ಕೆಎಸ್ ಆರ್ ಟಿಸಿ ಬಸ್ ನಿಂದ ಬಿದ್ದು ಮಹಿಳೆ ಸಾವು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮಾಚೇನಹಳ್ಳಿಯ ಗ್ಲಾಸ್‌ಹೌಸ್ ಬಳಿ ಕೆಎಸ್ ಆರ್ ಟಿ ಸಿ ಬಸ್ ಹತ್ತಲು ಹೋದ ಮಹಿಳೆ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿದೆ.
ಮಾಚೇನಹಳ್ಳಿಯ ಗ್ಲಾಸ್ ಹೌಸ್ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಒಂದು ಕಡೆಯ ಸಂಚಾರವನ್ನಬಂದ್ ಮಾಡಲಾಗಿದೆ. ಈ ವೇಳೆ ಶಿವಮೊಗ್ಗ ಭದ್ರಾವತಿ ಬಸ್ ಗಾಗಿ ಕಾಯುತ್ತಿದ್ದ ರಾಜೇಶ್ವರಿಯವರು ಬಸ್ ಬರುತ್ತಿದ್ದಂತೆ ಬಸ್ ಹತ್ತಲು ಮುಂದಾಗಿದ್ದಾರೆ.
ಜನ ಹೆಚ್ಚಾಗಿದ್ದರಿಂದ ಕಂಡಕ್ಟರ್ ರೈಟ್ ಕೊಟ್ಟ ಕಾರಣ ಬಸ್ ಮೂವ್ ಆಗಿದೆ ರಾಜೇಶ್ವರಿ ಕೆಳಗೆ ಬಿದ್ದಿದ್ದಾರೆ. ರಾಜೇಶ್ವರಿ ಅವರ ಬಾಯಿ ಮತ್ತು ಕಿವಿಯಲ್ಲಿ ರಕ್ತಬಂದಿದೆ. ತಕ್ಷಣವೇ ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಅವರ ಸಾವನ್ನ ದೃಢಪಡಿಸಿದ್ದಾರೆ.
ರಾಜೇಶ್ವರಿಯವರ ಪತಿ ರಾಜೇಂದ್ರ ಮಬೆಯಲ್ಲೇ ಟೈಲರಿಂಗ್ ಮಾಡಿಕೊಂಡಿದ್ದು ರಾಜೇಶ್ವರಿಯವರು ಕಳೆದ ಎರಡು ತಿಂಗಳಿಂದ ಮಾಚೇನಹಳ್ಳಿಯಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದರು.
ಸಹೋದರಿ ವೆನಿಲಾರವರೊಂದಿಗೆ ಮಾಚೇನಹಳ್ಳಿಯಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ ರಾಜೇಶ್ವರಿ ಅ.12 ರಂದು ಕೆಲಸ ಮುಗಿಸಿಕೊಂಡು ವಾಪಾಸ್ ತಮ್ಮ ಊರಾದ ಭದ್ರಾವತಿಯ ಹೊಸಬುಳ್ಳಾಪುರಕ್ಕೆ ಹೋಗುವಾಗ ಕೆಎ 42 ಎಫ್ 2007 KSRTC ಬಸ್ ಹತ್ತುವಾಗ ಈ ದುರ್ಘಟನೆ ನಸಂಭವಿಸಿದೆ.
ಇದನ್ನೂ ಓದಿ-https://suddilive.in/archives/1241
