ರಾಜಕೀಯ ಸುದ್ದಿಗಳು

ನಮ್ಮದೇ ಜನಪ್ರತಿನಿಧಿಗಳನ್ನ ಆಯ್ಕೆ ಮಾಡ್ತೇವೆ-ಭಾನುಪ್ರಸಾದ್

ಸುದ್ದಿಲೈವ್/ಶಿವಮೊಗ್ಗ

ಒಳ ಮೀಸಲಾತಿ ಜಾರಿಗೊಳಿಸ ಬೇಕಾದ ಜಾಗದಲ್ಲಿ ರಾಜಕಾರಣ ನಡೆಯುತ್ತಿದೆ ಎಂದು ಜಿಲ್ಲಾ ಹೊಲೆ-ಮಾದಿಗ ಜಾತಿಗಳ ರಕ್ಷಣಾ ಸಮಿತಿ ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಭಾನುಪ್ರಸಾದ್ 2012 ರ ಬಿಜೆಪಿಯ ಸದಾನಂದ ಗೌಡ ಸಿಎಂ ಆಗಿದ್ದಾಗ 341 ಅನುಚ್ಛೇಧವನ್ನ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು.

ಬಿಜೆಪಿ ತನ್ನ ತೆಕ್ಕೆಯಲ್ಲಿಯೇ ನಡೆಸಬಹುದಾದ ಜವಬ್ದಾರಿ ತೋರುವ ಜಾಗದಲ್ಲಿ ಬೇಜವಬ್ದಾರಿ ತನತೋರಿ ನಿರ್ಲಕ್ಷಿಸಿದೆ. ಇಷ್ಟಾದರೂ ಇಲ್ಲಿಯವರೆಗೆ ಒಳ ಮೀಸಲಾತಿಯ ಬಗ್ಗೆ ಚಕಾರ ಎತ್ತಲಿಲ್ಲ. ಉಷ ಮೆಹರವರು ಸದಾಶಿವ ಆಯೋಗವನ್ನ ತೆಗೆದು ಹಾಕಿರುವುದಾಗಿ ಈಗ ಸ್ಪಷ್ಟಪಡಿಸಿದ್ದಾರೆ.

2022 ರಲ್ಲಿ ಪಾದಯಾತ್ರೆ ಮಾಡಿದಾಗ ನಾರಾಯಣ ಸ್ವಾಮಿ ನೇತೃತ್ವದಲ್ಲಿ ವರದಿ ಮಾಡಿ ಎಕೆ ಸಮುದಾಯವನ್ನ ಮಾದಿಗ ಸಮುದಾಯಕ್ಕೆ  ಸೇರ್ಪಡಿಸಿ ಗೊಂದಲ ಮಾಡಿತ್ತು. ಎಬಿಸಿಡಿ ಕ್ಲಾಸಿಫಿಕೇಷನ್  ಸರಿಯಿಲ್ಲ ಎಂಬ ವಿಷಯದ ಬಗ್ಗೆ ಸಮಿತಿ ಹೋರಾಟ ಮಾಡಿತ್ತು.

ಮತ್ತೆ ಅದೇ ಇಸವಿಯಲ್ಲಿ ಸರಿಪಡಿಸಲು ಮುಂದಾದ ಸರ್ಕಾರ ಗೊಂದಲವನ್ನ ಹಾಗೆ ಉಳಿಸಿಕೊಂಡು  ಶಿಫಾರಸು ಮಾಡಲಾಗಿತ್ತು. ಪತ್ರ ವ್ಯವಹಾರದಲ್ಲಿ ಎರಡೂ ಪಕ್ಷಗಳು ರಾಜಕಾರಣ ಮಾಡಿಕೊಂಡು ಬಂದಿರುವುದನ್ನ ಪ್ರಶ್ನಿಸಿದ ಭಾನುಪ್ರಸಾದ್ ಸುಪ್ರೀಂ ನಲ್ಲಿರುವುದನ್ನ ಸಬ್ಜುರೈಸ್ಡ್ ಆಗೊಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇಡಬ್ಲೂಎಸ್ ಪ್ರಕರಣವೂ ಸುಪ್ರೀಂ ನಲ್ಲಿದ್ದಾಗ ಸಬ್ಜುರೈಸ್ಡ್ ಮಾಡಿ ಜಾರಿಗೆ ತರಲಾಯಿತು.

ಈಗ ದಲಿತ ವಿಷಯ ಬಂದಾಗ ಒಂದು ನಿಲುವು ಎಡಬ್ಲುಎಸ್ ವಿಷಯ ಇದ್ದಾಗ ಮತ್ತೊಂದು ನಿಲುವು ತಾಳುವ ಸರ್ಕಾರ ಚುನಾವಣೆಗಾಗಿ ಮತ್ರ ದಲಿತ ಮತಬ್ಯಾಂಕ್ ಬಳಸಿಕೊಂಡಿದೆ ಎಂಬ ಆರೋಪ ಮಾಡಿದರು. ಹಾಗಾಗಿ ಇನ್ನು ಮುಂದೆ ದಲಿತ ಸಮುದಾಯದ ಮತಬ್ಯಾಂಕ್ ನಿಂದಲೇ ಜನಪ್ರತಿನಿಧಿಗಳನ್ನ ಸ್ಪರ್ಧಿಸಿ ಚುನಾವಣೆ ಎದುರಿಸಲಾಗುವುದು ಎಂದು ಎಚ್ಚರಿಸಿದರು.

ಸದಾಶಿವ ಆಯೋಗದ ವರದಿ ಮತ್ತು ಕಾಂತರಾಜ ವರದಿ ಬಗ್ಗೆ ವಿಚಾರ ಸಂಕೀರ್ಣ ನಡೆಸಲಾಗುವುದು.  ಜ.28 ರಂದು ಶಿವಮೊಗ್ಗದಲ್ಲಿ ನಡೆಸಲಾಗುತ್ತಿದೆ. ಆದರೆ ಸ್ಥಳ ಇನ್ನೂ ನಿಗದಿಯಾಗಿಲ್ಲ. ಸಂಪನ್ಮೂಲ ವ್ಯಕ್ತಿಗಳಾಗಿ ರಾಜಕೀಯೇತರ ವ್ಯಕ್ತಿಗಳನ್ನ ಕರೆಯಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/7246

Related Articles

Leave a Reply

Your email address will not be published. Required fields are marked *

Back to top button