ರಾಜಕೀಯ ಸುದ್ದಿಗಳು

ಗ್ಯಾರೆಂಟಿಯಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಕಷ್ಟವಾಗಲಿದೆ-ವಿಜೇಂದ್ರ

ಸುದ್ದಿಲೈವ್/ಶಿವಮೊಗ್ಗ

2024 ರ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ.07 ರಂದು ಮತದಾನ ನಡೆಯಲಿದೆ. ಸಂಸದ ರಾಘಣ್ಣ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು.

ಕುಂಸಿಯ ಬಸವೇಶ್ವರ ಸಮುದಾಯ ಭವನದಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ಪ್ರಮುಖರ ಮತ್ತು ಪ್ರಗತಿಪರ ರೈತರ ಸಭೆಯನ್ನ ಉದ್ಘಾಟಿಸಿ ಮಾತನಾಡಿದರು.

ಬಿಎಸ್ ಯಡಿಯೂರಪ್ಪನವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ರಾಘಣ್ಣ ಅಭಿವೃದ್ಧಿ ಮಾಡುತ್ತಿದ್ದಾರೆ. ರಾಘಣ್ಣರನ್ನ ಗೆಲ್ಲಿಸಿ ಮೋದಿಯ ಕೈಬಲಪಡಿಸಬೇಕು. ಮೋದಿ ದೇಶದ ರೈತರ ಆದಾಯ ದ್ವಿಗುಣ ಆಗಲು ಯೋಜನೆ ಮಾಡಿದರೂ ಕಾಂಗ್ರೆಸ್ ಅಡ್ಡಗಾಲು ಹಾಕಿತು ಎಂದರು.

ಬಿಎಸ್ ಯಡಿಯೂರಪ್ಪ ರೈತರ ಪ್ರತ್ಯೇಕ ಬಜೆಟ್ ಮಾಡಿದರು. ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಸಲು ಅವಕಾಶ ನೀಡಲಾಯಿತು. ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಕಾಂಗ್ರೆಸ್ ಪಂಪ್ ಸೆಟ್ ಗೆ ಮೀಟರ್ ಅಳವಡಿಸಲು 2 ಲಕ್ಷ ರೂ ಹಣ ಕರ್ಚಾಗುವಂತೆ ಮಾಡಿದೆ ಎಂದು ಆರೋಪಿಸಿದರು.

ಬಿಎಸ್ ವೈ ಸಿಎಂ ಆದಾಗ‌ ಅತಿವೃಷ್ಠಿ ಆದಾಗ ಎಕರೆ14 ಸಾವಿರ ರೂ. ನೀಡಲಾಗಿತ್ತು. 24 ಸಾವಿರ ಹೆಕ್ಟರ್ ಗೆ ನೀಡಲಾಗಿತ್ತು. ಕೇಂದ್ರ ಸರ್ಕಾರ 10 ಸಾವಿರ ರೈತರ ಉತ್ಪಾದಕ ಸಂಸ್ಥೆಗಳನ್ನ ಗುರುತಿಸಲಾಗಿದೆ. 6800 ಉತ್ಪಾದಕ ಸಂಸ್ಥೆಗಳಲ್ಲಿ ಒಂದು ಸೂರಿನ ಅಡಿ ತರಲಾಗಿದೆ. ಒಂದೊಂದು ಉತ್ಪಾದಕ ಸಂಸ್ಥೆ ಒಂದು ಲಕ್ಷ ರೂ ಹಣ ಕೊಡಲಾಗುತ್ತಿದೆ. ರೈತರ ಬೆಳೆಗೆ ಅಂತರಾಷ್ಟ್ರೀಯಮಟ್ಟದ ಮಾರುಕಟ್ಟೆಗೆಸಿಗಬೇಕು. ಮದ್ಯವರ್ತಿಗಳಿಂದ ಮುಕ್ತನಾಗಬೇಕು ಎಂದು ಮೋದಿ ಈಯೋಜನೆ ತಂದಿದ್ದಾರೆ ಎಂದರು.

ರಾಘಣ್ಣ ಎನ್ ಡಿಎ ಅಭ್ಯರ್ಥಿ ಗೆಲುವುನಿಶ್ಚಿತ ಆದರೆ ಕಾಂಗ್ರೆಸ್ ಗ್ಯಾರೆಂಟಯಿಂದ ಸರ್ಕಾರಿ ನೌಕರರಿಗೆ ಹಣ ಕೊಡಲು ಸಾಧ್ಯವಿಲ್ಲ. ಬರಪರಿಹಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಆದರೆ ರಾಜ್ಯದ ಜವಬ್ದಾರಿಯಿಂದ ನುಣಚಿಕೊಂಡಿದೆ. ರಾಘಣ್ಣನಿಗಿಂತ ಹೆಚ್ಚಿನ ಕೆಲಸ ಮಾಡುವ ಸಂಸದರು ಇಲ್ಲ. ಅವರನ್ನ ಹೆಚ್ಚಿನ ಬಹುಮತದಿಂದ ಗೆಲ್ಲಿ

ಬಿಜೆಪಿ ರೈತಮೋರ್ಚ ಅಧ್ಯಕ್ಷರಾದ ಎಸ್ ಪಾಟೀಲ್ ನಡಹಳ್ಳಿ ದೆಹಲಿಯ ಕಿಸಾನ್ ಮೋರ್ಚಾದ ಜಯಸೂರ್ಯನ್, ಆನಂದ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/13566

Related Articles

Leave a Reply

Your email address will not be published. Required fields are marked *

Back to top button