಎಂದಿರುವುದು ಆ ಪಕ್ಷದ ಘನತೆಯನ್ನ ತೋರುತ್ತದೆ ಎಂದರು.

40% ಕಮಿಷನ್ ಬಗ್ಗೆ ಕಾಂಗ್ರೆಸ್ ಶಾಸಕರೇ ಮಾತನಾಡಿದ್ದಾರೆ. ಗುತ್ತಿಗೆದಾರರಸಂಘದ ಅಧ್ಯಕ್ಷ ಕೆಂಪಣ್ಣನವರು ಬಿಜೆಪಿ ಸರ್ಕಾರ ಇದ್ದಾಗ 40% ಆರೋಪ ಮಾಡಿದ್ದರು. ಈಗ ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದ ಈಶ್ವರಪ್ಪ, ನಗರದಲ್ಲಿ ಒಂದು ಬುಟ್ಟಿ ಮಣ್ಣನ್ನ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದರೂ ಹಾಕಿಲ್ಲ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತ ಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ಇದು ಸ್ವಾಗತಾರ್ಹವಾದರೂ ಇದೂ ಒಂದು ಸುಳ್ಳೇ. ಯಾಕೆಂದರೆ ಜಾತಿಗಣತಿ ವರದಿ ಬಿಡುಗಡೆ ಮಾಡ್ತೀವಿ ಎಂದ ಸಿಎಂ‌ ಏನೂ ಮಾಡಿಲ್ಲ.ರಾಜ್ಯದಲ್ಲಿ ಶ್ವೇತ ಪತ್ರ ಹೊರಡಿಸಿದರೆ ಸಿದ್ದರಾಮಯ್ಯ ಬೆತ್ತಲಾಗಲಿದ್ದಾರೆ ಎಂದ ಗುಡುಗಿದ್ದಾರೆ.

ಶಾಸಕ ಬಾಲಕೃಷ್ಣ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರೆಂಟಿ ಹಿಂಪಡೆಯುವುದಾಗಿ ಹೇಳಿದ್ದಾರೆ. ಇದು ಪರೋಕ್ಷವಾಗಿ ರಾಜ್ಯದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ನಂತರ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಎಂದು‌ಗುಡುಗಿದರು.

ಕಾಂತೇಶ್ ಲೋಕಸಭಾ ಚುನಾವಣೆ ಸ್ಪರ್ಧಿಸುವುದು ಅಪೇಕ್ಷೆ ಇದೆ. ಹಾವೇರಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ನಿನ್ನೆ ರಾಜ್ಯದ ಅಧ್ಯಕ್ಷ ವಿಜೇಂದ್ರ ಅವರ ಸಮ್ಮುಖದಲ್ಲಿ ಹಾವೇರಿ ಜಿಲ್ಲಾ ಬಿಜೆಪಿ ಪದಗ್ರಹಣ ಕಾರ್ಯಕ್ರಮ ನಡೆದಿದೆ. ಯಾರೇ ಸ್ಪರ್ಧಿಸಿದರೂ ಗೆಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಕಾಂತೇಶ್ ಗೆ ಪಕ್ಷ ಟಿಕೇಟ್ ನೀಡಿದರೆ ಗೆಲ್ಲಲಿದ್ದಾರೆ ಎಂದರು.

ಖರ್ಗೆ ಮೋದಿಯನ್ನ ಸರ್ವಾಧಿಕಾರಿ ಎಂದಿದ್ದಾರೆ. ಇಂದಿರಾಗಾಂಧಿ ಪಿಎಂ ಆಗಿ ಮುಂದು ವರೆದಿದ್ದರೆ ಪತ್ರಿಕಾ ಸದವಾತಂತ್ರ್ಯವೂ ಇರುತ್ತಿರಲಿಲ್ಲ. ವಂದೇ ಮಾತರಂ‌ ಮತ್ತು ಭಾರತ್ ಮಾತಾ ಕಿ ಜೈ ಎಂದಿದ್ದಕ್ಕೆ ನಮ್ಮನ್ನೆಲ್ಲಾ ಜೈಲಿಗೆ ಹಾಕಿದ್ದರು. ಆ ಬಗ್ಗೆ ಖರ್ಗೆ ತುಟಿ ಬಿಚ್ಚುವುದಿಲ್ಲ. ಈಗ ಮೋದಿ ವಿರುದ್ಧ ಸರ್ವಾಧಿಕಾರಿ ಎಂದು ಹೇಳುವ ಮೂಲಕ ಖರ್ಗೆ ಬಾಯಿಗೆ ಬಂದಂತೆ ಹೇಳುತ್ತಿದ್ದಾರೆ ಎಂದರು.

ಹೆಮ್ಮೆಯಿಂದ ಸಹೋದರಿ ಆರ್ಥಿಕ ಮಂತ್ರಿ ನಿರ್ಮಲ ಸೀತಾರಾಮ್ ಬಜೆಟ್ ಮಂಡಿಸಿದ್ದಾರೆ. ಜನರಿಗೆ ಮೂಲ ಸೌಕರ್ಯ ನೀಡಿದ್ದಾರೆ. ಪ್ರವಾಸ್ಯೋದ್ಯಮಕ್ಕೆ ಬಡ್ಡಿ ರಹಿತ ಸಾಲ ನೀಡುತ್ತಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು.

ಇದನ್ನೂ ಓದಿ-https://suddilive.in/archives/8230

Related Articles

Leave a Reply

Your email address will not be published. Required fields are marked *

Back to top button