ಸ್ಥಳೀಯ ಸುದ್ದಿಗಳು

ಕ್ಯಾರೆ ಎನ್ನದ ಶಾಹೀ ಸಂಸ್ಥೆ ಮಾಧ್ಯಮಗೋಷ್ಠಿ ನಡೆಸಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ದಿಡೀರ್ ಅಂತ ಶಾಹೀ ಎಕ್ಸಪೋರ್ಟ್ಸ್ ಗೆ ಮಧ್ಯಮಗಳು, ಮಾಧ್ಯಮಗಳಲ್ಲಿ ಅವರ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಪ್ರಚಾರ ಪಡಿಸುವ ಬಗ್ಗೆ ನೆನಪಾಗಿರುವುದು ನೋಡಿ ಅಚ್ಚರಿಯಾಗಿದೆ.

ಕಳೆದ 12 ವರ್ಷದಿಂದ ಈ ಶಾಹೀ ಎಕ್ಸಪೋರ್ಟ್ಸ್ ಕಂಪನಿಗೆ ಮಾಧ್ಯಮಗಳು ಕಣ್ಣಿಗೆ ಗೋಚರಿಸಿರಲಿಲ್ಲ. ಇತ್ತೀಚೆಗೆ ಮಲವಗೊಪ್ಪದಲ್ಲಿ ರೈತರು ಶಾಹೀ ಗಾರ್ಮೆಂಟ್ಸ್ ವಿರುದ್ಧ ದೂರು ನೀಡಿದ್ದರು, ದೂರು ಪರಿಸರ ಇಲಾಖೆ ಸಚಿವರಿಗೆ ತಲುಪಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಶಾಹೀ ಎಕ್ಸಪೋರ್ಟ್ ಸಂಸ್ಥೆ ದಿಡೀರ್ ಅಂತ ಮಾಧ್ಯಮ ಗೋಷ್ಠಿ ನಡೆಸಿ 14 ಅಂಗನವಾಡಿ ಕೇಂದ್ರಗಳಲ್ಲಿ ಸೈಕಲ್, ಮತ್ತು ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ದಾನ ಧರ್ಮಕ್ಕೆ ಮುಂದಾಗಿವೆ.

ಇವೆಲ್ಲವೂ ಉತ್ತಮ ಕಾರ್ಯಗಳೆ, ಬಿಜೆಪಿ ಸರ್ಕಾರವಿದ್ದಾಗ ದಿಮ್ಮರಂಗ ಎಂದು ಓಡಾಡುವ ಸಂಸ್ಥೆ ದಿಡೀರ್ ಅಂತ ಮಾಧ್ಯಮಗಳ ಮುಂದೆ ಬಂದು ಸುದ್ದಿಗೋಷ್ಠಿ ನೆಡೆಸಿದೆ. ಇದೇ 2021-22 ನೇ ಸಾಲಿನಲ್ಲಿ ದುಮ್ಮಳ್ಳಿಯ ದೇವಸ್ಥಾನದಲ್ಲಿ ಸಂಸ್ಥೆಯ ಕೆಲ ನೌಕರರನ್ನ ಕೂಡಿಹಾಕಿ ನಾಲೆಗಳಲ್ಲಿ ಕಲೂಷಿತ ನೀರು ಬಿಡದಂತೆ ಬಿಗಿ ಮಾಡಲಾಗಿತ್ತು. ಆ ವಿಷಯ ದೊಡ್ಡಮಟ್ಟದಲ್ಲಿ ಸುದ್ದಿ ಆಗಿತ್ತು. ಆದರೆ ಕೊನೆಗೆ ಸಂಸ್ಥೆ ಕ್ಯಾರೆ ಎನ್ನಲಿಲ್ಲ.

2017 ರಲ್ಲಿ ರೈತರು ಕಾಡಾ ಮುಂದೆ ಬಂದು ಪ್ರತಿಭಟಿಸಿ ಕೆರೆ ನೀರುಗಳು ಕಲೂಷಿತಗೊಂಡು ಜಲಚರ ಪ್ರಾಣಿಗಳು ಸತ್ತುಹೋಗಿದ್ದವು. ಈ ಬಗ್ಗೆ ಕಾಡಾ‌ ಅಧ್ಯಕ್ಷರೇ ಶಾಹೀಗೆ ನೋಟೀಸ್ ನೀಡಿದ್ದರು. ಆಗಲೂ ಸಂಸ್ಥೆ ಕ್ಯಾರೆ ಎನ್ನಲಿಲ್ಲ. ರೈತರು ಹೋರಾಟ ಮಾಡಿ ಗ್ರಾಮಪಂಚಾಯಿತಿಯ ಕಟಕಟ್ಟೆಗೆ ತಂದು ನಿಲ್ಲಿಸಿದಾಗ ಗ್ರಾಮ ಪಂಚಾಯಿತಿಗೆ ಕೆರೆ ನೀರನ್ನ ಸರಿಪಡಿದುವುದಾಗಿ ಹಾಗೂ ಕಲೂಷಿತಗೊಳ್ಳದಂತೆ ಎಚ್ಚರ ವಹಿಸುವುದಾಗಿ ಲಿಖಿತ ಭರವಸೆ ನೀಡಿತ್ತು. ಆದರೂ ಕ್ರಾಮವಾಗಿರಲಿಲ್ಲ. ಲಿಖಿತ ಭರವೆ ಕೊಟ್ಟಿದ್ದ ಶಾಹೀ ಸಂಸ್ಥೆ ಸ್ಥಳೀಯರ ಆರೋಪವನ್ನ ನಿರ್ಲಕ್ಷಿಸಿ ತಮ್ಮ ಕೆಲಸವನ್ನ ಮುಂದುವರೆಸಿತ್ತು.

ಸರ್ಕಾರ ಬದಲಾದಾಗ ಶಾಹೀ ಗಾರ್ಮೆಂಟ್ಸ್ ಮುಂಭಾಗದಲ್ಲಿ ರೈತರ ಪ್ರತಿಭಟನೆ ಮಾಡಿದ್ರು, ಅಚ್ಚುಕಟ್ಟು ಪ್ರದೇಶದಲ್ಲಿ ಕೆರೆ ನೀರು ಕಲೂಷಿತಗೊಳ್ಳಲು ಶಾಹೀ ಗಾರ್ಮೆಂಟ್ಸ್ ಎಂದು ಪ್ರತಿಭಟಿಸಲಾಗಿತ್ತು. ಜಿಲ್ಲಾಧಿಕಾರಿಗಳು ಈ ಬಗ್ಗೆ ನಾಲ್ಕು ನೋಟೀಸ್ ಜಾರಿ ಮಾಡಲಾಗಿತ್ತು. ಇವೆಲ್ಲವನ್ನೂ ಸಂಸ್ಥೆ ತದನಂತರ ಅಳವಡಿಸಿಕೊಳ್ಳದೆ ನಿರ್ಲಕ್ಷಿಸಿದ್ದರು.

ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಶಾಹೀ ಸಂಸ್ಥೆಗೆ ಪತ್ರಕರ್ತರು ಪ್ರಶ್ನಿಸಿದ್ದರು. ಅದರಲ್ಲಿ ಭಾಗಹಿಸಿದ್ದ ಸಂಸ್ಥೆಯ ಅಧಿಕಾರಿ ನಾನು ಬಂದು ನಾಲ್ಕು ತಿಂಗಳಾಗಿದೆ. ಒಂದೊಂದಾಗಿ ಸರಿಪಡಿಸುವ ಭರವಸೆ ನೀಡಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದಾರೆ. ಇವರು ಏನೇ ಮಾಡಲಿ ಒಂದೊಂದೆ ಸರಿಪಡಿಸುವ ಭರವಸೆ ನೀಡಿದ್ದು ಯಾಕೆ?

ಅಂದರೆ ಈ ಹಿಂದೆ ಯಾವುದೂ ಸರಿಯಿಲ್ಲವೆಂಬ ಸತ್ಯ ಅವರ ಬಾಯಿಯಿಂದಲೇ ಹೊರಬಿದ್ದಿದೆ. ಇಲ್ಲಿನ ರೈತರು ಸಹ ಶಾಹೀ ಗಾರ್ಮೆಂಟ್ಸ್ ನ್ನ ಓಡಿಸುವ ಉದ್ದೇಶದಿಂದ ಆಕ್ಷೇಪಿಸುತ್ತಿರಲಿಲ್ಲ. ಆದರೆ ಕೆರೆ ಸಮಿತಿಯವರನ್ನ ಕರೆಯಿಸಿ ಬಹಿರಂಗ ಸಭೆ ನಡೆಸಲಿ ಚರ್ಚೆಯಲ್ಲಿ ತೀರ್ಮಾನವಾಗುವ ಅಂಶವನ್ನ ಅವರು ಪಾಲಿಸಲಿ ಅಷ್ಟೆ ಎಂಬುದು ರೈತರ ಅಹವಾಲಾಗಿದೆ. ಇಷ್ಟನ್ನೂ ಮಾಡದ ಸಂಸ್ಥೆ, ಜಿಲ್ಲಾಡಳಿತದ ನೋಟೀಸ್ ಗಳನ್ನೇ ನಿರ್ಲಕ್ಷಿಸಿ, ಕೊಟ್ಟಿರುವ ಭರವಸೆಗಳನ್ನೇ ಗಾಳಿಗೆ ತೂರಿ ತಮ್ಮ ಕಾರ್ಯದಲ್ಲಿ ಮುಂದುವರೆಯುವುದು ಎಂದರೆ ದಾಷ್ಟ್ಯತನದ ಪರಮಾವಧಿಯಾಗುವುದಿಲ್ಲವೇ?

ಮಕ್ಕಳಿಗೆ ಸೈಕಲ್, ಪೆನ್ಸಿಲ್, ರಬ್ಬರ್ ಏನೆ‌ ಹಂಚಲಿ, ಅದರ ಜೊತೆಗೆ ಅವರ ಫ್ಯಾಕ್ಟರಿ ಮಾಡುತ್ತಿರುವ ಅವಾಂತರದ ಬಗ್ಗೆ ಮೊದಲು ಕ್ರಮ ವಹಿಸಲಿ. ಇವರ ತಾಳಕ್ಕೆ ತಕ್ಕಂತೆ ಕೆಲ ಅಧಿಕಾರಿಗಳು ಕುಣಿಯುವುದನ್ನೂ ನೋಡಿದ್ದೇವೆ. ಸಮಸ್ಯೆ ಆರಂಭವಾದರೆ ಇಲ್ಲಿ ಕೆಲವರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಇವೆಲ್ಲವೂ ಬಂದ್ ಆಗಲಿ, ಕಾನೂನಿನ ರೀತಿ ನಡೆದುಕೊಳ್ಳಲಿ.

ಇದನ್ನೂ ಓದಿ-https://suddilive.in/archives/9306

Related Articles

Leave a Reply

Your email address will not be published. Required fields are marked *

Back to top button