ಸ್ಥಳೀಯ ಸುದ್ದಿಗಳು

ಶ್ರೀ ಕೋಟೆ ಮಾರಿಕಾಂಬ ಸೇವಾ ಸಮಿತಿ ಪದಾಧಿಕಾರಿಯ ವಾಟ್ಸಪ್ ಗ್ರೂಪ್ ಗೆ ಬಂದ ಸಂದೇಶ, ದಾಖಲಾಯಿತು ದೂರು

ಸುದ್ದಿಲೈವ್/ಶಿವಮೊಗ್ಗ

ಮಾರಿ ಜಾತ್ರೆಗೆ ಇಡೀ ನಗರ ಸಜ್ಜುಗೊಂಡಿದೆ. ಮಾರಿ ಹಬ್ಬವನ್ನ ವಿಜ್ರಂಭಣೆಯಿಂದ ಆಚರಿಸಲು ಸಮಿತಿ ನಗರದಲ್ಲಿ ಹಲವು ಅಲಂಕಾರಗಳನ್ನ ನಿರ್ಮಿಸುತ್ತಿದೆ. ಗಾಂಧಿಬಜಾರ್ ನ ಪ್ರವೇಶ ದ್ವಾರ ಈಗ ಸೆಲ್ಫಿ ಹಾಟ್ ಸ್ಟಾಟ್ ಆಗಿದೆ. ಅದರಂತೆ ಕೋಟೆ ಮಾರಿಕಾಂಬ ದೇವಿ ಜಾತ್ರ ಮಹೋತ್ಸವವು ಸುಗಮವಾಗಿ ಸಾಗಲೆಂದು ಸುಮೋಟೋ ಪ್ರಕರಣವೂಂದು ಸಹ ದಾಖಲಾಗಿದೆ.

ಶ್ರೀ ಕೋಟೆ ಮಾರಿಕಾಂಬ ಸೇವಾ ಸಮಿತಿ ಪದಾಧಿಕಾರಿಯಾಗಿರುವ ಪ್ರಭಾಕರ್ ಯಾನೆ ಗುಂಡರವರ ಮೊಬೈಲ್ ನ ಜ್ಞಾನೇಶ್ವರಿ ಗೋಶಾಲೆ ವಾಟ್ಸಪ್ ಗ್ರೂಪ್ ನಲ್ಲಿ ಒಂದು ಪಠ್ಯ ಸಂದೇಶ ಬಂದಿದೆ.

ಸಂದೇಶದಲ್ಲಿ “ಸಮಸ್ತ ಹಿಂದೂ ಬಾಂಧವರೇ, “ಶಿವಮೊಗ್ಗದ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು” ಇದೇ ತಿಂಗಳ ದಿನಾಂಕ 12 ರಿಂದ 16 ರ ತನಕ ನಡೆಯಲಿದೆ. ಈ ಜಾತ್ರೆಗೆ ರಾಜ್ಯದಾದ್ಯಂತ ಲಕ್ಷಾಂತರ ಭಕ್ತರು ಕುಟುಂಬ ಸಮೇತ ಬಂದು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ದೇವಿಗೆ ಹೂವು, ಹಣ್ಣು, ಕಾಯಿ, ಪೂಜೆ ಮಾಡಿಸಿ ನಂತರ ಅರಿಶಿನ, ಕುಂಕುಮ, ಬಳಿ, ಅಕ್ಕಿ, ಬೆಲ್ಲ, ಕೊಬ್ಬರಿ, ಸಮೇತ ಅತ್ಯಂತ ಶ್ರದ್ಧಾ ಭಕ್ತಿ ಪೂರ್ವಕವಾಗಿ ಮಡಲಕ್ಕಿ ಸಮರ್ಪಣೆ ಮಾಡುತ್ತಾರೆ.

ಇಂತಹ ಸಂದರ್ಭದಲ್ಲಿ ನಮ್ಮ ಹಿಂದೂ ದೇವಾನುದೇವತೆಗಳನ್ನು ಪೂಜಿಸುವ ನಮ್ಮ ದೇವರುಗಳ ಬಗ್ಗೆ, ನಮ್ಮ ಸನಾತನ ಧರ್ಮದ ಬಗ್ಗೆ ನಂಬಿಕೆ, ಶ್ರದ್ಧೆ, ಭಕ್ತಿ, ಗೌರವ ಇರುವವರ ಬಳಿಯೇ ವ್ಯಾಪಾರ ಮಾಡಬೇಕಾಗಿ ವಿನಂತಿ, ಹಿಂದೂ ಧರ್ಮ ವಿರೋಧಿಗಳ ಹತ್ತಿರ ಯಾವುದೇ ಕಾರಣಕ್ಕೂ ಯಾವುದೇ ವಸ್ತುಗಳನ್ನು ತೆಗೆದು ಕೊಳ್ಳಬಾರದು, ವಿಶೇಷವಾಗಿ ಶಿವಮೊಗ್ಗ ನಗರದ “ಹಿಂದೂ ಸಂಘಟನೆಗಳ ಮುಖಂಡರು” ಗಳಲ್ಲಿ, ವಿಶೇಷವಾದ ಮನವಿ, ಕಳೆದ ಬಾರಿ ನಡೆದ ಶಿವಮೊಗ್ಗ, ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಹಿಂದೂ ಧರ್ಮದ ವಿರೋಧಿಗಳಿಗೆ ಒಂದೇ ಒಂದು ಅಂಗಡಿಗಳನ್ನು ಹಾಕುವುದಕ್ಕೆ ಹಿಂದೂ ಸಂಘಟನೆಗಳ ಮುಖಂಡರುಗಳು ಅವಕಾಶ ಮಾಡಿ ಕೊಡಲಿಲ್ಲ.

ಇದರಿಂದ ಜಾತ್ರೆಯಲ್ಲಿ ಯಾವುದೇ ಕಳ್ಳತನ ವಾಗಲಿ, ಹಿಂದೂ ಸಹೋದರಿಯರಿಗೆ ಚುಡಾಯಿಸುವುದಾಗಲಿ, ಯಾವುದೇ ರೀತಿಯ ಗೊಂದಲವಿಲ್ಲದೇ ಐದು ದಿನಗಳ ಕಾಲ ಜಾತ್ರೆಯು ಹಿಂದೂ ಮುಖಂಡರ ಗಟ್ಟಿ ನಿರ್ಧಾರಕ್ಕೆ ಬೆಂಬಲವಾಗಿ ಹಿಂದೂ ಸಮಾಜದ ಪ್ರತಿಯೊಬ್ಬರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಸಡಗರದ ಸಂಭ್ರಮದಿಂದ ನಡೆಯಿತು.

ಇದು ರಾಜ್ಯದಲ್ಲಿಯೇ ದೊಡ್ಡ ಇತಿಹಾಸವೇ ಸರಿ, ವಿಶೇಷವಾಗಿ ಶ್ರೀ ಮಾರಿಕಾಂಬಾ ಸಮಿತಿಯವರಿಗೂ, ವಿಶೇಷ ಕಾರಣೀಭೂತರಾದ ಶಿವಮೊಗ್ಗದ ಹಿಂದೂ ಸಂಘಟನೆಗಳ ಮುಖಂಡರಿಗೆ ಅಭಿನಂದನೆಗಳು, ಕಳೆದ ಬಾರಿಯಂತೆ ಈ ಬಾರಿಯೂ ಮತ್ತೊಮ್ಮೆ ಶಿವಮೊಗ್ಗ ನಗರದ ಹಿಂದೂ ಸಂಘಟನೆಗಳ ಮುಖಂಡರಿಗೆ ನಮ್ಮ ಮನವಿ ಏನೆಂದರೆ. ಈ ಸಲವೂ ನಡೆಯುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಹಿಂದೂಗಳ ಜಾತ್ರೆಗಳಲ್ಲಿ ಹಿಂದೂಗಳೇ ವ್ಯಾಪಾರ ಮಾಡಲಿ,

ಯಾವುದೇ ಕಾರಣಕ್ಕೂ ಹಲಾಲ್ ಜಿಹಾದಿಗಳಿಗೆ, ಹಿಂದೂ ಧರ್ಮದ ವಿರೋಧಿಗಳಿಗೆ ಅಂಗಡಿಗಳನ್ನು ಹಾಕುವುದಕ್ಕೆ, ವ್ಯವಹಾರ ಮಾಡಲಿಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿ ಕೊಡಬಾರದೆಂದು ವಿನಂತಿ. ನಿಮ್ಮ ಬೆಂಬಲಕ್ಕೆ ಇಡೀ ಹಿಂದೂ ಸಮಾಜ ತನು ಮನ ಧನ ದೊಂದಿಗೆ ಇರುತ್ತದೆ” ಎಂಬುದಾಗಿ ಪಠ್ಯಸಂದೇಶವಾಗಿತ್ತು.

ಜ್ಞಾನೇಶ್ವರಿ ಗೋಶಾಲೆ ವಾಟ್ಸಪ್ ಗ್ರೂಪ್ ನಲ್ಲಿ ರವಿ ಕುಮಾರ್ ಎಂಬುವರಿಂದ ಮೆಸೇಜ್ ಬಂದಿದ್ದು, ಹಿಂದೂ ವರ್ಗಗಳ ಮೇಲೆ ಇತರ ವರ್ಗಗಳ ದ್ವೇಷ ಮತ್ತು ವೈಮನಸ್ಸನ್ನು ಉಂಟು ಮಾಡುವ ಹೇಳಿಕೆಗಳನ್ನು ವಾಟ್ಸಾಪ್ ಸಂದೇಶದಲ್ಲಿ ಹರಿಬಿಟ್ಟಿದ್ದು, ಪ್ರಭಾಕರ್ ಅವರು ಕೋಟೆ ಠಾಣೆ ಪೊಲೀಸರಿಗೆ ಮೆಸೇಜ್ ನ ಸಂದೇಶ ರವಾನಿಸಿದ್ದಾರೆ.‌ ಇದರ ಮೇಲೆ ಕೋಟೆ ಪೊಲೀಸರು‌ ರವಿ ಮತ್ತು ಇತರರ ಮೇಲೆ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/10449

Related Articles

Leave a Reply

Your email address will not be published. Required fields are marked *

Back to top button