ಕ್ರೈಂ ನ್ಯೂಸ್

ಚಿನ್ನದ ಪಾಲಿಶ್ ಮಾಡಿಸಿಕೊಂಡು ಬರುವುದಾಗಿ ಪರಾರಿಯಾಗಿದ್ದ ಕಾರ್ಮಿಕ ಅರೆಸ್ಟ್

ಸುದ್ದಿಲೈವ್/ಶಿವಮೊಗ್ಗ

ಚಿನ್ನ ಪಾಲಿಶ್ ಮಾಡಿಸಿಕೊಂಡು‌ ಬರುವುದಾಗಿ ಹೇಳಿ ಹೋಗಿದ್ದ ಕಾರ್ಮಿಕನೋರ್ವ ಚಿನ್ನಾಭರಣದ ಜೊತೆ ಪರಾರಿಯಾಗಿದ್ದ ಪ್ರಕರಣವನ್ನ ದೊಡ್ಡಪೇಟೆ ಪೊಲೀಸರು ಪತ್ತೆಹಚ್ಚಿದ್ದಾರೆ.

ಲಷ್ಕರ್ ಮೊಹಲ್ಲಾದಲ್ಲಿ ಅನಿಸೂರು ಇಸ್ಲಾಂ ಎಂಬುವರ ಜ್ಯುವಲರಿ ಅಂಗಡಿಯಲ್ಲಿ ಕೆಲಸಕ್ಕೆ 10 ಜನ ಕೊಲ್ಕತ್ತದಿಂದ ಬಂದಿದ್ದರು. ಅದರಲ್ಲಿ ಆದಿತೋ ಮಜ್ಜಿ ಎಂಬಾತ ಚಿನ್ನ ಬೆಳ್ಳಿ ಅಂಗಡಿಯಲ್ಲಿ ಜ.04 ರಂದು ಬಂಗಾರವನ್ನು ಪಾಲಿಶ್ ಮಾಡಿಸಿಕೊಂಡು ಬರುವುದಾಗಿ ಹೇಳಿ 130 ಗ್ರಾಂಗೂ ಹೆಚ್ಚು ಚಿನ್ನಾಭರವನ್ನ  ಕಳ್ಳತನ ಮಾಡಿಕೊಂಡು ಹೋಗಿದ್ದನು.‌ ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಐ.ಪಿ.ಎಸ್, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ,  ಕಾರಿಯಪ್ಪ ಎ.ಜಿ, ಮಾರ್ಗದರ್ಶದಲ್ಲಿ, ಡಿವೈಎಸ್ಪಿ  ಬಾಲರಾಜ್ ಬಿ ಮೇಲ್ವಿಚಾರಣೆಯಲ್ಲಿ ಕೋಟೆ ಪಿಐ ರವಿ ಪಾಟೀಲ್ ನೇತೃತ್ವದ, ಪಿಎಸ್ಐಗಳಾದ ಕುಮಾರ್, ಸಿ ಆರ್ ಕೊಪ್ಪದ್, ಎಎಸ್ಐ ಟಿ. ಶ್ರೀಹರ್ಷ ಮತ್ತು ಸಿಬ್ಬಂಧಿಯಗಳಾದ ಹೆಚ್.ಸಿ ಅಣ್ಣಪ್ಪ, ನಾಗರಾಜ, ಪಿಸಿ ಆಂಜಿನಪ್ಪ, ಕಿಶೋರ ಮತ್ತು ಜಯಶ್ರೀ ರವರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ಜ.09 ರಂದು ಪ್ರಕರಣದ ಆರೋಪಿತನಾದ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ, ಜೈಪೂರ್ ಥಾಣಾ ಗ್ರಾಮದ ಅದಿತೋ ಮಾಜಿ @ ಆದಿತ್ಯಾ (37) ಈತನನ್ನು ದಸ್ತಗಿರಿ ಮಾಡಲಾಗಿದೆ.  ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ನಂತರ ದಿನಾಂಕಃ 17-01-2024 ರಂದು ಪುನಾಃ ಪೊಲೀಸ್‌ ವಶಕ್ಕೆ ಪಡೆದು ಆರೋಪಿತನಿಂದ ಕೊಲ್ಕತ್ತಾದಲ್ಲಿ ಅಂದಾಜು ಮೌಲ್ಯ 2,70,000/- ರೂಗಳ 45 ಗ್ರಾಂ ತೂಕದ ಬಂಗಾರದ ಆಭರಣ, ಹೈದರಾಬಾದ್ ಮತ್ತು ಸಿಕಂದರಬಾದ್ ನಲ್ಲಿ ಅಂದಾಜು ಮೌಲ್ಯ 5,75,000/- ರೂಗಳ ಒಟ್ಟು 85 ಗ್ರಾಂ ಬಂಗಾರ ಸೇರಿ ಒಟ್ಟು ಅಂದಾಜು ಮೌಲ್ಯ 8,45,000/- ರೂಗಳ 130 ಗ್ರಾಂ ತೂಕದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಎಸ್ಪಿ ಮಿಥುನ್ ಕುಮಾರ್ ಶ್ಲಾಘಿಸಿದ್ದಾರೆ.

ಇದನ್ನೂ ಓದಿ-https://suddilive.in/archives/7537

Related Articles

Leave a Reply

Your email address will not be published. Required fields are marked *

Back to top button