ಸ್ಥಳೀಯ ಸುದ್ದಿಗಳು

ಸರ್ವಂ ರಾಮಮಯಂ-ಶ್ರೀನಿವಾಸ ಆರ್ಟ್ಸ್ ಫುಲ್ ರಶ್

ಸುದ್ದಿಲೈವ್/ಶಿವಮೊಗ್ಗ

ಅಯೋಧ್ಯೆಗೂ ಶಿವಮೊಗ್ಗಕ್ಕೂ ಎತ್ತಣ ಎತ್ತಣ ಸಂಬಂಧವಯ್ಯ? ಎಂದು ಕೇಳುವ ಹಾಗಿಲ್ಲ. ಯಾಕೆಂದರೆ ಈಗ ಜಗತ್ತೇ ವಸುದೈವ ಕುಟುಂಬಂ ಎನ್ನುವ ಹಾಗೆ ಇದೆ. ಹಾಗಾಗಿ ನಾಳೆಯ ಬಾಲ ರಾಮನ ಪ್ರತಿಷ್ಠಾಪನೆ ಮತ್ತು ಅಯೋಧ್ಯ ರಾಮ ಮಂದಿರ ಲೋಕಾರ್ಪಣೆಗೆ ದೇಶದ ಪ್ರತಿ ಹಳ್ಳಿಯೂ ಸಂಭ್ರಮ ಸಡಗರದೊಂದಿಗೆ ಸಂಭ್ರಮಿಸುತ್ತಿವೆ.

ರಾಮ ಮಂದಿರ ಉದ್ಘಾಟನೆ ಅಯೋಧ್ಯೆಯಲ್ಲಿಯಾದರೆ ನಾಳೆ ಫ್ಲೆಕ್ಸುಗಳು ಶಿವಮೊಗ್ಗದ ಗಲ್ಲಿ ಗಲ್ಲಿಗಳು ರಾರಾಜಿಸಲಿವೆ. ಶುಭಕೋರುವ ಫ್ಲೆಕ್ಸುಗಳು ನಾಳೆ ಎಷ್ಟು ಬೀಳಲಿದೆ ಎಂಬುದು ಗೊತ್ತಿಲ್ಲ. ಆದರೆ ಶಿವಮೊಗ್ಗದ ಬಹುತೇಕ ಆರ್ಟ್ಸ್ ಗಳು ಫುಲ್ ರಶ್ ಆಗಿವೆ.‌

ರಿಪ್ಪನ್ ಪೇಟೆ, ಸಾಗರ, ಸೊರಬ ಮತ್ತು ಶಿವಮೊಗ್ಗದಿಂದ ನಗರದ ದುರ್ಗಿಗುಡಿಯಲ್ಲಿರುವ ಶ್ರೀನಿವಾಸ್ ಆರ್ಟ್ಸ್ ಗೆ ದಾವಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಪ್ಲೆಕ್ಸ್ ಪ್ರಿಟಿಂಗ್ ಮಿಷನ್‌ ಫುಲ್ ರಶ್ ಆಗಿವೆ. ಅದೂ ಅಧಿಕ ಹಣ ಕೊಟ್ಟು ಫ್ಲೆಕ್ಸ್ ಬಂಟಿಂಗ್ಸ್ ಮಾಡಲು ಜನ ತಾ ಮುಂದು ನಾ ಮುಂದು ಎಂದು ಮುಂದಾಗಿದ್ದಾರೆ.

ಈ ಕುರಿತು ಸುದ್ದಿಲೈವ್ ನೊಂದಿಗೆ ಮತನಾಡಿದ ಶ್ರೀನಿವಾಸ್ ಆರ್ಟ್ಸ್ ಮಾಲೀಕ ಶ್ರೀನಿವಾಸ್ ಕಳೆದ ಮೂರು ದಿನಗಳಿಂದ ಭರ್ಜರಿ ಫ್ಲೆಕ್ಸ್ ಪ್ರಿಂಟ್ ಹಾಕಿದ್ದೀವಿ, ಕಳೆದ ನಾಲ್ಕು ದಿನಗಳಿಂದ 3-4 ಸಾವಿರ ಫ್ಲೆಕ್ಸ್ ಹೊಡೆದಿದ್ದೇವೆ. ಜನ ಮಾತ್ರ ಕಡಿಮೆಯಾಗುತ್ತಿಲ್ಲ.

ಈ ರೀತಿಯ ಫ್ಲೆಕ್ಸ್ ಗಣೇಶನ ಹಬ್ಬದ ಸಮಯದಲ್ಲಿ ಹೊಡೆಯುತ್ತಿದ್ದೆವು. ಆದರೆ ಈಗ ಅಯೋಧ್ಯ ರಾಮನ ಶುಭಕೋರುವ ಫ್ಲೆಕ್ಸ್ ಗಳು ಗಣೇಶ ಹಬ್ಬವನ್ನೂ ಮೀರಿಸಿ ದುಪ್ಪಟ್ಟು ಪ್ರಿಂಟ್ ಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಹಾಗಾದರೆ ನಾಳೆ ಎಷ್ಟೆಷ್ಟು ಫ್ಲೆಕ್ಸ್ ಬೀಳಲಿದೆ ಕಾದು‌ನೋಡಬೇಕಿದೆ.

ಸರ್ವಂ ರಾಮ ಮಯಂ

ಸೋಷಿಯಲ್ ಮೀಡಿಯಾ, ಟೀವಿ ಪೇಪರ್ ಗಳಲ್ಲಿ ಅಯೋಧ್ಯ ರಾಮಮಂದಿರ ಉದ್ಘಾಟನೆಯ ಸುದ್ದಿಗಳೇ.. ಸೋಷಿಯಲ್ ಮೀಡಿಯಾದಲ್ಲಿ ರಾಮಲಲ್ಲಾನ ಫೋಟೋಗಳನ್ನ, ಮೋದಿ ನಾಳೆಯ ಪೂಜೆಗೆ ಸಿದ್ದಗೊಳ್ಳುತ್ತಿರುವ ಮತ್ತು ಸ್ನಾನ‌ಮಾಡುತ್ತಿರುವ‌ ಫೋಟೊಗಳು, ಅಡಿಕೆಯಲ್ಲಿ ಕನಕದಾಸರಿಗೆ ರಾಮ ಕಾಣಿಸಿದ ಫೊಟೊಗಳು ಸೋಷಿಯಲ್ ಮೀಡಿಯಾದಲ್ಲಿ
ರಾರಾಜಿಸುತ್ತಿವೆ.

ಇದನ್ನೂ ಓದಿ-https://suddilive.in/archives/7342

Related Articles

Leave a Reply

Your email address will not be published. Required fields are marked *

Back to top button