ಸ್ಥಳೀಯ ಸುದ್ದಿಗಳು

ಫೆ.04 ರಂದು ಮಾತೃ ವಾತ್ಸಲ್ಯ ಆಸ್ಪತ್ರೆ ಉದ್ಘಾಟನೆ

ಸುದ್ದಿಲೈವ್/ಶಿವಮೊಗ್ಗ

ಮಗು ಮತ್ತು ತಾಯಿಯನ್ನ ವಿಶೇಷವಾಗಿ ಆರೈಕೆ ಮಾಡುವ ಮಾತೃ ವಾತ್ಸಲ್ಯ ಆಸ್ಪತ್ರೆಯನ್ನ ಫೆ.4 ರಂದು ಆರಂಭಿಸಲಾಗುತ್ತಿದೆ. ಸಚಿವ ಮಧು ಬಂಗಾರಪ್ಪನವರಿಂದ ಈ ಮಾತೃ ವಾತ್ಸಲ್ಯ ಆಸ್ಪತ್ರೆ ಉದ್ಘಾಟನೆ ನೆರವೇರಲಿದೆ

ಈ ಕುರಿತು ಸುದ್ದಿಗೋಷ್ಠಿ ಮತನಾಡಿದ ಡಾ.ಪೃಥ್ವಿ ಮತ್ತು ಮಾಜಿ ಸಚಿವ  ಈಶ್ವರಪ್ಪ ಹೊರರೋಗಿಗಳಿಗೆ ಉಚಿತ ಸೇವೆ ಇರಲಿದೆ. ಹೆರಿಗೆ, ಮಕ್ಕಳ ಸಮಸ್ಯೆಗಳ ಸೇವೆಗೆ ಮಾತೃ ವಾತ್ಸಲ್ಯ ಸೇವೆ ಸಲ್ಲಿಸಲಿದೆ. ಕನ್ಸಲ್ಟೇಷನ್ ಫೀ ಮಕ್ಕಳಿಗೆ ಮತ್ತು ತಾಯಿಗೆ ಉಚಿತವಿರಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 24 ಗಂಟೆಗಳ ತುರ್ತು ಸೇವೆ ಲಭ್ಯವಿದೆ. ಮಕ್ಕಳ ತೀವ್ರ ನಿಗಾ ಘಟಕ, ನಾರ್ಮಲ್ ಡೆಲಿವರಿ, ಸಿಸೇರಿಯನ್ ಡೆಲಿವರಿ, ಗರ್ಭಿಣಿಯರ ಆರೈಕೆ, ನೋವು ರಹಿತ ಡೆಲಿವರಿ ಸುಸಜ್ಜಿತ ಆಪರೇಷನ್ ಥಿಯೇಟರ್

ಲೇಬರ್ ಥಿಯೇಟರ್, ಮಕ್ಕಳ ಶಸ್ತ್ರ ಚಿಕಿತ್ಸೆ, ಲ್ಯಾಪ್ರೋ ಸ್ಕೋಪಿಕ್ ಸರ್ಜರಿ, ವ್ಯಾಕ್ಸಿನೇಷನ್ ವ್ಯವಸ್ಥೆ, ಸೂಟ್ ಡೆಲಿವರಿ ವ್ಯವಸ್ಥೆ, ಡಿಲಕ್ಸ್ ಮತ್ತ ಸುವ್ಯಸ್ಥೆಯ ಕೊಠಡಿಗಳು ಲಭ್ಯವಿದೆಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/8221

Related Articles

Leave a Reply

Your email address will not be published. Required fields are marked *

Back to top button