ಕ್ರೈಂ ನ್ಯೂಸ್

ಪೈಂಟ್ ಮಾಡಲು ಹೋದ ವ್ಯಕ್ತಿಗೆ ವಿದ್ಯುತ್ ಆಘಾತ!

ಪೈಂಟ್ ಹೊಡೆಯಲು ಹೋದ ವ್ಯಕ್ತಿಗೆ ವಿದ್ಯುತ್ ತಂತಿ ತಗುಲಿ ಎರಡು ಕೈ ಕಳೆದುಕೊಂಡಿದ್ದಾರೆ. ಇಕ್ಕಟ್ಟಿನ‌ ಜಾಗದಲ್ಲಿ ಸುರಕ್ಷತೆ ಇಲ್ಲದೆ ಪೈಂಟ್ ಹೊಡೆಯಲು ಹೇಳಿದ ಮನೆಯ ಮಾಲೀಕನ ವಿರುದ್ಧ ತಡವಾಗಿ ದೂರು ದಾಖಲಾಗಿದೆ

ಸುದ್ದಿಲೈವ್/ಶಿವಮೊಗ್ಗ ಜ.12

ಎಂಕೆಕೆ ರಸ್ತೆಯಲ್ಲಿರುವ ಮನೆಯೊಂದಕ್ಕೆ ಪೈಂಟ್ ಮಾಡಲು ಹೋಗಿ ವಿದ್ಯುತ್ ಶಾಕ್ ಹೊಡೆಸಿಕೊಂಡ ಪೈಂಟರ್ ಎರಡು ಕೈ ಕತ್ತರಿಸಲಾಗಿದೆ. ಸುರಕ್ಷತೆ ಇಲ್ಲದೆ ಪೈಂಟ್ ಹೊಡೆಯಲು ತಿಳಿಸಿದ ಮನೆಯ ಮಾಲೀಕನ ವಿರುದ್ಧ ದೂರು ದಾಖಲಾಗಿದೆ.

ಸೂಳೆಬೈಲಿನ ನಿವಾಸಿ ಏಜಾಜ್ ಅಹಮ್ಮದ್ ಪೈಂಟ್ ಕೆಲಸ ಮಾಡಿಕೊಂಡಿದ್ದು, ಜ.04 ರಂದು ನಗರದ ಎಂಕೆಕೆ ರಸ್ತೆಯಲ್ಲಿರುವ ನಿಜಾಮುದ್ದಿನ್ @ ಶೌಕತ್ ಇವರ ಮನೆಗೆ ಪೈಂಟ್  ಕೆಲಸ ಮಾಡಲು ಹೋಗಿದ್ದರು. ಜ.04 ರಂದು ಗುರುವಾರ ಮದ್ಯಾಹ್ನ 03.45 ಗಂಟೆ ಸಮಯದಲ್ಲಿ ನಿಜಾಮುದ್ದಿನ್ ರವರ ಮನೆಯ ಹೊರಭಾಗದಲ್ಲಿ ಗೋಡೆಗೆ ಪೈಂಟ್ ಮಾಡುತ್ತಿದ್ದ ವೇಳೆ ಮೇಲ್ಬಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಗಾಳಿ ಬಂದ ಕಾರಣ ಎಜಾಜ್ ಗೆ ತಾಗಿ ವಿದ್ಯುತ್ ಅಪಘಾತ ಸಂಭವಿಸಿತ್ತು.

ಇದರಿಂದ ಎಜಾಜ್ ಸಂಪೂರ್ಣ ಸುಟ್ಟು ಗಾಯಗೊಂಡಿದ್ದರು. ಇದರಿಂದ ಏಜಾಜ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನ ನಂತರ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಗಿತ್ತು. ವಿದ್ಯುತ್ ಶಾಕ್ ನಿಂದ ಏಜಾಜ್ ಗೆ ಎರಡೂ ಕೈಗಳನ್ನು ಕತ್ತರಿಸಿ ತೆಗೆಯಲಾಗಿದೆ . ಲಿವರ್ ಡ್ಯಾಮೇಜ್ ಆಗಿ ಅದಕ್ಕೂ ಚಿಕಿತ್ಸೆ ನೀಲಾಗುತ್ತಿದೆ.

ಮನೆಯ ಹೊರಭಾಗದ ಗೋಡೆಯ ಪಕ್ಕದಲ್ಲಿಯೇ ವಿದ್ಯುತ್ ತಂತಿ ಇರುವುದರಿಂದ ಅಲ್ಲಿ ಪೈಂಟ್ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರೂ ಸಹ ಮನೆ ಮಾಲೀಕರಾದ ಬಲವಂತ ಮಾಡಿ  ಒಂದು ಸ್ಟೀಲ್ ಪೈಪನ್ನು ತಂದು ಅದಕ್ಕೆ ಬಟ್ಟೆಯನ್ನು ಕಟ್ಟಿ ಇದರಲ್ಲಿ ಪೈಂಟ್ ಮಾಡಲು ತಿಳಿಸಿದ್ದು, ಇದರಿಂದ ಪೈಂಟ್ ಮಾಡಲು ಮುಂದಾದ ಏಜಾಜ್  ಗೆ ವಿದ್ಯುತ್ ಅವಘಡ ಸಂಭವಿಸಿದೆ.

ಏಜಾಜ್ ನ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಒಪ್ಪಿಕೊಂಡಿದ್ದ ಮನೆಯ ಮಾಲೀಕರು ಭರಿಸದ ಕಾರಣ ತಡವಾಗಿ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/6669

Related Articles

Leave a Reply

Your email address will not be published. Required fields are marked *

Back to top button