ರಾಜಕೀಯ ಸುದ್ದಿಗಳು

ಶಾಮನೂರು ಹೇಳಿಕೆಗೆ ಕಾಂಗ್ರೆಸ್ ಕೈಕಟ್ಟಿ ಕುಳಿತುಕೊಂಡಿತಾ?

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬಿಜೆಪಿ ಸಂಸದ ರಾಘವೇಂದ್ರರವರನ್ನ ಅಳೆತೆ ಮಾಡಿ ಗೆಲ್ಲಿಸಿ ಎಂಬ ಭಾಷಣ ರಾಜಕೀಯ ವಲಯದಲ್ಲಿ ಭರ್ಜರಿ ಚರ್ಚೆಗೆ ಕಾರಣವಾಗಿದೆ . ಈ ಚರ್ಚೆಯಲ್ಲಿ ಕಾಂಗ್ರೆಸ್ ಕೈಕಟ್ಟಿ ಕುಳಿತಿರುವುದು ಅಚ್ಚರಿ ಮೂಡಿಸಿದೆ.

ಲಿಂಗಾಯತ ಸಂಸದ ಎಂಬ ಕಾರಣಕ್ಕೆ ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ನಿನ್ನೆ ಬೆಕ್ಕಿನ‌ಕಲ್ಮಠದಲ್ಲಿ ಗುರುಬಸವಶ್ರೀ ಪ್ರಶಸ್ತಿ ಪಡೆಯುವ ವೇದಿಕೆ ಮೇಲೆ ಮತ್ತೊಮ್ನೆ ಎಂಪಿ ಮಾಡಿ ಎಂದಿರುವುದು ಕಾಂಗ್ರೆಸ್ ಗೆ ಮುಜುಗರ ತಂದರೂ ಸಮರ್ಪಕವಾಗಿ ಎದುರಾಳಿಯನ್ನ ಕಟ್ಟಿಹಾಕುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಎಂದರೆ ಅದನ್ನ ಪ್ರತಿರೋಧಿಸುವ ಬಗ್ಗೆ ಒಂದು ಪತ್ರಿಕಾ ಪ್ರಕಟಣೆಯೂ ಹೊರಡಿಸದೆ ಇರುವುದು ದುರಂತ.

ಅಂದರೆ ಮತ್ತೆ ಜಿಲ್ಲೆಯಲ್ಲಿ ಅಡ್ಜೆಸ್ಟ್ ಮೆಂಟ್ ಪೊಲೀಟಿಕ್ಸ್ ನ ಚರ್ಚೆ ಎದ್ದಿದೆ. ಪ್ರತಿಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಒಂದಿಷ್ಟು ಸಂಘಟನೆಗಳು ಆಕ್ಟಿವ್ ಆಗಲಿದೆ. ಆ ಸಂಘಟನೆಯಿಂದ ಸನ್ಮಾನ ನಡೆಯಲಿದೆ. ಸನ್ಮಾನದ ನೆಪದಲ್ಲಿ ಒಂದಿಷ್ಟು ರಾಜಕೀಯ ಹೇಳಿಕೆಗಳು ಹೊರಬೀಳಲಿದೆ. ಈ ಹೆಳಿಕೆಗಳು  ಚುನಾವಣೆಯ ವರೆಗೆ ಪರ ವಿರೋಧದ ಚರ್ಚೆಗೆ ಕಾರಣವಾಗಲಿದೆ. ಇದು ಈ ಚುನಾವಣೆ ಅಲ್ಲ ಪ್ರತಿಚುನಾವಣೆಯಲ್ಲಿ ಅಂಡರ್ ಕರೆಂಟ್ ರೀತಿ ಕೆಲಸ ನಡೆಯಲಿದೆ.

ಈ ಬಾರಿಯ ಅಂಡರ್ ಕರೆಂಟ್ ವಿಷಯವೇ ಶಾಮನೂರು ಹೇಳಿಕೆ.  ಲೋಕಸಭಾ ಚುನಾವಣೆಯಲ್ಲಿ ಸಂಸದ ರಾಘವೇಂದ್ರರನ್ನ ಗೆಲ್ಲಿಸಿ ಎಂಬುದೇ ಶ್ಯಾಮನೂರು ಹೇಳಿಕೆ ಪರ ವಿರೋಧ ಬಗ್ಗೆ ಚರ್ಚೆ ಲೋಕಸಭಾ ಚುನಾವಣೆ ವರೆಗೂ ನಡೆಯಲಿದೆ. ಅಲ್ಲಿಗೆ ಒಂದು ಸಮುದಾಯದ ಒಟ್ಟಾರೆ ತೀರ್ಮಾನ ಹೊರಬಿದ್ದಂತೆ‌ ಆಗಿದೆ. ಈ ಅಂಡರ್ ಕರೆಂಟ್ ನಲ್ಲಿ ಕಾಂಗ್ರೆಸ್ ಸಣ್ಣದಾಗಿ ಕೊಚ್ಚಿಹೋಗಿದೆ.

ಇಂದು ನಡೆದ ಸುದ್ದಿಗೋಷ್ಠಿ ನಡೆಸಿದ್ದ ಆರ್ ಪ್ರಸನ್ನ ಕುಮಾರ್ ಈ ಬಗ್ಗೆ ಸಣ್ಣ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಡಾ.ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ.‌ ಆದರೆ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನ ಖಾಯಂ ಖಜಾಂಚಿಯಾಗಿದ್ದು ಬಿಜೆಪಿ ಸಂಸದನ ಪರ ಭಾಷಣ ಮಾಡಿರುವುದು ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ತಲೆ ಎಳದಂತೆ ಮಾಡಿದೆ.

ಇದನ್ನ ಕಾಂಗ್ರೆಸ್ ಸಮರ್ಪಕವಾಗಿ ಎದುರಿಸುವ ಯಾವ ಪ್ರತಿರೋಧವೂ ಜಿಲ್ಲೆಯಲ್ಲಿ ಕಂಡುಬರುತ್ತಿಲ್ಲ. ಕಾಂಗ್ರೆಸ್ ನ ಒಟ್ಟು ಹೋರಾಟದಲ್ಲಿ ಸಚಿವ ಮಧು ಬಂಗಾರಪ್ಪ ಏಕಾಂಗಿಯಾಗಿ ಕಂಡು ಬಂದರೆ. ಕಾಂಗ್ರೆಸ್ ನ ಮೌನ ಚುನಾವಣೆಯಲ್ಲಿ ಬೆಲೆ ತೆತ್ತುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ

ಇದನ್ನು ಓದಿ-https://suddilive.in/archives/7826

Related Articles

Leave a Reply

Your email address will not be published. Required fields are marked *

Back to top button