ರಾಜಕೀಯ ಸುದ್ದಿಗಳು
ಹುಲಿ ಉಗುರು ಕುರಿತು ಸಿಎಂಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪತ್ರ

ಸುದ್ದಿಲೈವ್/ಶಿವಮೊಗ್ಗ

ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ತೀರ್ಥಹಳ್ಳಿಯ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ತಿದ್ದುಪಡಿಗೆ ಆಗ್ರಹಿಸಿದ್ದಾರೆ.
ದೇಶದಲ್ಲಿ ಮತ್ತು ನಮ್ಮ ನಾಡಿಲ್ಲಿ ಅನುಪಯುಕ್ತತೆ ವನ್ಯ ಜೀವಿ ಕಾಯ್ದೆ ಜನ ಮಾನಸಕ್ಕೆ ಬಾರದೆ ಜೀವಂತವಾಗಿದ್ದು ಅವನ್ನಪುನರ್ ಪರಿಶೀಲಿಸಿ ವರ್ತಮಾನಕ್ಕೆ ಪೂರಕವಾಗುವಂತೆ ತಿದ್ದುಪಡಿ ತರುವಂತೆ ಹಾಗೂ ರದ್ದು ಮಾಡುವಂತೆ ಮಾಜಿ ಸಚಿವರು ಮನವಿಯಲ್ಲಿ ತಿಳಿಸಿದ್ದಾರೆ.
ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ ಹಸಗಾಗಿ ತಿದ್ದುಪಡಿತರಬೇಕು. ಕಾನೂನು ಬಾಹಿರವಾಗಿ ಹುಲಿ ಉಗುರು ಮತ್ತು ಇತರೆ ಪ್ರಾಣಿಗಳ ವಸ್ತುಗಳನ್ನ ಇಟ್ಟುಕೊಳ್ಳಲಾಗಿದೆ. ಇವುಗಳಿಗೆ ತಾತ್ಕಾಲಿಕ ಸುಗ್ರೀವಾಜ್ಞೆ ಮಾಡಿ. ಸಂಗ್ರಹ ವಸ್ತುಗಳನ್ನ ವಾಪಾಸ್ ಮಾಡಲು ಕಾಲಾವಕಾಶ ಕೊಡುವಂತೆ ಕೋರಲಾಗಿದೆ.
ಕಾಲಾವಕಾಶ ನೀಡದಿದ್ದರೆ ಕಾನೂನಿಗೆ ಹೆದರಿ ಕಸದ ಪಾಲಾಗುವ ಭೀತಿ ಇದೆ ಎಂದು ಮುಖ್ಯಮಂತ್ರಿಗಳಿಗೆ ಕಿಮ್ಮನೆ ಪತ್ರ ಬರೆದಿದ್ದಾರೆ.
